ಕಲಾಭವನ್ ಮಣಿಯ ಸಾವು ಪ್ರಕರಣ: ಸಿಬಿಐಗೆ ವಹಿಸಲು ಮುಖ್ಯಮಂತ್ರಿಗೆ ಮೊರೆ!

ತಿರುವನಂತಪುರಂ, ಜೂನ್ 3: ನಟ ಕಲಾಭವನ್ ಮಣಿಯ ಮರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಮಣಿಯ ಸಹೋದರ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಈಗಿನ ತನಿಖೆಯಲ್ಲಿ ತಮಗೆ ವಿಶ್ವಾಸವಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಹೋದರ ಆರ್.ಎಲ್.ವಿ. ರಾಮಕೃಷ್ಣನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಆಗ್ರಹಿಸಿದ್ದಾರೆ
ಮಣಿಯ ಮರಣ ಕೊಲೆಕೃತ್ಯವೆಂಬ ನಿಲುವಿನಲ್ಲಿ ತಾನು ದೃಢವಾಗಿದ್ದೇನೆ. ಎರಡು ತಿಂಗಳಿಂದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಮಣಿಯ ಶರೀರದಲ್ಲಿ ಪತ್ತೆಯಾದ ವಿಷಾಂಶವನ್ನು ಯೋಜನಾಬದ್ಧವಾಗಿ ಪ್ರಯೋಗಿಸಲಾಗಿದೆ. ಪೊಲೀಸರು ಪ್ರಶ್ನಿಸಬೇಕಾದವರನ್ನು ಪ್ರಶ್ನಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
Next Story





