ಉಳ್ಳಾಲ ದರ್ಗಾ ಸಮಿತಿ ಸಭೆ: ಆರು ಮಂದಿಗೆ ಹಲ್ಲೆ

ಉಳ್ಳಾಲ, ಜೂ. 3: ಉಳ್ಳಾಲ ದರ್ಗಾದಲ್ಲಿ ಶುಕ್ರವಾರ ನಡೆದ ಆಡಳಿತ ಕಮಿಟಿಯ ಸಭೆಯಲ್ಲಿ ಜಟಾಪಟಿ ನಡೆದು ಆರು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು ಹಲ್ಲೆಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ದರ್ಗಾದ ನೂತನ ಆಡಳಿತ ಕಮಿಟಿ ಸದಸ್ಯರ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆದು ಆರು ಮಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಹಲ್ಲೆಗೊಳಗಾದವರನ್ನು ಅಳೇಕಳದ ನಿವಾಸಿಗಳಾದ ಸೈಯದ್ ಝಿಯಾದ್ ತಂಙಳ್(40) ಯು.ಪಿ ಅಬ್ದುಲ್ ಹಮೀದ್(40) ಕೋಡಿಯ ಅಬ್ದುಲ್ ಅಝೀಝ್(43)ಮುಕ್ಕಚ್ಚೇರಿಯ ನಿವಾಸಿಗಳಾದ ಮುಹಮ್ಮದ್ ತಾಹಿರ್ ಹಾಜಿ (63) ಮಹಮ್ಮದ್ ಸಮೀರ್ (37) ಉಳ್ಳಾಲದ ಯು.ಡಿ.ಅಬ್ದುಲ್ ರವೂಫ್ ಹಾಜಿ (52) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





