ಫಿಲೋಮಿನಾ ಕಾಲೇಜು ಎನ್‌ಸಿಸಿ ಘಟಕಕ್ಕೆ ಹಲವು ಪ್ರಶಸ್ತಿ

ಪುತ್ತೂರು, ಜೂ. 3: ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಘಟಕವು ಇತ್ತೀಚೆಗೆ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಘಟಕದ ಆಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಶಿಬಿರದಲ್ಲಿ 2 ಭಾರತೀಯ ಭೂದಳದ ಅಧಿಕಾರಿಗಳು, 9 ಎನ್‌ಸಿಸಿ ಅಧಿಕಾರಿಗಳು, 18 ಇತರ ಅಧಿಕಾರಿಗಳು ಮತ್ತು 428 ಮಂದಿ ವಿವಿಧ ಶಾಲಾ ಕಾಲೇಜುಗಳ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದು, ಸೀನಿಯರ್ ಅಂಡರ್ ಆಫೀಸರ್ ಬ್ರಾಂಡೆನ್ ಲ್ಯಾಂಟೆನ್ ರೋಚ್ ಮತ್ತು ಜೂನಿಯರ್ ಅಂಡರ್ ಆಫೀಸರ್ ಶೀತಲ್ ಎಂ.ಎನ್. ಕ್ಯಾಂಪ್ ಸೀನಿಯರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ರಚನಾ ಎನ್.ಆರ್. ಬೆಸ್ಟ್ ಕೆಡೆಟ್, ಪೈಲೆಟ್, ಕ್ವಿಜ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಗೈವಿನ್ ಪಿಂಟೊ ಕ್ವಾರ್ಟರ್ ಗಾರ್ಡ್ ಪ್ರಶಸ್ತಿಯನ್ನು, ರೀಶಲ್ ಪಿಂಟೊ ಬೆಸ್ಟ್ ಡ್ರಿಲ್ ಮತ್ತು ಪೈಲೆಟ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಲೇಜು ಎನ್‌ಸಿಸಿ ತಂಡವು ಸಮೂಹ ಸ್ಪರ್ಧೆಗಳಾದ ತ್ರೋಬಾಲ್‌ನಲ್ಲಿ ಪ್ರಥಮ, ಗ್ರೂಪ್ ಡ್ಯಾನ್ಸ್‌ನಲ್ಲಿ ಪ್ರಥಮ, ಗ್ರೂಪ್ ಸಾಂಗ್‌ನಲ್ಲಿ ಪ್ರಥಮ ಮತ್ತು ಕಂಟಿನ್‌ಜೆಂಟ್ ಡ್ರಿಲ್‌ನಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ. ಕಾಲೇಜಿನ ಎನ್‌ಸಿಸಿ ಘಟಕದ ಅಧಿಕಾರಿ ಲೆ. ಜೊನ್ಸನ್ ಡೇವಿಡ್ ಸಿಕ್ವೇರಾ ಶಿಬಿರದಲ್ಲಿ ಭಾಗವಹಿಸಿ, ಮಾರ್ಗದರ್ಶನ ನೀಡಿದ್ದರು.







