Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಲಸಿಗ ಕಾರ್ಮಿಕರು ಯಾವುದೇ ಸಂದರ್ಭದಲ್ಲಿ...

ವಲಸಿಗ ಕಾರ್ಮಿಕರು ಯಾವುದೇ ಸಂದರ್ಭದಲ್ಲಿ ಸ್ಫೋಟಿಸುವ ಟೈಮ್ ಬಾಂಬ್‌ಗಳಿದ್ದಂತೆ : ಪತ್ರಕರ್ತನ ಎಚ್ಚರಿಕೆ

ಸೌದಿ ಸಂಕಟ

ವಾರ್ತಾಭಾರತಿವಾರ್ತಾಭಾರತಿ3 Jun 2016 6:20 PM IST
share
ವಲಸಿಗ ಕಾರ್ಮಿಕರು ಯಾವುದೇ ಸಂದರ್ಭದಲ್ಲಿ ಸ್ಫೋಟಿಸುವ ಟೈಮ್ ಬಾಂಬ್‌ಗಳಿದ್ದಂತೆ : ಪತ್ರಕರ್ತನ ಎಚ್ಚರಿಕೆ

ಜಿದ್ದಾ, ಜೂ. 3: ಇತ್ತೀಚೆಗೆ ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಕಾರ್ಮಿಕರು ತಮಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಿಲ್ಲ ಎಂಬ ಸಿಟ್ಟಿನಿಂದ ತಮ್ಮ ಕಂಪೆನಿಯ ಬಸ್‌ಗಳಿಗೆ ಬೆಂಕಿಕೊಟ್ಟಿದ್ದು ದೊಡ್ಡ ಸುದ್ದಿಯಾಯಿತು.

ಈ ಘಟನೆಯ ಹಿನ್ನೆಲೆಯಲ್ಲಿ, ದೇಶದಲ್ಲಿರುವ ವಲಸಿಗರ ಪರಿಸ್ಥಿತಿಯ ಬಗ್ಗೆ ಚರ್ಚೆಗಳು ನಡೆದವು. ಇದೇ ವಿಷಯದಲ್ಲಿ ಸೌದಿ ಪತ್ರಕರ್ತ ಅಬ್ದುಲ್‌ರಹ್ಮಾನ್ ಸಆದ್ ಅಲ್ ಅರಾಬಿ ‘ವಲಸಿಗ ಕಾರ್ಮಿಕರು ನಮ್ಮ ದೇಶಕ್ಕೆ ಬೆದರಿಕೆಯಾಗಿದ್ದಾರೆ’’ ಎಂಬ ವಿಷಯದಲ್ಲಿ ‘ಸೌದಿ ಗಝೆಟ್’ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ಈ ಘಟನೆಯು ದೇಶದ ಕಣ್ಣನ್ನು ತೆರೆಯಬೇಕು ಎಂದು ಅವರು ತನ್ನ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಹೀಗೆ ಬರೆಯುತ್ತಾರೆ:

ಈ ದೇಶದಲ್ಲಿರುವ ಅಗಾಧ ಸಂಖ್ಯೆಯ ವಲಸಗಿ ಕಾರ್ಮಿಕರು ಅಪಾಯಕಾರಿಯಾಗಬಹುದು ಎಂಬುದನ್ನು ನಾವು ಮನಗಾಣಬೇಕು. ನಮ್ಮ ಆರ್ಥಿಕತೆಗೆ ಮತ್ತು ಇತರ ಕ್ಷೇತ್ರಗಳಲ್ಲಿ ವಿದೇಶಿ ಕಾರ್ಮಿಕರು ನೀಡಿರುವ ಕೊಡುಗೆಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಆದಾಗ್ಯೂ, ಅವರ ಪೈಕಿ ಕೆಲವರು ಈ ದೇಶಕ್ಕೆ ಭದ್ರತಾ ಬೆದರಿಕೆಯಾಗಬಲ್ಲರು. ನನ್ನ ಪ್ರಕಾರ, ಇಂಥ ಕಾರ್ಮಿಕರು ಯಾವಾಗ ಬೇಕಾದರೂ ಸ್ಫೋಟಿಸಬಲ್ಲ ಟೈಮ್ ಬಾಂಬ್‌ಗಳಿದ್ದಂತೆ.

ವೈಯಕ್ತಿಕ ಅನುಭವಗಳ ಬಗ್ಗೆ ಬರೆದಿರುವ ಅಲ್ ಅರಾಬಿ, ‘‘ನಾವು ಶ್ರೀಮಂತ ದೇಶವಾಗಿರುವುದರಿಂದ ಹೆಚ್ಚಿನ ವಲಸಿಗರು ನಮ್ಮನ್ನು ದ್ವೇಷಿಸುತ್ತಾರೆ ಹಾಗೂ ನಮ್ಮ ವಿರುದ್ಧ ಆಕ್ರೋಶವಿದೆ’’.

