ಹಳ್ಳಿ ಬಾಲಕ ಶುಭಂಗೆ ಯುರೋಪ್ ಜೂನಿಯರ್ ಗಾಲ್ಫ್ ಪ್ರಶಸ್ತಿ

ಹೊಸದಿಲ್ಲಿ, ಜೂ.3: ಭಾರತದ ಕಿರಿಯ ಗಾಲ್ಫ್ ಆಟಗಾರ ಶುಭಂ ಜಗ್ಲಾನ್ ಮೊತ್ತ ಮೊದಲ ಬಾರಿ ಯುಎಸ್ ಕಿಡ್ಸ್ ಯುರೋಪಿಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದು ವಿಶ್ವದ ಗಮನ ತನ್ನತ್ತ ಸೆಳೆದಿದ್ದಾರೆ.
ಹರ್ಯಾಣದ ಪಾಣಿಪತ್ ಜಿಲ್ಲೆಯ ಹಳ್ಳಿಯೊಂದರ ಬಡ ಕುಟುಂಬದಿಂದ ಬಂದಿರುವ ಶುಭಂ ಶುಕ್ರವಾರ ಸ್ಕಾಟ್ಲೆಂಡ್‌ನಲ್ಲಿ ನಡೆದ ತ್ರಿದಿನ ಗಾಲ್ಫ್ ಟೂರ್ನಮೆಂಟ್‌ನ ವೈಯಕ್ತಿಕ ಸುತ್ತಿನಲ್ಲಿ 69-72-66 ಅಂಕವನ್ನು ಗಳಿಸಿದರು. ಟೂರ್ನಿಯ ಮೊದಲ ದಿನವೇ ಮೇಲುಗೈ ಸಾಧಿಸಿದ್ದ ಶುಭಂ ಪ್ರತಿಷ್ಠಿತ ಪ್ರಶಸ್ತಿ ಜಯಿಸುವ ವಿಶ್ವಾಸ ಮೂಡಿಸಿದ್ದರು.
ಹರ್ಯಾಣದ 11ರ ಹರೆಯದ ಈ ಬಾಲಕ 2015ರಲ್ಲಿ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್‌ಶಿಪ್ ಹಾಗೂ ಜೂನಿಯರ್ ಗಾಲ್ಫ್ ಅಕಾಡೆಮಿ ವರ್ಲ್ಡ್ ಸ್ಟಾರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. 2013ರಲ್ಲಿ ವಿಶ್ವ ಜೂನಿಯರ್ ಗಾಲ್ಫ್ ಟೂರ್ನಮೆಂಟ್‌ನ್ನು ಜಯಿಸಿ ಚೊಚ್ಚಲ ಪ್ರಶಸ್ತಿ ಪಡೆದಿದ್ದರು.
Next Story





