ವಿಪಸ್ಸನ ಧ್ಯಾನ’ ಪದ್ಧತಿ ಜಾರಿಗೆ ಬೌದ್ಧಸಾಹಿತ್ಯ ಸಮ್ಮೇಳನ ನಿರ್ಣಯ
ಬೆಂಗಳೂರು, ಜೂ. 3: ಪ್ರಾಥಮಿಕ-ಪ್ರೌಢ ಶಿಕ್ಷಣ ಹಂತ ದಲ್ಲಿ ಬೌದ್ಧದಮ್ಮದ ‘ವಿಪಸ್ಸನ ಧ್ಯಾನ’ ಪದ್ಧತಿಯನ್ನು ಜಾರಿಗೆ ತರಬೇಕು. ಯೋಗ ಶಿಕ್ಷಣಕ್ಕೆ ನೀಡಿದ ಪ್ರಾಶಸ್ತ್ಯ ವನ್ನು ಈ ಪದ್ಧತಿಗೂ ನೀಡಬೇಕೆಂದು ಬೌದ್ಧ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡಿದೆ.
ಶುಕ್ರವಾರ ಧಾರವಾಡದ ರಂಗಾಯಣದಲ್ಲಿ ಪ್ರಬುದ್ಧ ಭಾರತ ನಿರ್ಮಾಣ ಫೌಂಡೇಷನ್, ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿ ಅಕಾಡಮಿ, ಬೌದ್ಧ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಮೇಲ್ಕಂಡ ನಿರ್ಣಯ ಕೈಗೊಳ್ಳಲಾಗಿದೆ. ಐತಿಹಾಸಿಕ ಬೌದ್ಧ ಕ್ಷೇತ್ರ ಗಳನ್ನು ಉತ್ಖನನ ಕಾರ್ಯವನ್ನು ಬೇಗನೆ ಪೂರ್ಣಗೊಳಿ ಸಬೇಕು ಎಂದು ಒತ್ತಾಯಿಸಿದೆ.ಲ್ಪಸಂಖ್ಯಾತರ ಆಯೋಗಕ್ಕೆ ಅಧ್ಯಕ್ಷರ ನೇಮಕದಲ್ಲಿ ಬೌದ್ಧರನ್ನು ಪರಿಗಣಿಸಬೇಕು. ಬೌದ್ಧ ಕ್ಷೇತ್ರಗಳಿಗೆ ಪ್ರವಾಸ ತೆರಳಲು ಅನುದಾನ ನೀಡಬೇಕು. ಬೌದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಬೇಕು. ಬೌದ್ಧ ಚರಿತ್ರೆಯ ಸಂಪುಟಗಳನ್ನು ಪ್ರಕಟಿಸಲು ಸರಕಾರ ತಜ್ಞರ ಸಮಿತಿಯನ್ನು ರಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಈ ಸಮ್ಮೇಳನ ಒತ್ತಾಯಿಸಿದೆ.
ರಾಜ್ಯದ ಬೌದ್ಧ ಕೇಂದ್ರಗಳಾದ ಮಹಾಬೋಧಿ ಸೊಸೈಟಿ, ಸ್ಪೂರ್ತಿಧಾಮ, ಸಿದ್ಧಾರ್ಥ ಬುದ್ಧ ವಿಹಾರಕ್ಕೆ ಅಗತ್ಯ ನೆರವು ನೀಡಬೇಕು. ಬೌದ್ಧ ಸಾಹಿತ್ಯ ಸಮ್ಮೇಳನ ವನ್ನು ಸರಕಾರವೆ ಸಂಘಟಿಸಬೇಕು. ಎಲ್ಲ ವಿವಿಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಬೌದ್ಧ ಅಧ್ಯಯನ ಪೀಠಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.ರ ಸಂವಿಧಾನದ ತಿದ್ದುಪಡಿಯಂತೆ ಬೌದ್ಧ ಧರ್ಮ ದೀಕ್ಷೆ ತೆಗೆದುಕೊಳ್ಳುವ/ಮತಾಂತರಗೊಳ್ಳುವ ಎಸ್ಸಿ-ಎಸ್ಟಿ ವರ್ಗದ ಜನರಿಗೆ ನವಬೌದ್ಧ/ಮತಾಂತರ ಗೊಂಡ ಬೌದ್ಧ ಎಂದು ನಮೂನೆ-1ರಲ್ಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸಲು ಆದೇಶ ಹೊರಡಿಸ ಬೇಕೆಂದು ಮನವಿ ಮಾಡಿದೆ.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಹಾಬೋಧಿ ಸೊಸೈಟಿಯ ಭಿಕ್ಕು ಆನಂದ ಬಂತೇಜಿ, ಮನುಕುಲದ ಎಲ್ಲರ ಒಳಿತಿಗಾಗಿ ಬುದ್ಧರ ಬೋಧನೆಗಳು ಇಂದು ಅತ್ಯಂತ ಪ್ರಸ್ತುತ. ಎಲ್ಲರು ಅನುಸರಿಬಹುದಾದ ಸರಳ ಬೋಧನೆಗ ಳನ್ನು ಬುದ್ಧರು ಕೊಟ್ಟಿದ್ದು, ಈ ಜಗತ್ತು ಸುಂದರವಾಗಲು ಬುದ್ಧ ಶಾಸನ ಜಾರಿಗೆ ಬರಬೇಕೆಂದು ಆಶಿಸಿದರು.
ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಎಸ್ಸಿ-ಎಸ್ಟಿ ಸಮುದಾಯದವರು ಎದುರಿಸುತ್ತಿರುವ ಧಾರ್ಮಿಕ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ಪರಿಶಿಷ್ಟರು ಧಾ ರ್ಮಿಕ ಶೋಷಣೆಯಿಂದ ಮುಕ್ತರಾಗಲು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು ಯುವಕರು ಪರಾವಲಂಬಿ ಗಳಾಗದೆ ಧಮ್ಮ ತತ್ವ ಮತ್ತು ಪಂಚಶೀಲ ಅಳವಡಿಸಿ ಕೂಂಡಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದರು.