Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಇತರರಿಗೆ ಮಾದರಿಯಾದ ಬೀದರ್‌ನ ಬರದ...

ಇತರರಿಗೆ ಮಾದರಿಯಾದ ಬೀದರ್‌ನ ಬರದ ವಿರುದ್ಧ ರಕ್ಷಣಾ ಕ್ರಮ

ವಾರ್ತಾಭಾರತಿವಾರ್ತಾಭಾರತಿ2 Jun 2016 8:41 PM IST
share
ಇತರರಿಗೆ ಮಾದರಿಯಾದ ಬೀದರ್‌ನ ಬರದ ವಿರುದ್ಧ ರಕ್ಷಣಾ ಕ್ರಮ

ಬೀದರ್,ಜೂ.2: ಇತಿಹಾಸದಲ್ಲಿ ಕಂಡು ಕೇಳರಿಯದ ಭೀಕರ ಬರಕ್ಕೆ ಗುರಿಯಾಗಿರುವ ರಾಜ್ಯದ ಬೀದರ್ ಜಿಲ್ಲೆಯು ಭವಿಷ್ಯದಲ್ಲಿ ಇಂತಹ ಸ್ಥಿತಿ ಮರುಕಳಿಸದಿರಲು ಕ್ರಮಗಳನ್ನು ಕೈಗೊಂಡಿದೆ. ವಿವೇಚನೆಯುಳ್ಳ ಅಧಿಕಾರಿಗಳಿದ್ದರೆ ಸರಕಾರದ ಮರ್ಜಿ ಕಾಯದೇ ಜನಹಿತದ ಕ್ರಮಗಳನ್ನು ಜನರದ್ದೇ ಸಹಕಾರದೊಂದಿಗೆ ಕೈಗೊಂಡು ಅವರ ಬದುಕುನ್ನು ಹಸನಾಗಿಸಬಹುದು ಎನ್ನುವುದಕ್ಕೆ ಈ ಜಿಲ್ಲೆಯು ಜೀವಂತ ಉದಾಹರಣೆಯಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ವೆಚ್ಚದಲ್ಲಿ ಐತಿಹಾಸಿಕ ಕೆರೆಗಳು ಮತ್ತು ಬಾವಿಗಳಲ್ಲಿಯ ಹೂಳನ್ನೆತ್ತಲಾಗಿದ್ದು, 10 ಸಾವಿರ ಮಿಲಿಯ ಘನ ಅಡಿ(ಟಿಎಂಸಿ)ಗೂ ಹೆಚ್ಚಿನ ಅತಿರಿಕ್ತ ನೀರಿನ ಸಂಗ್ರಹವನ್ನು ಸೃಷ್ಟಿಸಲಾಗಿದೆ. ತನ್ಮೂಲಕ ಜಿಲ್ಲೆಯು ದೇಶದಲ್ಲಿನ ಇತರ 250ಕ್ಕೂ ಅಧಿಕ ಇತರ ಬರಪೀಡಿತ ಜಿಲ್ಲೆಗಳಿಗೆ ಮಾದರಿಯಾಗಿದೆ. ಮುಂದಿನ ವಾರ ಮುಂಗಾರು ಮಳೆಯ ಆಗಮನದವರೆಗೂ ಹೂಳೆತ್ತುವ ಕಾರ್ಯ ಮಂದುವರಿಯಲಿದ್ದು, ಕೆರೆಗಳು ಮತ್ತು ಬಾವಿಗಳನ್ನು ಇನ್ನೂ 10 ಟಿಎಂಸಿ ನೀರಿನ ಸಂಗ್ರಹಾಗಾರವನ್ನಾಗಿ ಮಾಡುವ ಮೂಲಕ ಒಟ್ಟೂ ನೀರಿನ ಸಂಗ್ರಹ ಸಾಮರ್ಥ್ಯವನ್ನು 20 ಟಿಎಂಸಿಗಳಿಗೆ ಹೆಚ್ಚಿಸಲು ಜಿಲ್ಲಾಡಳಿತವು ಉದ್ದೇಶಿಸಿದೆ.

ಜಿಲ್ಲಾಡಳಿತದ ಉತ್ತಮ ಕಾರ್ಯದಿಂದ ಪ್ರೇರಿತ ರಾಜ್ಯ ಸರಕಾರವು ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿಯ ಕೆರೆಗಳು ಮತ್ತು ಬಾವಿಗಳನ್ನು ಸ್ವಚ್ಛಗೊಳಿಸಲು ಮತ್ತು ಹೂಳೆತ್ತಲು ಕಳೆದ ತಿಂಗಳು ‘ಕೆರೆ ಸಂಜೀವಿನಿ’ಯೋಜನೆಯನ್ನು ಪ್ರಕಟಿಸಿದೆ, ಆದರೆ ಇದಕ್ಕಾಗಿ ಯಾವುದೇ ಜಿಲ್ಲೆಗೂ ಈವರೆಗೂ ಒಂದೇ ಒಂದು ಪೈಸೆ ಬಿಡುಗಡೆಯಾಗಿಲ್ಲ!

