Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು ಕನ್ನಡಿಗರ ಸಮಸ್ಯೆಗೆ ಎರಡೂ...

ಕಾಸರಗೋಡು ಕನ್ನಡಿಗರ ಸಮಸ್ಯೆಗೆ ಎರಡೂ ರಾಜ್ಯಗಳು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು: ನಾರಾಯಣ ರೈ ಕುಕ್ಕುವಳ್ಳಿ

5ನೇ ಕರ್ನಾಟಕ ಗಡಿನಾಡ ಸಮ್ಮೇಳನ-2016

ವಾರ್ತಾಭಾರತಿವಾರ್ತಾಭಾರತಿ4 Jun 2016 5:54 PM IST
share
ಕಾಸರಗೋಡು ಕನ್ನಡಿಗರ ಸಮಸ್ಯೆಗೆ ಎರಡೂ ರಾಜ್ಯಗಳು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು: ನಾರಾಯಣ ರೈ ಕುಕ್ಕುವಳ್ಳಿ

ಪುತ್ತೂರು: ಗಡಿನಾಡು ಕಾಸರಗೋಡಿನಲ್ಲಿರುವ ಕನ್ನಡಿಗರು ಸಮಸ್ಯೆಗಳ ಸುಳಿಯಲ್ಲಿ ನಲುಗಿಹೋಗಿದ್ದಾರೆ. ಭಾಷಾ ಅಲ್ಪ ಸಂಖ್ಯಾತರಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವಾಗಬೇಕು. ಕಡ್ಡಾಯವಾಗಿ ಮಲಯಾಳ ಕಲಿಯುವ ಒತ್ತಡದಿಂದಾಗಿ ಕಾಸರಗೋಡಿನ ಕನ್ನಡಿಗರಿಗೆ ಉದ್ಯೋಗದಲ್ಲಿ ಸಮಸ್ಯೆಯಾಗುತ್ತಿದೆ. ಕರ್ನಾಟಕ ಮತ್ತುಕೇರಳ ರಾಜ್ಯ ಸರ್ಕಾರಗಳು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಸಮ್ಮೇಳನ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು. ಅವರು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಹಾಗೂ ಗಡಿನಾಡ ಧ್ವನಿ ಕನ್ನಡ ಮಾಸಪತ್ರಿಕೆಯ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ನಡೆದ ‘5ನೇ ಕರ್ನಾಟಕ ಗಡಿನಾಡ ಸಮ್ಮೇಳನ-2016’ ಇದರ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಗಡಿನಾಡು ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ನೌಕರರನ್ನು ನೇಮಿಸಬೇಕು ಎಂಬ ನ್ಯಾಯಾಲಯದ ಆದೇಶವಿದ್ದರೂ ಇದು ಪಾಲನೆಯಾಗುತ್ತಿಲ್ಲ. ಮಲಯಾಳಂ ಭಾಷೆಯ ಹೇರಿಕೆ ಅಲ್ಲಿ ಕನ್ನಡ ಭಾಷಿಕರಿಗೆ ಆತಂಕ ತಂದೊಡ್ಡಿದೆ. ಕನ್ನಡ ಕಲಿತವರಿಗೆ ಇತ್ತ ಕರ್ನಾಟಕವೂ ಇಲ್ಲ ಅತ್ತ ಕೇರಳವೂ ಇಲ್ಲ ಎಂಬ ಸ್ಥಿತಿಯಿದೆ ಎಂದರು.

ಕರ್ನಾಟಕಕ್ಕೆ ರಾಜಕೀಯ ಗಡಿಗಳಾಗಿದೆ ಹೊರತು ಭಾಷಿಕ ಮತ್ತು ಸಾಂಸ್ಕೃತಿಕ ಗಡಿಗಳಿಲ್ಲ. ಕನ್ನಡ ನೆಲ ಮತ್ತು ಭಾಷೆಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದ್ದು, ಮಹಾಜನ ವರದಿ ಜಾರಿಗೆ ಬರುವ ತನಕ ಕನ್ನಡಕ್ಕಾಗಿ ಅವಿರತ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಬಳಸಿಕೊಳ್ಳಲು ಕನ್ನಡಿಗರು ಸಫಲರಾಗಬೇಕು ಇಲ್ಲದಿದ್ದಲ್ಲಿ ಕನ್ನಡಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದರು.

