ರಮಝಾನ್‌ಗಾಗಿ ಮಸೀದಿಗಳಿಗೆ ಧರ್ಮಾರ್ಥ ಅಕ್ಕಿ ಹಂಚುವಂತೆ ಜಯಲಲಿತಾ ಆದೇಶ
ಚೆನ್ನೈ, ಜೂ.3: ಮುಂದಿನ ವಾರ ಆರಂಭವಾಗುವ ಪವಿತ್ರ ಮಾಸ ರಮಝಾನ್‌ನ ವೇಳೆ ಗಂಜಿಯನ್ನು ತಯಾರಿಸಲು ಮಸೀದಿಗಳಿಗೆ ಧರ್ಮಾರ್ಥ ಅಕ್ಕಿ ಪೂರೈಸುವಂತೆ ತಮಿಳುನಾಡಿನ ಸರಕಾರವು ಗುರುವಾರ ಆದೇಶ ನೀಡಿದೆ.
ಸುಮಾರು 3 ಸಾವಿರ ಮಸೀದಿಗಳಿಗೆ 4,600 ಟನ್ ಅಕ್ಕಿಯನ್ನು ಹಂಚುವಂತೆ ತಾನು ಆದೇಶ ನೀಡಿದ್ದೇನೆಂದು ಮುಖ್ಯಮಂತ್ರಿ ಜೆ.ಜಯಲಲಿತಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ಯೋಜನೆಯನ್ನು ಮುಸ್ಲಿಂ ಸಮುದಾಯ ವ್ಯಾಪಕವಾಗಿ ಸ್ವಾಗತಿಸಿದೆ. ಈ ವರ್ಷವೂ ಅಕ್ಕಿ ವಿತರಣೆಯನ್ನು ಮುಂದುವರಿಸಬೇಕೆಂಬ ಮನವಿಗಳು ಬಂದಿರುವುದರಿಂದ ಮಸೀದಿಗಳಿಗೆ ಅಕ್ಕಿ ಹಂಚುವಂತೆ ತಾನು ಆದೇಶ ನೀಡಿದ್ದೇನೆಂದು ಅವರು ಹೇಳಿದ್ದಾರೆ. ಜಯಾರ ಹಿಂದಿನ ಅಧಿಕಾರವಧಿಯಲ್ಲಿ 2001ರಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು.
ಮಸೀದಿಗಳಿಗೆ ಸಾಕಷ್ಟು ಪ್ರಮಾಣದ ಅಕ್ಕಿ ಬಿಡುಗಡೆಗೊಳಿಸುವಂತೆ ಜಿಲ್ಲಾ ಕಲೆಕ್ಟರ್‌ಗಳಿಗೆ ಆದೇಶಿಸಲಾಗಿದೆ. 3 ಸಾವಿರ ಮಸೀದಿಗಳಿಗೆ ಈ ಯೋಜನೆಯ ಲಾಭ ದೊರೆಯಲ್ಲಿದ್ದು, ಬೊಕ್ಕಸಕ್ಕೆ ರೂ.2.4ಕೋಟಿ ಖರ್ಚು ತಗಲಲಿದೆಯೆಂದು ಹೇಳಿಕೆ ತಿಳಿಸಿದೆ.
Next Story





