Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೌರ ತಂತ್ರಜ್ಞಾನ ಅಭಿವೃದ್ಧಿಯ ವಿರುದ್ಧದ...

ಸೌರ ತಂತ್ರಜ್ಞಾನ ಅಭಿವೃದ್ಧಿಯ ವಿರುದ್ಧದ ಡಬ್ಲ್ಯೂಟಿಒ ತೀರ್ಪನ್ನು ಪ್ರಶ್ನಿಸುತ್ತಿರುವ ಭಾರತ

ರವಿಕಾಂತ್ ದೇವರಕೊಂಡರವಿಕಾಂತ್ ದೇವರಕೊಂಡ2 Jun 2016 9:10 PM IST
share
ಸೌರ ತಂತ್ರಜ್ಞಾನ ಅಭಿವೃದ್ಧಿಯ ವಿರುದ್ಧದ ಡಬ್ಲ್ಯೂಟಿಒ ತೀರ್ಪನ್ನು ಪ್ರಶ್ನಿಸುತ್ತಿರುವ ಭಾರತ

ಭಾರತ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆಗೆ ಜಾಗತಿಕ ಹವಾಮಾನ ವೈಪರೀತ್ಯದ ಬಗೆಗಿನ ಚರ್ಚೆ ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ)ಯಲ್ಲಿ ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿರುವ ದೇಶಗಳು ರೂಪಿಸಿರುವ ಲಾಭಾಧಾರಿತ ವ್ಯಾಪಾರ ನೀತಿಗಳನ್ನು ಮೆಟ್ಟಿ ನಿಲ್ಲುವಂತಹ ಸೌರ ಕೋಶ, ಸೌರ ಸಾಧನ ಮತ್ತು ಇತರ ಮರುಬಳಕೆಯ ಇಂಧನಗಳನ್ನು ಉತ್ಪಾದಿಸಲು ತಯಾರಿಸುವ ದೇಶೀಯ ಕೈಗಾರಿಕೆಯನ್ನು ನಿರ್ಮಿಸುವ ಪ್ರಯತ್ನದಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ ಎಂದು ಅನೇಕ ಸಮಾಲೋಚಕರು ವಿವರಿಸುತ್ತಾರೆ.

ಎಪ್ರಿಲ್ 20ರಂದು ಭಾರತ ತನ್ನ ನವೀಕರಿಸಬಹುದಾದ ಇಂಧನವನ್ನು ತಯಾರಿಸುವ ಸಲುವಾಗಿ ಸೌರಕೋಶಗಳು ಮತ್ತು ಸೌರ ಸಾಧನಗಳ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಅಳವಡಿಸಿಕೊಂಡ ನೀತಿಯ ವಿರುದ್ಧ ಮತ್ತು ಅಮೆರಿಕ ಪರವಾದ ಡಬ್ಲ್ಯೂಟಿಒನ ತೀರ್ಪನ್ನು ಪ್ರಶ್ನಿಸಿತು. ವಿವಾದ ಇತ್ಯರ್ಥ ಮಂಡಳಿಯ ರಾಯಭಾರಿ ದಕ್ಷಿಣ ಆಫ್ರಿಕಾದ ಕ್ಸೇವಿಯರ್ ಕರೀಂ ಅವರಿಗೆ ಎಪ್ರಿಲ್ 20ರಂದು ಭಾರತ ನೀಡಿದ ಮನವಿಯಲ್ಲಿ, ಈ ಬೆಳವಣಿಗೆ ಬಗ್ಗೆ ತಿಳಿದುಕೊಂಡಿರುವ ಸಮಾಲೋಚಕರ ಪ್ರಕಾರ ಸಮಿತಿಯು ಆರ್ಟಿಕಲ್ 111:8(ಅ) ಮತ್ತು ಆರ್ಟಿಕಲ್ ಎಕ್ಸ್‌ಎಕ್ಸ್(ಡಿ) ಮತ್ತು ಎಕ್ಸ್‌ಎಕ್ಸ್(ಜೆ)ಯನ್ನು ತಪ್ಪರ್ಥೈಸಿಕೊಂಡಿದೆ. ಸಮಿತಿಯ ಈ ತೀರ್ಪು ಇದೇ ಮೊದಲ ಬಾರಿಯಾಗಿದ್ದು, ಹವಾಮಾನ ವೈಪರೀತ್ಯದ ಬಗ್ಗೆ ಅಂತಾರಾಷ್ಟ್ರೀಯ ಕರಾರಿನ ಪ್ರಕಾರವಾಗಿ ಸೌರಕೋಶ ಮತ್ತು ಸೌರ ಸಾಧನಗಳ ಸ್ಥಳೀಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಡಬ್ಲ್ಯೂಟಿಒದ ಸದಸ್ಯ ರಾಷ್ಟ್ರದ ಪ್ರಯತ್ನವನ್ನು ಅದು 1994ರ ದರ ಮತ್ತು ವ್ಯಾಪಾರದ ಸಾಮಾನ್ಯ ಒಪ್ಪಂದದ (ಜಿಎಟಿಟಿ) ಅಡಿಯಲ್ಲಿ ಭಾರತದ ಅಂತಾರಾಷ್ಟ್ರೀಯ ಉಪಚಾರ ಕರಾರು ಮತ್ತು ವ್ಯಾಪಾರ ಸಂಬಂ ಹೂಡಿಕೆ ಕ್ರಮಗಳ (ಟಿಆರೈಎಂಎಸ್) ಬಗೆಗಿನ ಡಬ್ಲ್ಯೂಟಿಒ ಒಪ್ಪಂದ ಉಲ್ಲಂಘನೆಯಾಗುತ್ತದೆ ಎಂಬ ನೆಲೆಯಲ್ಲಿ ರದ್ದುಪಡಿಸಲಾಗಿದೆ. ಇದಕ್ಕಿಂತ ಮೊದಲು ಕೆನಡಾದ ಎರಡು ಪ್ರಾಂತಗಳು ನಿಗದಿತ ಪ್ರಾಂತಗಳಿಗೆ ಮಾರುವ ಸಲುವಾಗಿ ದೇಶೀಯ ಸಾಧನವನ್ನು ಬಳಸಲು ಇಂಧನ ಉತ್ಪಾದನಾ ಸಂಸ್ಥೆಗಳಿಗೆ ಸಹಾಯಧನ ಮತ್ತು ದರನಿಗದಿಪಡಿಸುವ ಅವಕಾಶ ನೀಡಿದ ಪರಿಣಾಮವಾಗಿ ಐರೋಪ್ಯ ಒಕ್ಕೂಟ ಮತ್ತು ಜಪಾನ್ ಕೆನಡಾ ವಿರುದ್ಧ ತಗಾದೆ ತೆಗೆದಿತ್ತು. ಆದರೆ ಕೆನಡಾ ಆ ಸಮಯದಲ್ಲಿ ಭಾರತದಂತೆ ಯುಎನ್ ಹವಾಮಾನ ವೈಪರೀತ್ಯ ಒಪ್ಪಂದ ಮತ್ತು ದೇಶಗಳ ನಿರ್ಬಂಧಗಳ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಮೂರು ವರ್ಷಗಳ ಹಿಂದೆ ಅಮೆರಿಕ ಭಾರತದ ವಿರುದ್ಧ ಆರೋಪ ಮಾಡಿದ ನಂತರ ನಡೆದ ಸಮಿತಿಯ ವಿಚಾರಣೆಯ ವೇಳೆ ಭಾರತ ಜಿಎಟಿಟಿ ಆರ್ಟ್.ಎಕ್ಸ್ ಎಕ್ಸ್(ಡಿ) ಅಡಿ ನೀಡಲಾಗಿರುವ ವಿನಾಯಿತಿಯನ್ನು ಪ್ರಸ್ತಾಪಿಸುವ ಮೂಲಕ ತನ್ನ ದೇಶೀಯ ಸಾಧನ ಕ್ರಮವನ್ನು ಎತ್ತಿಹಿಡಿದಿತ್ತು. ಭಾರತವು ಜಿಎಟಿಟಿ ಆರ್ಟಿಕಲ್ 111:8(ಅ) ಪ್ರಕಾರ ತನ್ನ ಸೌರ ವಿಷಯಾವಶಕ್ಯತೆಗಳನ್ನು ಸಮರ್ಥಿಸಿಕೊಂಡಿತ್ತು. ಈ ನಿಬಂಧನೆಯು ಡಬ್ಲ್ಯೂಟಿಒ ಸದಸ್ಯ ರಾಷ್ಟ್ರ,ರಾಷ್ಟ್ರೀಯ ಉಪಚಾರ ಕರಾರುಗಳಿಂದ ಮುಕ್ತವಾಗುವ ಅವಕಾಶ ನೀಡುತ್ತದೆ. 2010ರಲ್ಲಿ ಭಾರತ ಸರಕಾರ ರೂಪಿಸಿದ ಜವಾಹರ್ ಲಾಲ್ ನೆಹರೂ ಸೌರ ಯೋಜನೆ (ಜೆಎನ್‌ಎಸ್‌ಎಂ) ಅಡಿ ಭಾರತ ಹೇರಿದ ಕೆಲವು ಸ್ಥಳೀಯ ವಿಷಯಾವಶ್ಯಕತೆಗಳ ಬಗ್ಗೆ ಅಮೆರಿಕ ತಕರಾರು ಎಬ್ಬಿಸಿತ್ತು.
