ಗಾಂಜಾ ಪ್ರಕರಣ: ಆರೋಪಿ ಸೆರೆ
ಕಾಸರಗೋಡು, ಜೂ.3: ಒಂದೂವರೆ ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚಾಲದ ಸಿ.ಎಚ್.ಮುಹಮ್ಮದ್ ಶಾಫಿ (36) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ವಿದ್ಯಾನಗರ ಜಲಪ್ರಾಧಿಕಾರ ಕಚೇರಿ ಸಮೀಪದಿಂದ ಒಂದೂವರೆ ಕಿಲೋ ಗಾಂಜಾ ಸಹಿತ ಸಫ್ವಾನ್ ಮತ್ತು ಮುಹಮ್ಮದ್ ಅಲಿಯನ್ನು ಬಂಧಿಸಲಾಗಿತ್ತು. ಪರಾರಿಯಾಗಿದ್ದ ಶಾಫಿಯನ್ನು ಎರಡು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





