ಮಂಗಳೂರು ವಿವಿ: ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎ ಪದವಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಕೊಣಾಜೆ, ಜೂ. 3: ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಮಂಗಳಗಂಗೋತ್ರಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಯು.ಸಿ ಅಥವಾ ತತ್ಸಮಾನ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ 2016-17ರ ಶೈಕ್ಷಣಿಕ ವರ್ಷದ ಬಿ.ಎ., ಬಿ.ಕಾಂ. ಹಾಗೂ ಬಿ.ಬಿ.ಎಂ. ಪದವಿ ಕೋರ್ಸುಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಪತ್ರ ಹಾಗೂ ಕೈಪಿಡಿಯನ್ನು ಮಂಗಳಗಂಗೋತ್ರಿ (ಕೊಣಾಜೆ)ಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯಿಂದ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.
ಅರ್ಜಿ ಪತ್ರಗಳನ್ನು ಸ್ವೀಕರಿಸಲು ಜೂ. 14 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.:08242287669, 9449283984ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