ಜೆಎನ್‌ಎಸ್‌ಎಂ ಆದಷ್ಟು ತ್ವರಿತವಾಗಿ ದೇಶಾದ್ಯಂತ ಸೌರಶಕ್ತಿಯ ಪ್ರಸರಣ ಮಾಡುವಂತಹ ನೀತಿಯನ್ನು ರೂಪಿಸಿ ಭಾರತವನ್ನು ಸೌರಶಕ್ತಿಯಲ್ಲಿ ಜಗತ್ತಿನ ನಾಯಕನನ್ನಾಗಿ ಮಾಡುವುದಕ್ಕಾಗಿ ರೂಪಿಸಲಾಗಿದೆ ಎಂದು ಭಾರತ ತಿಳಿಸಿತ್ತು.
ಹವಾಮಾನ ವೈಪರೀತ್ಯದ ಸವಾಲನ್ನು ಎದುರಿಸುವ ಜಾಗತಿಕ ಪ್ರಯತ್ನಕ್ಕೆ ಜೆನ್‌ಎಸ್‌ಎಂ ಭಾರತದ ಪ್ರಮುಖ ಕೊಡುಗೆ ಎಂದು ಭಾರತ ವಿವರಿಸಿತ್ತು.

ಜೆಎನ್‌ಎಸ್‌ಎಂ ಅಡಿಯಲ್ಲಿ ಭಾರತ ಸೌರಶಕ್ತಿ ಉತ್ಪಾದಕ ಸಂಸ್ಥೆಗಳ ಜೊತೆ 25 ವರ್ಷಗಳ ದೀರ್ಘ ಇಂಧನ ಖರೀದಿ ಒಪ್ಪಂದವನ್ನು ಮಾಡಿಕೊಂಡಿತು, ಬದಲಾಗಿ ಈ ಸಂಸ್ಥೆಗಳು ದೇಶೀಯವಾಗಿ ನಿರ್ಮಿಸಲ್ಪಟ್ಟ ಸೌರಕೋಶ ಮತ್ತು ಸಾಧನಗಳನ್ನು ಪೂರೈಸಬೇಕು. ಭಾರತವು ತನ್ನ ದೇಶೀಯ ವಿಷಯಾಗತ್ಯಗಳನ್ನು ತನ್ನ ಅಂತಾರಾಷ್ಟ್ರೀಯ ಕರಾರಿನತ್ತ ಬೊಟ್ಟು ಮಾಡುವ ಮೂಲಕ ಸಮರ್ಥಿಸಿಕೊಂಡಿತು. ದೇಶೀಯ ಅಗತ್ಯಗಳನ್ನು ಮುಂದುವರಿಸಲು ಭಾರತ ಯುಎನ್‌ಎ್ಸಿಸಿಸಿಯ ಬೆಂಬಲವನ್ನು ಪಡೆದುಕೊಂಡಿತು. ಭಾರತವು ಇಂಧನ ಭದ್ರತೆ ಸಾಸಲು, ಹವಾಮಾನ ವೈಪರಿತ್ಯವನ್ನು ತಗ್ಗಿಸಲು ಮತ್ತು ಸಮರ್ಥನೀಯ ಅಭಿವೃದ್ಧಿಯನ್ನು ಸಾಸಲು ಕ್ರಮಗಳನ್ನು ಕೈಗೊಳ್ಳುವ ನಿಬಂಧನೆಯನ್ನು ಹೊಂದಿದೆ ಮತ್ತು ಇದು ಸೌರಶಕ್ತಿಯಿಂದ ಉತ್ಪಾದಿಸಲ್ಪಟ್ಟ ಸಾಕಷ್ಟು ಶುದ್ಧ ವಿದ್ಯುತ್‌ನ್ನು ಮಿತದರದಲ್ಲಿ ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿದೆ ಎಂದು ವಾದ ಮಾಡಿತ್ತು. ಸೌರ ಇಂಧನವನ್ನು ಉತ್ಪಾದಿಸುವ ಮೂಲಕ ತೈಲ ಮತ್ತು ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ಭಾರತ ವಾದಿಸಿತ್ತು. ‘‘ಸೌರಕೋಶ ಮತ್ತು ಸಾಧನಗಳ ಬಾಹ್ಯ ಪೂರೈಕೆಯಲ್ಲಿ ವ್ಯತ್ಯಾಸವಾದಾಗ ಬಳಕೆ ಮಾಡಲು ಆಂತರಿಕವಾಗಿ ಇವುಗಳನ್ನು ಉತ್ಪಾದಿಸಿ ಶೇಖರಿಸಿಡುವುದು ಅಗತ್ಯ’’ ಎಂದು ಭಾರತ ತಿಳಿಸಿತ್ತು.
