ಲಿಬಿಯ ಸಮುದ್ರ ದಂಡೆಯಲ್ಲಿ 104 ಹೆಣಗಳು ಪತ್ತೆ
ಟ್ರಿಪೋಲಿ (ಲಿಬಿಯ), ಜೂ. 3: ಲಿಬಿಯದ ಪಶ್ಚಿಮದ ಪಟ್ಟಣ ಝ್ವಿರದ ಸಮುದ್ರ ದಂಡೆಯಲ್ಲಿ ಕನಿಷ್ಠ 104 ವಲಸಿಗರ ಹೆಣಗಳು ತೇಲಿ ಬಂದಿವೆ ಎಂದು ನೌಕಾಪಡೆ ಶುಕ್ರವಾರ ಹೇಳಿದೆ.
‘‘ಗುರುವಾರ 104 ಶವಗಳನ್ನು ಮೇಲೆತ್ತಲಾಗಿದೆ. ಆದರೆ, ಸಾಮಾನ್ಯ ದೋಣಿಯೊಂದು 115-125 ಜನರನ್ನು ಒಯ್ಯುವ ಸಾಮರ್ಥ್ಯ ಹೊಂದಿರುವುದರಿಂದ ಮೃತರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆಯಿದೆ’’ ಎಂದು ಲಿಬಿಯ ನೌಕಾಪಡೆ ವಕ್ತಾರರೋರ್ವರು ತಿಳಿಸಿದರು.
ಲಿಬಿಯದ ದಡದಿಂದ 300 ಕಿ.ಮೀ. ದೂರದಲ್ಲಿರುವ ಇಟಲಿಗೆ ಕಿಕ್ಕಿರಿದ ಹಾಗೂ ಅಸುರಕ್ಷಿತ ದೋಣಿಗಳಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ.
Next Story





