ನಿಮಗೆ ಯಾವಾಗಲೂ ಹಸಿವಾಗುತ್ತಲೇ ಇರುತ್ತದೆಯೆ?
ಇಲ್ಲಿವೆ ಅದಕ್ಕೆ ಕಾರಣಗಳು ಮತ್ತು ಪರಿಹಾರಗಳು

ಹಸಿವೆ ಎನ್ನುವುದು ನಮ್ಮ ಮೇಲೆ ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರಲಿದೆ. ವ್ಯಕ್ತಿಯಾಗಿ ನೀವೆಷ್ಟೇ ಬಲಿಷ್ಠವಾಗಿದ್ದರೂ ಹಸಿವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಕಡಿಮೆಯಾಗುತ್ತದೆ, ಗಮನದ ಕೊರತೆ ಕಾಣುತ್ತದೆ ಮತ್ತು ಹೊಟ್ಟೆ ನಿಮ್ಮ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತದೆ. ನಿಮ್ಮ ದೇಹಕ್ಕೆ ಕೆಲಸ ಮಾಡಲು ಶಕ್ತಿ ಬಯಸುವುದೇ ಹಸಿವೆ. ಆದರೆ ಕೆಲವರ ಹೊಟ್ಟೆ ತುಂಬಿದ್ದರೂ ಏನಾದರೂ ತಿನ್ನುವ ಆಸೆ ಇರುತ್ತದೆ. ಇದನ್ನು ಪ್ರೇಡರ್ ವಿಲಿ ಸಿಂಡ್ರೋಮ್ ಎನ್ನುತ್ತಾರೆ. ನಿರಂತರವಾಗಿ ಹಸಿವೆಯ ಅನುಭವಾದರೆ ಇದು ತೀವ್ರವಾಗಿರುತ್ತದೆ. ಹೀಗೆ ತಿನ್ನುವ ಅಗತ್ಯವನ್ನು ಹೆಚ್ಚಿಸುವ ಕೆಲವು ವಿಷಯಗಳು ಯಾವುವು ಎಂದು ನಾವಿಲ್ಲಿ ಪರಿಶೀಲಿಸಿದ್ದೇವೆ.
ನಿದ್ದೆಯ ಕೊರತೆ
ನಮ್ಮಲ್ಲಿ ಬಹುತೇಕರು ನಾಲ್ಕರಿಂದ ಐದು ಗಂಟೆಯಷ್ಟೇ ಮಲಗುತ್ತೇವೆ. ಈ ನಿದ್ರಾಸಮಯಕ್ಕೆ ನಾವು ಹೊಂದಿಕೊಂಡಿರುತ್ತೇವೆ. ಆದರೆ ದೇಹಕ್ಕೆ ಅದರಿಂದಾಗುವ ಸಮಸ್ಯೆಯನ್ನು ಅಲಕ್ಷಿಸುತ್ತೇವೆ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ಇಲ್ಲದಿದ್ದರೆ ನಮ್ಮ ದೇಹದ ಕಾರ್ಯಗಳು ನಿಧಾನಗೊಳ್ಳುತ್ತವೆ. ಹಾರ್ಮೋನುಗಳ ಉತ್ಪಾದನೆಯೂ ನಿಧಾನವಾಗುತ್ತದೆ. ಹಾರ್ಮೋನುಗಳೇ ಹೊಟ್ಟೆ ಪೂರ್ಣವಾಗಿರುವ ಸಂಕೇತವನ್ನು ಮೆದುಳಿಗೆ ಕೊಡುವುದು. ಹಾರ್ಮೋನುಗಳೇ ಹಸಿವೆಯನ್ನು ಹೆಚ್ಚಿಸುವುದು. ಇನ್ನೊಂದು ಕಾರಣವೆಂದರೆ ನಿದ್ರೆಯ ಬದಲಾಗಿ ಆಹಾರವನ್ನು ವಿಶ್ರಾಂತಿಯಾಗಿ ಮೆದುಳು ಪ್ರಚೋದಿಸುವುದು.
