ಜಿಶಾ ಅಮ್ಮ ಕಾಂಗ್ರೆಸ್ ನಾಯಕನ ಮನೆಯಲ್ಲಿ ಕೆಲಸ ಮಾಡಿದ್ದರು: ಜಿಶಾ ತಂದೆ ಪಾಪ್ಪು

ಕೊಚ್ಚಿ, ಜೂನ್ ,4: ಜಿಶಾ ಕೊಲೆಪ್ರಕರಣದಲ್ಲಿ ಜೋಮೋನ್ ಪುತ್ತನ್‌ಪುರಕ್ಕಲ್‌ರ ದೂರಿನ ಹಿನ್ನೆಲೆಯಲ್ಲಿ ಜಿಶಾರ ತಂದೆ ಪಾಪುರನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಯಿಂದ ಅಲುವ ಪೊಲೀಸ್ ಕ್ಯಾಂಪ್‌ಗೆ ಕರೆತಂದು ಸಾಕ್ಷ್ಯ ಪಡೆದುಕೊಳ್ಳುವ ಕೆಲಸ ಮುಂದುವರಿಯುತ್ತಿದೆ. ಜಿಶಾ ತಾಯಿ ರಾಜೇಶ್ವರಿ ಕಾಂಗ್ರೆಸ್ ನಾಯಕನ ಮನೆಯಲ್ಲಿ ಕೆಲಸ ಮಾಡಿದ್ದರು ಎಂದು ವಾಪ್ಪು ಆಸ್ಪತ್ರೆಯಲ್ಲಿಮಾಧ್ಯಮಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಅವರಿಂದ ಪೊಲೀಸರು ಸಾಕ್ಷ್ಯ ಪಡೆಯುತ್ತಿದ್ದ
ರಾಜೇಶ್ವರಿ ಕಾಂಗ್ರೆಸ್ ನಾಯಕನ ಮನೆಯಲ್ಲಿ ಕೆಲಸ ಮಾಡಿದ್ದ ವಿಷಯವನ್ನು ವಾಪ್ಪು ತನಿಖಾ ತಂಡದೊಂದಿಗೂ ಹೇಳಿದ್ದಾರೆ. 1990ರಲ್ಲಿ ಪೆರುಂಬಾವೂರಿನ ಗೂಡಂಗಡಿಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ರಾಜೇಶ್ವರಿ ಕಾಂಗ್ರೆಸ್ ನಾಯಕನ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ವಾಪ್ಪು ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು. ತಾನು ಮತ್ತು ಪತ್ನಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಿದ್ದರಿಂದ ತಾನು ದೂರವಾದೆ ಎಂದು ವಾಪ್ಪು ಹೇಳಿದ್ದಾರೆ.
ಹಾಗಿದ್ದರೂ ಜಿಶಾ ತನ್ನನ್ನು ಭೇಟಿಯಾಗಲು ಬರುತ್ತಿದ್ದಳು ಹಾಗೂ ಎಲ್ಲ ವಿಷಯಗಳನ್ನು ತನ್ನಲ್ಲಿ ಹೇಳುತ್ತಿದ್ದಳು ಎಂದು ವಾಪ್ಪು ತನಿಖಾ ತಂಡಕ್ಕೆ ಹೇಳಿದ್ದಾರೆ.ವಾಪ್ಪುವಿರೊಂದಿಗೆ ಸಾಕ್ಷ್ಯ ಪಡೆಯುವ ಕೆಲಸ ಮುಂದುವರಿಯುತ್ತಿದೆ. ಜೋಮೋನ್ ಪುತ್ತನ್‌ಪುರಕ್ಕಲ್‌ರ ವಿರುದ್ಧ ದೂರು ಕೊಟ್ಟದ್ದು ತನ್ನ ಅರಿವಿಗೆ ಬಂದು ಆಗಿರಲಿಲ್ಲ. ಒಬ್ಬ ಪೊಲೀಸ್ ಮತ್ತು ವಾರ್ಡ್ ಮೆಂಬರ್ ನನ್ನನ್ನು ವಂಚಿಸಿದ್ದಾರೆ ಎಂದು ವಾಪ್ಪು ಬಹಿರಂಗಪಡಿಸಿದ್ದಾರೆ. ಜೀವ ಬೆದರಿಕೆ ತನಗಿದೆ ಎಂದು ವಾಪ್ಪು ಮಾಧ್ಯಮಗಳಿಗೆ ತಿಳಿಸಿದ್ದಾರೆ.







