ಮುಂಡಗೋಡ: ಅಂಚೆ ಅಣ್ಣನಿಗೆ ಆತ್ಮೀಯ ಸನ್ಮಾನ

ಮುಂಡಗೋಡ: ಅಂಚೆ ಇಲಾಖೆಯಲ್ಲಿ ಸುದೀರ್ಘ 40 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಥಾಮಸ್ ಕ್ರಿಶ್ಚನ್ ಇವರಿಗೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಟಿಬೇಟನ್ ಕಾಲೋನಿಯ ಅಂಚೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಥಾಮಸ್ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಿತರಿಗೆ ಟಿಬೇಟನ್ ಕಾಲನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆತ್ಮೀಯರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟಿಬೇಟನ್ ನಾಗರಿಕರು ಹಾಗೂ ಸೆಂಟ್ರಲ್ ಸ್ಕೂಲ್ ಸಿಬ್ಬಂದಿ ಹಾಜರಿದ್ದರು.
ಪೋಸ್ಟ್ ಮಾಸ್ತರ ದಿನೇಶ ವೆರ್ಣೇಕರ ಸ್ವಾಗತಿಸಿ ನಿರೂಪಿಸಿದರು. ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ ಲಾಕ್ಪಾ ಚೋಡೊನ್, ಡಿಟಿಆರ್ ಆಸ್ಪತ್ರೆಯ ಪ್ರತಿನಿಧಿ ನವಾಂಗ್ ಥುಪ್ತೇನ್ ಮುಂತಾದವರು ಹಾಜರಿದ್ದರು.
Next Story