ಸೌದಿ ಹಾಗೂ ಅದರ ನಾಗರಿಕರ ಬಗ್ಗೆ ವಲಸಿಗರು ಯಾಕೆ ಕೋಪಗೊಂಡಿದ್ದಾರೆ ಎಂದು ತನಗೆ ಗೊತ್ತಿಲ್ಲ. ಆದರೆ ವಲಸಿಗರ ದೇಶಗಳ ಮಾಧ್ಯಮಗಳು ಪ್ರತಿಯೊಂದು ಘಟನೆಯನ್ನು ಉತ್ಪ್ರೇಕ್ಷಿಸಿ ವರದಿ ಮಾಡುತ್ತವೆ ಹಾಗೂ ಇದು ಜನರಲ್ಲಿ ನಮ್ಮ ದೇಶದ ವಿರುದ್ಧ ಅನಗತ್ಯ ಆಕ್ರೋಶವನ್ನು ಹುಟ್ಟುಹಾಕುತ್ತದೆ ಎಂದು ಅವರು ಬರೆಯುತ್ತಾರೆ.

‘‘ಅವರು ಯಾಕೆ ನಮ್ಮ ಬಗ್ಗೆ ಕೋಪಗೊಂಡಿದ್ದಾರೆ ನನಗೆ ಗೊತ್ತಿಲ್ಲ. ನಾವು ಅವರ ಹಣವನ್ನು ಕದ್ದಿದ್ದೇವೆ ಅಥವಾ ಕಸಿದುಕೊಂಡಿದ್ದೇವೆ ಎಂಬಂತೆ ಅವರು ವರ್ತಿಸುತ್ತಾರೆ. ಆದರೆ, ಸತ್ಯ ಏನೆಂದರೆ ನಮ್ಮ ಸಂಪನ್ಮೂಲಗಳು ಮತ್ತು ಹಣ ದೇವರಿಂದ ಸಿಕ್ಕಿದ ಆಶೀರ್ವಾದ. ಇಂಥ ಆಶೀರ್ವಾದ ಮತ್ತು ಹಣಕ್ಕೆ ನಾವು ಸೌದಿಗಳು ಅರ್ಹರಲ್ಲ ಎಂಬುದಾಗಿಯೂ ಅವರಲ್ಲಿ ಕೆಲವರು ಭಾವಿಸುತ್ತಾರೆ’’.

ಇದೇ ಕಾರಣಕ್ಕೆ ಕೆಲವರಿಗೆ ಸರಿಯಾದ ಸಮಯದಲ್ಲಿ ಸಂಬಳ ಸಿಗದಾಗ ಉಗ್ರರೂಪ ತಾಳುತ್ತಾರೆ. ಸೌದಿ ಅರೇಬಿಯ ಮತ್ತು ಎಲ್ಲಾ ಸೌದಿಗಳು ಕಳ್ಳರು ಮತ್ತು ಕ್ರಿಮಿನಲ್‌ಗಳು ಎಂಬಂತೆ ವರ್ತಿಸಲು ಅವರು ಆರಂಭಿಸುತ್ತಾರೆ. ಇಂಥ ಭಾವನೆಯನ್ನು ಅವರಲ್ಲಿ ಮೂಡಿಸುವಲ್ಲಿ ಅವರ ದೇಶಗಳ ಮಾಧ್ಯಮಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಇಂಥ ಘಟನೆಗಳನ್ನು ಅವುಗಳು ವೈಭವೀಕರಿಸಿ ವರದಿ ಮಾಡುತ್ತವೆ.

ಅಲ್-ಅರಾಬಿ ಇದಕ್ಕೊಂದು ಪರಿಹಾರವನ್ನೂ ಸೂಚಿಸುತ್ತಾರೆ. ವಲಸಿಗರ ಸ್ಥಾನದಲ್ಲಿ ಸೌದಿ ಉದ್ಯೋಗಿಗಳನ್ನು ನೇಮಿಸುವುದು ವಲಸಿಗ ಸಮಸ್ಯೆಯನ್ನು ನಿಭಾಯಿಸುವ ಅತ್ಯಂತ ಸೂಕ್ತ ವಿಧಾನವಾಗಿದೆ ಎಂದು ಅವರು ಭಾವಿಸುತ್ತಾರೆ.

ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸೌದಿ ಪ್ರಜೆಗಳಿಗೆ ಉತ್ತಮ ಸಂಬಳ ನೀಡಬೇಕು ಹಾಗೂ ಅವರ ತರಬೇತಿ ವೆಚ್ಚವನ್ನು ಕಂಪೆನಿಗಳು ಭರಿಸಬೇಕು ಎಂಬ ಸಲಹೆಯನ್ನು ಅವರು ನೀಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X