ರವಿವಾರ ಮರ್ರೆ-ಜೊಕೊವಿಕ್ ಫೈನಲ್ ಫೈಟ್

ಪ್ಯಾರಿಸ್, ಜೂ.3: ಹಾಲಿ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು 6-4, 6-2, 4-6, 6-2 ಸೆಟ್‌ಗಳ ಅಂತರದಿಂದ ಮಣಿಸಿದ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಫ್ರೆಂಚ್ ಓಪನ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿರುವ ಮರ್ರೆ ರವಿವಾರ ನಡೆಯುವ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
ಮರ್ರೆ-ಜೊಕೊವಿಕ್ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ 7ನೆ ಬಾರಿ ಸೆಣಸಾಡಲಿದ್ದಾರೆ. ಪ್ರಮುಖ ಟೂರ್ನಿಯಲ್ಲಿ 20ನೆ ಬಾರಿ ಫೈನಲ್ ಆಡಲಿರುವ ಜೊಕೊವಿಕ್ ಚೊಚ್ಚಲ ಫ್ರೆಂಚ್ ಓಪನ್ ಕಿರೀಟ ಎದುರು ನೋಡುತ್ತಿದ್ದಾರೆ. ಅವರು ಇಲ್ಲಿ ಪ್ರಶಸ್ತಿ ಜಯಿಸಿದರೆ ಎಲ್ಲ ಗ್ರಾನ್‌ಸ್ಲಾಮ್ ಜಯಿಸಿದ ವಿಶ್ವದ 8ನೆ ಆಟಗಾರ ಎನಿಸಿಕೊಳ್ಳಲಿದ್ದಾರೆ.
Next Story