ಜಿಲ್ಲಾಡಳಿತವು ಕಳೆದ ಮಾರ್ಚ್‌ನಲ್ಲಿಯೇ ಹೂಳೆತ್ತುವ ಕಾಮಗಾರಿಯನ್ನು ಆರಂಭಿಸಿದ್ದು, 26 ಲಕ್ಷ ಘನಅಡಿಗಳಷ್ಟು ಹೂಳೆತ್ತಲು ಕೇವಲ 2.5 ಕೋ.ರೂ.ಗಳನ್ನು ವ್ಯಯಿಸಿದೆ. ವಾಸ್ತವದಲ್ಲಿ ಈ ಕಾರ್ಯಕ್ಕೆ ಕನಿಷ್ಠ 100 ಕೋ.ರೂ.ಗಳಾದರೂ ಬೇಕು. ಹೀಗಾಗಿ ‘ಬೀದರ್ ಮಾದರಿ’ಯು ವಿಶಿಷ್ಟವಾಗಿದೆ.

ಜಿಲ್ಲೆಯಲ್ಲಿ ಭೀಕರ ಬರ ಸ್ಥಿತಿಗೆ ನಾನು ಸಾಕ್ಷಿಯಾಗಿದ್ದೇನೆೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಸಕಾಲದಲ್ಲಿ ಹೂಳೆತ್ತುವ ಕೆಲಸ ಆರಂಭಿಸಿದ್ದೇವೆ. ಇವೆಲ್ಲ ಭವಿಷ್ಯದಲ್ಲಿ ಬರದ ವಿರುದ್ಧ ಜಿಲ್ಲೆಗೆ ರಕ್ಷಣೆ ನೀಡಲಿವೆ ಎಂದು ಜಿಲ್ಲಾಧಿಕಾರಿ ಅನುರಾಗ ತಿವಾರಿ ತಿಳಿಸಿದರು.

ಹೂಳೆತ್ತುವ ಕಾಮಗಾರಿಯ ವೆಚ್ಚವನ್ನು ತಗ್ಗಿಸುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಮಹತ್ವದ್ದಾಗಿದೆ. ನಮ್ಮ ಸಲಹೆಯ ಮೇರೆಗೆ ರೈತರು ಪೋಷಕಾಂಷಗಳಿಂದ ಸಮೃದ್ಧ ಹೂಳನ್ನು ತಮ್ಮ ಹೊಲಗದ್ದೆಗಳಿಗೆ ತಮ್ಮದೇ ಖರ್ಚಿನಲ್ಲಿ ಸಾಗಿಸಿದ್ದಾರೆ ಎಂದರು.

ಒಂದು ಘನ ಮೀಟರ್ ಹೂಳೆತ್ತಲು 60 ರೂ.ದರವನ್ನು ಸರಕಾರವು ನಿಗದಿಗೊಳಿಸಿದೆ. ಆದರೆ ಜಿಲ್ಲಾಡಳಿತವು ಮಾಡಿರುವ ವೆಚ್ಚವು ಪ್ರತಿ ಘನ ಅಡಿಗೆ 11 ರೂ.ದಾಟಿಲ್ಲ ಎಂದು ಜಿಲ್ಲಾ ಕೆರೆ ಹೂಳೆತ್ತುವ ಸಮಿತಿಯ ಅಧ್ಯಕ್ಷ ಬಾಲ್ಹಿಮ್ ಕಾಮ್ಲೆ ಹೇಳಿದರು.

ಈ ವರೆಗೆ ಜಿಲ್ಲಾಡಳಿತವು ಐದು ಜಿಲ್ಲೆಗಳಲ್ಲಿಯ 1,000 ತೆರೆದ ಬಾವಿಗಳ ಪೈಕಿ 200ರಲ್ಲಿ ಮತ್ತು 120 ಕೆರೆಗಳ ಪೈಕಿ 100 ಕೆರೆಗಳಲ್ಲಿ ಹೂಳನ್ನೆತ್ತಿದೆ. 400 ದೇವಸ್ಥಾನಗಳ ಪುಷ್ಕರಿಣಿಗಳಲ್ಲಿ 20 ಹೂಳುಮುಕ್ತಗೊಂಡಿವೆ.

ಹೂಳು ತೆಗೆಯಲಾದ ಬಾವಿಗಳ ನೀರು ಪಾನಯೋಗ್ಯವಾಗಿದ್ದು, ಟ್ಯಾಂಕರ್‌ಗಳ ಮೂಲಕ ಜನರಿಗೆ ಪೂರೈಸಲಾಗುತ್ತಿದೆ.

 ಮಹತ್ವದ ಹೆಜ್ಜೆಯೊಂದರಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪುರಾತನ ಭೂಗತ ಜಲ ಸುರಂಗಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ‘ಕರೇಝ’ ವ್ಯವಸ್ಥೆ ಎಂದು ಕರೆಯಲಾಗುವ ಇದು ಇರಾನ್ ಮೂಲದ ಜಲಪೂರೈಕೆ ವ್ಯವಸ್ಥೆಯಾಗಿದೆ. 15ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಇದು ಮೂರು ಕಿ.ಮೀ.ಗೂ ಅಧಿಕ ಉದ್ದವಿದ್ದು, 21 ಗಾಳಿಕಿಂಡಿಗಳನ್ನು ಹೊಂದಿದೆ ಎಂದು ತಿವಾರಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X