ಪಾಕ್ ಪ್ರಧಾನಿಯ ಚೇತರಿಕೆಗೆ ಹೂವು ಕಳುಹಿಸಿದ ಮೋದಿ

ಇಸ್ಲಾಮಾಬಾದ್, ಜೂ. 2: ಲಂಡನ್‌ನ ಆಸ್ಪತ್ರೆಯೊಂದರಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರಿಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ‘ಪ್ರಧಾನಿ ನವಾಝ್ ಶರೀಫ್‌ರ ಶೀಘ್ರ ಚೇತರಿಕೆಗಾಗಿ ಶುಭ ಹಾರೈಕೆಗಳು’ ಎಂಬ ಸಂದೇಶದೊಂದಿಗೆ ಹೂವುಗಳನ್ನು ಕಳುಹಿಸಿದ್ದಾರೆ’’ ಎಂದು ಪಾಕಿಸ್ತಾನದ ವಿದೇಶ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.
ಶಸ್ತ್ರಚಿಕಿತ್ಸೆ ಮಂಗಳವಾರ ನಡೆದಿದೆ ಹಾಗೂ ಅವರು ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬ ಹೇಳಿದೆ.
Next Story





