ತಮಿಳು ನಟ ಬಾಲುಆನಂದ್ ನಿಧನ

ಚೆನ್ನೈ,ಜೂನ್3: ಪ್ರಸಿದ್ಧ ತಮಿಳು ನಟ ಮತ್ತು ನಿರ್ದೇಶಕ ಬಾಲು ಆನಂದ್(62) ಇಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಕಲಂಪಾಳಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಪಿಸ್ತ, ಅನ್ಬೆ ಶಿವಂ ಮುಂತಾದ ನೂರಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದ ಅವರು ಸತ್ಯರಾಜ್ ಅಭಿನಯಿಸಿದ ಅಣ್ಣಾ ನಗರ್ ಫಸ್ಟ್ ಸ್ಟ್ರೀಟ್, ವಿಜಯಕಾಂತ್ ನಾಯಕನಾದ ನಾನ್ ರಾಜ ನಾನ್ ಮಂತ್ರಿ ಮುಂತಾದ ಸಿನೆಮಾಗಳನ್ನೂ ಅವರು ನಿರ್ದೇಶಿಸಿದ್ದಾರೆ. ಪತ್ನಿ ಪುತ್ರರ ಜೊತೆ ಕೋಯಮತ್ತೂರಿನಲ್ಲಿರುವ ಮನೆಯಲ್ಲಿ ಅವರು ವಾಸವಿದ್ದರು.
Next Story