ಬಾಷೆಯಲ್ಲಿ ಮೇಲು ಕೀಳೆಂಬುದಿಲ್ಲ. ಭಾಷೆಗಳ ನಡುವೆ ಏನನ್ನೂ ಎರವಲು ಪಡೆದುಕೊಳ್ಳಬಾರದು ಎಂಬ ಭಾವನೆ ಸರಿಯಲ್ಲ. ನೆರೆಹೊರೆಯ ಭಾಷೆಗಳಲ್ಲಿ ಕೊಡು ಕೊಳ್ಳುವ ವ್ಯವಹಾರ ನಡೆಯಬೇಕು. ನಮ್ಮ ಭಾಷೆಯನ್ನು ಪ್ರೀತಿಸಿ ಅನ್ಯ ಭಾಷೆಯನ್ನು ಗೌರವಿಸಬೇಕು. ಕ್ರೈಸ್ತರು ಕನ್ನಡ ಭಾಷೆಗೆ ಕೊಟ್ಟಿರುವ ಕೊಡುಗೆ ಅನನ್ಯವಾದುದು. ಜರ್ಮನ್ ಮಿಷನರಿಗಳು ಕನ್ನಡದ ಒಳಗೇನಿದೆ ಎಂಬುದುನ್ನು ಹುಡುಕಿ ಹೊರ ಜಗತ್ತಿಗೆ ಕಟ್ಟಿಕೊಟ್ಟಿದ್ದಾರೆ. ಅನೇಕ ಹಳೆಯ ಸಾಹಿತ್ಯವನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ.

ಸುಮಾರು 2 ಸಾವಿರ ವರ್ಷಗಳಿಂದಲೂ ಹೆಚ್ಚಿನ ಇತಿಹಾಸವುಳ್ಳ ಈ ಕನ್ನಡನಾಡು ನುಡಿ ಇಂದು ನೂರಾರು ಸಮಸ್ಯೆಗಳ ಸುಳಿಯೊಳಗೆ ಸಿಲುಕಿಕೊಂಡಿರುವುದು ಸವಾಲುಗಳನ್ನು ಎದರಿಸುತ್ತಿರುವುದು ನೋವಿನ ವಿಚಾರ ಎಂದರು.

ಮಾಹಿತಿಯನ್ನು ತುರುಕುವುದು ಶಿಕ್ಷಣವಲ್ಲ:

ಮಾಹಿತಿಯನ್ನು ಮಕ್ಕಳ ತಲೆಗೆ ತುರುಕುವುದು ಶಿಕ್ಷಣವಲ್ಲ. ಜೀವನಕಲೆ, ಮಾನವಕಲೆ, ಚಾರಿತ್ರ್ಯ ನಿರ್ಮಾಣ ಮಾಡುವುದು ಶಿಕ್ಷಣ, ವಿದ್ಯಾರ್ಥಿಗಳಲ್ಲಿ ಪ್ರೀತಿ, ಅಹಿಂಸೆ, ಶಿಸ್ತು, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳ ಬಿತ್ತನೆ ಕಾರ್ಯ ಹೆತ್ತವರು ಮತ್ತು ಶಿಕ್ಷಕರಿಂದ ನಡೆಯಬೇಕಾಗಿದೆ. ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಮಕ್ಕಳ ಸಂಖ್ಯೆಗಳು ಕಡಿಮೆಯಾಗಿ ಮುಚ್ಚಿಹೋಗುವ ಸ್ಥಿತಿಯಲ್ಲಿದೆ. ಪ್ರತಿಯೊಂದು ಮಕ್ಕಳೂ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚದೆ, ಈಗಾಗಲೇ ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಸುವ ಕೆಲಸವನ್ನು ಇಲಾಖೆ ಮಾಡಬೇಕಾಗಿದೆ.

