ಮನುಷ್ಯ ಶರೀರದಲ್ಲಿ ಆರು ಕೋಟಿ ಜಿನೋಮ್‌ಗಳನ್ನು ಕೃತಕವಾಗಿ ಸಂಯೋಜಿಸಲಿರುವ ವಿಜ್ಞಾನ ಜಗತ್ತು
ಹತ್ತು ವರ್ಷಗಳಲ್ಲಿ ಇಚ್ಛಿಸುವ ಗುಣವಿರುವ ಕೃತಕ ಮನುಷ್ಯನು ಉಂಟಾಗಲಿರುವನೇ?

ಮಾನವ ದೇಹದ ಸಂಪೂರ್ಣ ಜೀವಕೋಶಗಳನ್ನುಹತ್ತು ವರ್ಷಗಳಲ್ಲಿ ಕೃತಕವಾಗಿ ಮರುಸೃಷ್ಟಿ ಮಾಡುವ ಯೋಜನೆಯನ್ನು ವಿಜ್ಞಾನಿಗಳು ಘೊಷಿಸಿದ್ದಾರೆ. ಮನುಷ್ಯನ ಶರೀರದೊಳಗೆ ಆರು ಕೋಟಿ ಜಿನೋಮ್‌ಗಳನ್ನು ಕೃತಕವಾಗಿ ಸಂಯೋಜಿಸುವ ಪ್ರಯತ್ನಕ್ಕೆ ವಿಜ್ಞಾನ ಜಗತ್ತು ಚಾಲನೆ ನೀಡಿದೆ. ಇದು ಯಶಸ್ವಿಯಾದರೆ ಹತ್ತುವರ್ಷಗಳಲ್ಲಿ ಇಷ್ಟವಿರುವ ಗುಣವನ್ನು ಹೊಂದಿರುವ ಕೃತಕ ಮನುಷ್ಯನನ್ನು ಸೃಷ್ಟಿಸಬಹುದು ಎಂಬ ನಿರೀಕ್ಷೆಗೆ ಇದೀಗ ರೆಕ್ಕೆಪುಕ್ಕಗಳು ಬಂದಂತಾಗಿದೆ.ಮನುಷ್ಯ ದೇಹದ ಡಿಎನ್‌ಎಯಲ್ಲಿರುವ ಆರು ಕೋಟಿ ಜಿನೊಮ್‌ಗಳನ್ನು ಮರುಸೃಷ್ಟಿಸುವಂತಹ ಸಂಪೂರ್ಣ ಜಟಿಲವಾದ ಯೋಜನೆ ಇದಾಗಿದೆ. ಈ ಯೋಜನೆ ಯಶಸ್ವಿಯಾಗಿ ಮುಂದೆ ಸಾಗಿತ್ತೆಂದಾದರೆ ಕ್ಯಾನ್ಸರ್‌ನಂತಹ ರೋಗಗಳಿರುವ ಅವಯವಗಳನ್ನು ತೆಗೆದು ಅಲ್ಲಿಗೆ ಕೃತಕ ಅವಯವಗಳನ್ನು ಇಡಬಹುದು ಎಂಬ ಅಧ್ಯಯನ ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಜೊತೆಗೆ ತಾವು ಬಯಸುವಂತಹ ಗುಣಸ್ವಭಾವ ಇರುವ ಡಿಸೈನ್ಡ್ ಶಿಶುಗಳನ್ನು ಕೃತಕವಾಗಿ ಉತ್ಪಾದಿಸಲು ಹೊಸ ಸಂಶೋಧನೆಗೆ ಸಾಧ್ಯವಿದೆ ಎಂಬ ನಿರೀಕ್ಷೆ ಹಾಗೂ ಆತಂಕ ಈಗ ನೆಲೆಯಾಗಿದೆ. ಈ ರೀತಿ ಕೃತಕವಾಗಿ ನಿರ್ಮಿಸಲಾಗುವ ಡಿಎನ್‌ಎಯನ್ನು ಒಂದು ಜೀವವಿರುವ ಕೋಶಕ್ಕೆ ಇಂಪ್ಲಾಂಟ್ ಮಾಡಲು ಸಾಧ್ಯ ಎಂಬುದು ವಿಜ್ಞಾನಿಗಳ ನಿರೀಕ್ಷೆಯಾಗಿದೆ.ಇದು ಯಶಸ್ವಿಯಾದರೆ ವಿಜ್ಞಾನಿಗಳಿಗೆ ಮನುಷ್ಯ ಜೀವ ಕೋಶವನ್ನು ಕೃತಕವಾಗಿ ಸಂಪೂರ್ಣ ತಮ್ಮ ವಿನ್ಯಾಸ ಪ್ರಕಾರ ನಿರ್ಮಿಸಲು ಸಾಧ್ಯ ಎಂಬ ಭರವಸೆ ಇದೆ. ಹ್ಯೂಮನ್ ಜೆನೋಂ ಪ್ರಾಜೆಕ್ಟರೈಟ್(ಎಚ್‌ಜಿಪಿರೈಟ್) ಎಂದು ಯೋಜನೆಗೆ ಹೆಸರು ಇರಿಸಲಾಗಿದೆ. ಈ ಯೋಜನೆ ಮೂಲಕ ಅಧ್ಯಯನಕ್ಕಾಗಿ ಸಿಂತೆಟಿಕ್ ಜೀನ್‌ಗಳನ್ನು ಕ್ರೋಮೋಝೋಮ್‌ಗಳನ್ನು ನಿರ್ಮಿಸಲು ಸಂಶೋಧಕರಿಗೆ ಅವಕಾಶ ಸಿಗಲಿದೆ. ಇದರಲ್ಲಿ ಕ್ರೋಮೋಝೋಮ್ 21 ಇವೆ. ಡಾರ್ವಿನ್ ಸಿಂಡ್ರೋಮ್‌ಗೆ ಪ್ರತಿಕ್ರಿಯಿಸುವ ಒಂದು ಎಕ್ಸ್‌ಟ್ರಾ ಕಾಪಿ ಇದಾಗಿದೆ.