ವೇಗದ ಚಯಾಪಚಯ ಕ್ರಿಯೆ
ಸತತ ಹಸಿವು ಇರುವ ಕೆಲವರಲ್ಲಿ ಮಾತ್ರ ವೇಗದ ಚಯಾಪಚಯ ಕ್ರಿಯೆ ಇರುತ್ತದೆ. ಸಹಜವಾಗಿಯೇ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿರುತ್ತದೆ. ಇದು ದೇಹವು ಕ್ಯಾಲೊರಿಗಳನ್ನು ವೇಗವಾಗಿ ಮುಗಿಸಲು ನೆರವಾಗುತ್ತದೆ. ಹೀಗಾಗಿ ಹೆಚ್ಚು ಶಕ್ತಿ ಬೇಕೆಂದು ಹೆಚ್ಚು ತಿನ್ನಬೇಕಾಗುತ್ತದೆ. ವೇಗದ ಚಯಾಪಚಯ ಇರುವ ವ್ಯಕ್ತಿಗಳು ಸರಾಸರಿ ವ್ಯಕ್ತಿಗಿಂತ 400 ಕ್ಯಾಲರಿ ಹೆಚ್ಚು ಕೊಬ್ಬು ಕರಗಿಸುತ್ತಾರೆ.ಕೆಲವೊಮ್ಮೆ ಮೂಳೆಗಳೂ ಹೆಚ್ಚು ಕ್ಯಾಲೊರಿ ಇಳಿಸಿ ವೇಗದ ಚಯಾಪಚಯ ಕ್ರಿಯೆಗೆ ಕಾರಣವಾಗುತ್ತದೆ. ದೇಹಧಾರ್ಡ್ಯ ಬೆಳೆಸುವವರಿಗೆ ಹೆಚ್ಚು ತಿನ್ನುವ ಅಗತ್ಯವಿರುತ್ತದೆ.
ಕಡು ಬಯಕೆ ಮತ್ತು ಹಸಿವೆ
ಸಾಮಾನ್ಯವಾಗಿ ನಾವು ತಿನ್ನುವ ಆಸೆಯನ್ನೇ ಹಸಿವೆ ಎಂದುಕೊಳ್ಳುತ್ತೇವೆ. ನನಗೆ ತಿನ್ನಬೇಕು ಎನ್ನುವ ಬದಲಾಗಿ ತಿನ್ನುವ ಅಗತ್ಯವಿದೆ ಎಂದುಕೊಳ್ಳುತ್ತೇವೆ. ನಮ್ಮ ದೇಹದ ಜೈವಿಕ ಸಂಕೇತಗಳ ಭಾಗ ಹಸಿವೆ. ತಿನ್ನುವ ಆಸೆಯೂ ಮಾನಸಿಕ ಜೈವಿಕವಾದುದು. ಇದು ಕೆಲವು ತಿನಿಸುಗಳತ್ತ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ. ಬಹಳ ಸಾರಿ ಬಯಕೆ ಮತ್ತು ಹಸಿವು ಜೊತೆಯಾಗೇ ಆಗುತ್ತದೆ.
ವೇಗ
ನಮ್ಮ ಕಾಲದಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ. ತಿನ್ನುವುದು ಕೂಡ. ವೇಗದ ಊಟ ಮತ್ತು ಸಮಯ ಉಳಿಸಲು ವೇಗವಾಗಿ ತಿನ್ನುವುದು ಧೀರ್ಘ ಕಾಲದಲ್ಲಿ ದೇಹಕ್ಕೆ ಹಾನಿಯುಂಟು ಮಾಡಬಹುದು. ನಿಧಾನವಾಗಿ ಊಟ ಮಾಡುವುದು ನಿಮಗೆ ಹೊಟ್ಟೆ ತುಂಬಿದ ಅನುಭವ ಕೊಡಲಿದೆ ಎಂದು ಅಧ್ಯಯನಗಳು ಹೇಳಿವೆ.
ಕೃಪೆ: www.healthdigezt.com