ಆದರೆ ಸಮಿತಿ ಹವಾಮಾನ ವೈಪರೀತ್ಯದ ಬಗ್ಗೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಬದಿಗಿಟ್ಟು ಡಬ್ಲ್ಯೂಟಿಒ ನೀತಿಗೆ ಆದ್ಯತೆ ನೀಡಿತು.

ಖಂಡಿತವಾಗಿಯೂ, ಕೆಲವು ವಿಶ್ಲೇಷಕರ ಪ್ರಕಾರ ಉರುಗ್ವೆ ದುಂಡು ಮೇಜಿನ ಪರಿಷತ್‌ನಲ್ಲಿ ರೂಪಿಸಲಾದ ಟಿಆರೈಎಂಗಳ ಬಗೆಗಿನ ಡಬ್ಲ್ಯೂಟಿಒ ನೀತಿಗಳು ಸ್ಪಷ್ಟವಾಗಿ ಕೈಗಾರೀಕರಣ ಹಿನ್ನಡೆ ಅನುಭವಿಸಿದ್ದ ದೇಶಗಳಲ್ಲಿ ದೇಶೀಯ ಕೈಗಾರಿಕೆಗಳನ್ನು ನಿರ್ಮಿಸುವ ಪ್ರಯತ್ನವನ್ನು ಅದುಮಿ ಹಾಕುತ್ತಿತ್ತು.
ಈಗಾಗಲೇ ಹಲವು ದೇಶಗಳಲ್ಲಿ ಭೀಕರತೆಯನ್ನು ಸೃಷ್ಟಿಸಿರುವ ಹವಾಮಾನ ವೈಪರೀತ್ಯದ ಪರಿಣಾಮ ವನ್ನು ವಿಶ್ವವೇ ಎದುರಿಸುತ್ತಿರುವ ಈ ಸಂದರ್ಭ ದಲ್ಲಿ ಹವಾಮಾನ ಬದಲಾವಣೆಗಳ ವಿರುದ್ಧ ಹೋರಾಡುವ ನೀತಿಗಳನ್ನು ಡಬ್ಲ್ಯೂಟಿಒದ ಮತಿಗೆಟ್ಟ ನೀತಿಗಳು ಹಾಳುಗೆಡವುತ್ತಿವೆ. ಹಿನ್ನೆಲೆಯಲ್ಲಿ ಸೌರ ಇಂಧನದ ವಿರುದ್ಧ ಸಮಿತಿ ನೀಡಿದ ತೀರ್ಪನ್ನು ಭಾರತ ಪ್ರಶ್ನಿಸಿರುವುದು ಐರೋಪ್ಯ ಒಕ್ಕೂಟ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಹಿಂದಿನ ಉರುಗ್ವೆ ಸಭೆಯಲ್ಲಿ ತೆಗೆದುಕೊಂಡಂತಹ ನೀತಿಗಳು ಮುಂದೆಯೂ ಹವಾಮಾನ ವೈಪರೀತ್ಯವನ್ನು ಎದುರಿಸುವ ಜಾಗತಿಕ ಪ್ರಯತ್ನವನ್ನು ನಿರ್ಲಕ್ಷಿಸುವುದೇ ಎಂಬುದರ ಅಗ್ನಿಪರೀಕ್ಷೆಯಾಗಿದೆ.