ರೈತರ ಬೆವರಿನಲ್ಲಿ ನಮ್ಮ ಬದುಕಿದೆ:

ರೈತರ ಬೆವರಿನಲ್ಲಿ ನಮ್ಮ ಬದುಕಿದೆ. ಆದರೆ ಅವರ ಬದುಕು ದುಸ್ತರವಾಗಿದೆ. ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯಿಲ್ಲ. ರೈತರ ಬದುಕು ಹಸನು ಮಾಡಲು ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ ಆದರೆ ಅದು ರೈತರಿಗೆ ತಲುಪುತ್ತಿಲ್ಲ. ನಮ್ಮೆಲ್ಲರ ಹೊಣೆಯಾಗಿದೆ. ವೈಜ್ಞಾನಿಕವಾಗಿ ಜಗತ್ತು ಸಾಕಷ್ಟು ಮುಂದುವರಿದ್ದರೂ ನೀರು ಉತ್ಪಾಧಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ. ಅದನ್ನು ಪೃಕೃತಿಯೇ ನೀಡಬೇಕಾಗಿದೆ. ನೀರನ್ನು ಉಳಿಸುವ ಕೆಲಸವಾಗಬೇಕು. ನೇತ್ರಾವತಿ ತಿರುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಸ್ವಾಗತಾರ್ಹ, ನೇತ್ರಾವತಿಗಾಗಿ ನಾವು ಒಂದಾಗಬೇಕಾಗಿದೆ ಎಂದು ಹೇಳಿದರು.

ದೇಶ ಒಗ್ಗಟ್ಟಾಗಲು ಭಾಷೆ ಒಗ್ಗಟ್ಟಾಗಬೇಕು - ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದವಾನಂದ ಸ್ವಾಮೀಜಿ ಅವರು ಭಾಷೆಯ ಉಳಿವಿಗಾಗಿ ಸಂಘರ್ಷ ರಹಿತ ಸಂಘಟನೆಯ ಅಗತ್ಯವಿದೆ. ಜಾತಿ, ಮತ ಬೇಧ ಮೆರೆತು ನಾವು ದೇಶಕ್ಕಾಗಿ ಸಂಘಟಿತರಾಗಬೇಕಾಗಿದೆ. ದೇಶ ಒಗ್ಗಟ್ಟಾಗಬೇಕಾದರೆ ಮೊದಲು ಭಾಷೆ ಒಗ್ಗಟ್ಟಾಗಬೇಕು ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಸಂಘರ್ಷ ರಹಿತ ಯಾವುದೇ ಹೋರಾಟಕ್ಕೆ ನಾವು ಸಿದ್ದರಾಗಬೇಕು ಎಂದು ಅವರು ಹೇಳಿದರು.

ಎಕ್ಕಡ, ಎನ್ನಡ ಮಾತನಾಡುವವರ ನಡುವೆ ಇಂದು ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಕನ್ನಡ ಬಾಷೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು, ವಿಪರ್ಯಾಸವೆಂದರೆ ಇಂದು ಕನ್ನಡ ಶಾಲೆಗಳೇ ಮುಚ್ಚಲ್ಪಡುತ್ತಿದೆ, ಕನ್ನಡ ಶಾಲೆ ಮತ್ತು ಮಾತೃ ಭಾಷೆಯನ್ನು ಉಳಿಸಲು ಸರ್ವರೂ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದ ಸ್ವಾಮೀಜಿ ಭಾಷೆಗಳು ಹಲವಾರು ಇರಬಹುದು ಆದರೆ ಅದರ ಹಿಂದಿನ ಸಂಸ್ಕೃತಿಯನ್ನು ನಾವು ನೋಡಬೇಕು, ಭಾಷೆಯಿಂದ ದೇಶದ ವಿಕಸನವೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ ಮಾತನಾಡಿ ನಾಡು ನುಡಿ ಉಳಿವಿಗಾಗಿ ಎಲ್ಲರ ಪ್ರಯತ್ನ ಬೇಕಾಗಿದೆ ಎಂದರು.