ಆದರೆ ಈ ಸಂಶೋಧನೆಯ ಪರಿಣಾಮ ದೂರವ್ಯಾಪಕ ಬಳಕೆಗೆ ದೊರಕಲಿದೆ ಎಂದು ಭಾವಿಸಲಾಗಿದೆ. ಎಬೋ, ಝಿಕಾದಂತಹ ರೋಗಗಳ ವಿರುದ್ಧ ಪ್ರತಿರೋಧಕಗಳನ್ನು ಬೆಳೆಸಲು, ಕ್ಯಾನ್ಸರ್ ಪ್ರತಿರೋಧಕ್ಕೆ ಕೋಶಗಳನ್ನು ಲ್ಯಾಬ್‌ನಲ್ಲಿ ತಯಾರಿಸುವುದು ಮುಂತಾದ ವಿಷಯಗಳಲ್ಲಿ ಇದು ಕ್ರಾಂತಿಕಾರಿಯಾದ ಪ್ರಗತಿಯನ್ನು ತಂದು ಕೊಡಲಿದೆ ಎಂದು ಈಗ ನಿರೀಕ್ಷಿಸಲಾಗಿದೆ.
ವಿಜ್ಞಾನದ ಹೊಸಬೆಳವಣಿಗೆಯ ಕುರಿತು ವಿಜ್ಞಾನಿಗಳು ನಿನ್ನೆ ಲೇಖನ ಬರೆದಿದ್ದಾರೆ. ಮನುಷ್ಯ ಜಿನೋಮ್‌ಗೆ ಸಂಬಂಧಿಸಿ ಮುಂದಿನ ಘಟ್ಟಕ್ಕೆ ಇಟ್ಟ ಹೆಜ್ಜೆ ಇದೆಂದು ಅವರು ಪ್ರತಿಪಾದಿಸಿದ್ದಾರೆ. ನ್ಯೂಯಾರ್ಕ್ ಯುನಿವರ್ಸಿಟಿಯ ಪ್ರೋ. ಜೆಫ್ ಬಾಯ್ಕಾ ಹೊಸ ಯೋಜನೆಗೆ ನೇತೃತ್ವವನ್ನು ನೀಡುತ್ತಿದ್ದಾರೆ.ಎಚ್‌ಜಿಪಿರೈಟ್ ಒಂದು ಸಹಜ ಪ್ರಗತಿಯಾಗಿದೆ ಎಂದು ಇದಕ್ಕೆ ಸಂಬಂಧಿಸಿದ ಸಂಶೋಧನೆ ಈಗ ರೀಡಿಂಗ್ ಮೋಡ್‌ನಿಂದ ರೈಟಿಂಗ್ ಮೋಡಿಗೆ ಬದಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಜಿನೋಮ್ ಎಡಿಟ್ಟಿಂಗ್‌ಗೆ ಸಂಬಂಧಿಸಿ ಕಳೆದ ತಿಂಗಳು ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ರಹಸ್ಯ ಸಭೆ ನಡೆದಿತ್ತು. ಆನಂತರ ಇದರ ಬಗ್ಗೆ ಹೊಸ ಪೇಪರ್‌ನ್ನು ರಂಗಕ್ಕಿಳಿಸಲಾಗಿದೆ. ವಿಜ್ಞಾನಿಗಳು, ವಕೀಲರು, ಸರಕಾರಿ ಅಧಿಕಾರಿಗಳು ಸೇರಿದ್ದ ಸಭೆಯಿಂದ ಪತ್ರಕರ್ತರನ್ನು ದೂರ ಇರಿಸಲಾಗಿತ್ತು. ಮನುಷ್ಯ ಕೋಶದೊಳಗೆ ಲ್ಯಾಬ್‌ನಲ್ಲಿ ನಿರ್ಮಿಸುವ ಇಂಜಿನಿಯರಿಂಗ್ ಆದ ಮನುಷ್ಯ ನಿರ್ಮಿತ ಜಿನೋಮ್‌ಗಳ ತಯಾರಿ ಖರ್ಚು ಕಡಿಮೆ ಮಾಡುವುದಕ್ಕಾಗಿ ಈ ಗುಂಪು ರೂಪುರೇಷೆ ಸಿದ್ಧಪಡಿಸಿದೆ.







