ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಪುತ್ತೂರು, ಜೂ. 3: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಬೆಂಗಳೂರಿನ ಸಿಎಂಆರ್‌ಐಟಿ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಸೃಷ್ಟಿ-2016ರಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಅಭಿಶೇಕ್ ಸಿ., ಡಿಪಿನ್ ಕೆ.ವಿ., ಹರಿಶಂಕರ್ ಕೆ. ಮತ್ತು ಕಾವ್ಯಶ್ರೀ ಎಸ್. ಉಪನ್ಯಾಸಕ ಪ್ರೊ.ಪ್ರಶಾಂತ್ ಆಚಾರ್‌ರ ಮಾರ್ಗದರ್ಶನದಲ್ಲಿ ತಯಾರಿಸಿದ ‘ಫಿಸಿಕೋ ಕೆಮಿಕಲ್ ಅನಾಲಿಸಿಸ್ ಆಫ್ ವಾಟರ್ ಆ್ಯಂಡ್ ಸಾಯಿಲ್ ಇನ್ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯ ಮಂಗಳೂರು’ ಎಂಬ ವಿಷಯದ ಬಗ್ಗೆ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಈ ಪ್ರಶಸ್ತಿ ಲಭಿಸಿದೆ.
Next Story





