ಸರಣಿ ಕಳ್ಳತನ ಆರೋಪಿಗೆ ನ್ಯಾಯಾಂಗ ಬಂಧನ
ಪುತ್ತೂರು, ಜೂ.3: ನಗರದ 7 ಮನೆಗಳಿಗೆ ನುಗ್ಗಿ ನಗ -ನಗದು ಕಳವು ಮಾಡಿದ ಪ್ರಕರಣದ ಆರೋಪಿ ತಂಗರಾಜುವಿನ ಪೊಲೀಸ್ ಕಸ್ಟಡಿಯ ಅವಧಿ ಶುಕ್ರವಾರ ಮುಗಿದಿದ್ದು, ಇದೀಗ 15 ದಿನದ ನ್ಯಾಯಾಂಗ ಬಂಧನವಾಗಿದೆ.
ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪುತ್ತೂರು ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿ ಪುತ್ತೂರು ನ್ಯಾಯಾಲಯ ಆದೇಶಿಸಿದೆ. ಈತ ಕಳವುಗೈದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