ಇತ್ತೀಚೆಗೆ ಕೇಂದ್ರ ಸರಕಾರ ಸುಳಿವು ನೀಡಿದಂತೆ, ಭಾರತವು ಎರಡನೇ ಹೆಜ್ಜೆಯನ್ನು ಮುಂದಿಟ್ಟು ಅನೇಕ ರಾಷ್ಟ್ರಗಳಿಗೆ ಸಮರ್ಥನೀಯ ಇಂಧನವನ್ನು ಪ್ರೋತ್ಸಾಹಿಸಲು ಬಿಲಿಯನ್‌ಗಟ್ಟಲೆ ಡಾಲರ್ ಸಹಾಯಧನ ನೀಡುವ ಮತ್ತು ಕಠಿಣ ದೇಶೀಯ ಅಗತ್ಯತೆಯ ನಿಬಂಧನೆಗಳನ್ನು ಹೇರುವ ಅಮೆರಿಕದೊಂದಿಗೆ ವ್ಯಾಪಾರ ತಕರಾರನ್ನು ಎತ್ತುವುದೇ ಎಂಬುದನ್ನು ನೋಡಬೇಕಿದೆ.
ಭಾರತವು ದೂರನ್ನು ದಾಖಲಿಸದಂತೆ ತಡೆಯಲು ಎಪ್ರಿಲ್ 19ರಂದು ನೀಡಿದ ಮೆಲ್ಲನೆಯ ಎಚ್ಚರಿಕೆಯಲ್ಲಿ ಅಮೆರಿಕ ವ್ಯಾಪಾರ ಪ್ರತಿನಿ ವಕ್ತಾರ, ಸವಾಲಿನಂತೆ ಡಬ್ಲ್ಯೂಟಿಒದಲ್ಲಿ ದೂರುಗಳನ್ನು ದಾಖಲಿಸುವುದು ಅಮೆರಿಕ ಮತ್ತು ಭಾರತದ ಆರ್ಥಿಕ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಯಾವುದೇ ರೀತಿಯಲ್ಲಿ ನೆರವಾಗದು ಅಥವಾ ಅವು ಡಬ್ಲ್ಯೂಟಿಒ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಗೂ ಕಾರಣವಾಗದು ಎಂದು ಪಿವಿ ಟೆಕ್‌ಗೆ ತಿಳಿಸಿದ್ದರು.
ಆದರೆ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಪಾರತಜ್ಞ ರಾಗಿರುವ ಡಾನಿ ರಾಡ್ರಿಕ್ ಪ್ರಕಾರ, ಟಿಟ್ ಾರ್ ಟ್ಯಾಟ್ ವ್ಯಾಪಾರ ತಕರಾರು ‘ವಾಣಿಜ್ಯ ವ್ಯವಹಾರದ ಹೃದಯದಲ್ಲೇ ಇದೆ ಮತ್ತು ಅದು ನೀನು ನಿನ್ನ ತಡೆಗಳನ್ನು ಕೆಳಗಿಳಿಸು ಬದಲಾಗಿ ನಾನು ನನ್ನ ಗೋಡೆಯನ್ನು ಇಳಿಸುತ್ತೇನೆ’ ಎಂಬ ಸಿದ್ಧಾಂತದ ಮೇಲೆ ಕಾರ್ಯಾಚರಿಸುತ್ತದೆ.

ಅಮೆರಿಕ ಬಿಲಿಯನ್‌ಗಟ್ಟಲೆ ಡಾಲರನ್ನು ಹಸಿರು ಸಹಾಯಧನವಾಗಿ ನೀಡಬಹುದು ಮತ್ತು ತನ್ನ ಸ್ವಂತ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶೀಯ ಅಗತ್ಯ ವಿಷಯಗಳನ್ನು ಪಡೆದುಕೊಳ್ಳಬಹುದು. ಆದರೆ ಡಬ್ಲ್ಯೂಟಿಒ ಸದಸ್ಯತ್ವ ಹೊಂದಿರುವ ಇತರ ರಾಷ್ಟ್ರಗಳು ತಮ್ಮ ದೇಶೀಯ ಉತ್ಪಾದನಾ ಸೌಲಭ್ಯಗಳ ಆಧಾರದಲ್ಲಿ ಸಮರ್ಥನೀಯ ಇಂಧನ ಕೈಗಾರಿಕೆಯನ್ನು ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಇದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದು ನ್ಯಾಯವನ್ನು ಅಣಕ ಮಾಡಿದಂತೆ ಎಂದು ಈ ಬಗ್ಗೆ ಸೂಕ್ತ ಮಾಹಿತಿಯಿರುವ ಅಭಿವೃದ್ಧಿ ಹೊಂದುತ್ತಿರುವ ದೇಶದ ಸಮಾಲೋಚಕರೊಬ್ಬರು ತಿಳಿಸುತ್ತಾರೆ. ‘‘ನಾನು ಶೀಘ್ರದಲ್ಲೇ ಸೌರ ಇಂಧನವನ್ನು ಭಾರತದಲ್ಲೇ ಉತ್ಪಾದಿಸುವ ಸೂಕ್ತ ನೀತಿಯನ್ನು ಜಾರಿಗೆ ತರಲಿದ್ದೇನೆ ಮತ್ತು ಅಮೆರಿಕ ಡಬ್ಲ್ಯೂಟಿಒ ನೀತಿಯನ್ನು ಉಲ್ಲಂಸುತ್ತಿರುವುದರ ವಿರುದ್ಧ 16 ದೂರುಗಳನ್ನು ದಾಖಲಿಸಲಿದ್ದೇನೆ’’ ಎಂದು ಭಾರತದ ಇಂಧನ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ದೂರುಗಳ ಹೊರತಾಗಿ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪ್ಯಾರಿಸ್ ಹವಾಮಾನ ಸಮಾಲೋಚನೆಯಿಂದಾಗಿ ಗುರುತರ ಬೌದ್ಧಿಕ ಆಸ್ತಿ ಬದ್ಧತೆಯಿಲ್ಲದೆ ತಂತ್ರಜ್ಞಾನ ವರ್ಗಾವಣೆಗೆ ಅನಿರ್ಬಂತ ಪ್ರವೇಶವನ್ನು ಒದಗಿಸುವ ಪ್ರಮುಖ ಸವಾಲನ್ನೂ ಎದುರಿಸುತ್ತಿದೆ.

ಆವಿಷ್ಕಾರವನ್ನು ರಕ್ಷಿಸುವ ಮತ್ತು ಸಮಾಜದ ಮುಖ್ಯ ಸವಾಲುಗಳಿಗೆ ಪರಿಹಾರವನ್ನು ಹುಡುಕಿ ಅದನ್ನು ಪ್ರಸಾರ ಮಾಡುವ ಅಮೆರಿಕದ ಅನ್ವೇಷಕರ ಸಾಮರ್ಥ್ಯವನ್ನು ಕಾಪಾಡಲು ಎಂಬ ನೆಪದಲ್ಲಿ ಅಮೆರಿಕ ಅತ್ಯಂತ ಹೊರೆಯಾದ ಮತ್ತು ಗುರುತರವಾದ ಬೌದ್ಧಿಕ ಆಸ್ತಿ ಬದ್ಧತೆಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೆಗಲ ಮೇಲೆ ಇಡಲು ಬಯಸುತ್ತಿದೆ. ಪ್ಯಾರಿಸ್ ಒಪ್ಪಂದದ ಅನುಷ್ಠಾನದಲ್ಲಿ ಬೌದ್ಧಿಕ ಆಸ್ತಿ ಬಗೆಗಿನ ಸವಾಲು ಉಳಿಯುವಂತೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹಾಗೂ ವರ್ಗಾವಣೆಗೆ ಸಂಬಂಧಪಟ್ಟ ಅಂಶವೂ ಉಳಿಯುವಂತೆ ಅಮೆರಿಕದಲ್ಲಿ ಈಗಾಗಲೇ ಲಾಬಿ ನಡೆಯುತ್ತಿದ್ದು ಅಭಿಯಾನದ ರೂಪವನ್ನು ಪಡೆದುಕೊಂಡಿದೆ. ಸೌರ ವ್ಯಾಪಾರ ತಕರಾರು ಮತ್ತು ಪ್ಯಾರಿಸ್ ಹವಾಮಾನ ಬದಲಾವಣೆ ಸಮಾಲೋಚನೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಂಪ್ರದಾಯಿಕ ಇಂಧನ ಪ್ರಾಬಲ್ಯ ಹೊಂದಿರುವ ಕೈಗಾರಿಕೆಗಳನ್ನು ಸ್ವಚ್ಛ ಇಂಧನ ಉತ್ಪಾದಿಸುವ ಕೈಗಾರಿಕೆಗಳ ಮೂಲಕ ಬದಲಾಯಿಸುವ ಗುರಿಯನ್ನು ಹೊಂದಿರುವ ನೀತಿಯನ್ನು ರಚಿಸುವಲ್ಲಿ ಸಲವಾಗುವುದೇ ಎಂಬುದನ್ನು ನಿರ್ಧರಿಸಲಿದೆ.
 

share
ರವಿಕಾಂತ್ ದೇವರಕೊಂಡ
ರವಿಕಾಂತ್ ದೇವರಕೊಂಡ
Next Story
X