ಗಡಿನಾಡಿನ ಅಭಿವೃದ್ದಿಗಾಗಿ ಪ್ರಾಮಾಣಿಕ ಪ್ರಯತ್ನ-ಶಕುಂತಳಾ ಶೆಟ್ಟಿ

ಗಡಿನಾಡ ಧ್ವನಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟ ಗಡಿನಾಡಿನ ಅಭಿವೃದ್ದಿಗಾಗಿ ನಾನು ಪ್ರಯತ್ನವನ್ನು ಮಾಡುತ್ತಿದ್ದು ಗಡಿನಾಡಿನ ಅಭಿವೃದ್ದಿಗಾಗಿ ಹೋರಾಟ ಮಾಡುವವರ ಜೊತೆ ಯಾವತ್ತೂ ನಾನಿದ್ದೇನೆ. ಗಡಿನಾಡು, ಕನ್ನಡ ಭಾಷೆ, ಸಂಸ್ಕೃತಿ, ಕನ್ನಡ ಶಾಲೆ ಎಲ್ಲವೂ ಉಳಿಯಬೇಕು ಮತ್ತು ಅಭಿವೃದ್ದಿ ಹೊಂದಬೇಕು ಅದಕ್ಕಾಗಿ ಪ್ರಾಥಮಿಕ ಹಂತದಲ್ಲೇ ಕನ್ನಡಕ್ಕೆ ವಿಶೇಷ ಆಧ್ಯತೆ ನೀಡಬೇಕು. ಕನ್ನಡ ಶಾಲೆಗಳು ಮುಚ್ಚುವುದೆಂದರೆ ನಾವು ನಾಚಿಕೆ ಪಡಬೇಕು, ಕನ್ನಡದ ಉಳಿವಿನೊಂದಿಗೆ ಇತರ ಭಾಷೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ಕನ್ನಡ ಕಲಿತು ಸಾಧನೆ ಮಾಡಿದ ಹಲವು ಮಹಾನ್ ನೇತಾರರು ನಮ್ಮ ಮುಂದಿದ್ದಾರೆ, ಕನ್ನಡಿಗರಾದ ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಮಾಡಿ ಪ್ರಪಂಚದಲ್ಲೇ ಗುರುತಿಸಿಕೊಂಡಿದ್ದಾರೆ ಹಾಗಿರುವಾಗ ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ ಬೇಡ ಎಂದು ಅವರು ಕಿವಿಮಾತು ಹೇಳಿದರು. ನನ್ನ ಕ್ಷೇತ್ರದ ಗಡಿನಾಡು ಪ್ರದೇಶವಾದ ಪಾಣಾಜೆ ಸುಭೋಧ ಪ್ರೌಡ ಶಾಲೆಗೆ ಆಟದ ಮೈದಾನದ ವ್ಯವಸ್ಥೆ ಮಾಡಿಕೊಡಬೇಕೆಂದು ಈಗಾಗಲೇ ಇಲ್ಲಿ ಮನವಿ ನೀಡಿದ್ದಾರೆ ಅದನ್ನು ಇದೇ ವರ್ಷ ನನ್ನ ಅನುದಾನದಲ್ಲಿ ಖಂಡಿತ ಮಾಡಿಕೊಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಎಲ್ಲೇ ಇದ್ದರೂ ಕನ್ನಡವನ್ನು ಪ್ರೀತಿಸಬೇಕು-ಪುನರೂರು

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ನಾವು ಎಲ್ಲೇ ಇದ್ದರೂ ಕನ್ನಡವನ್ನು ಪ್ರೀತಿಸಬೇಕು ಮತ್ತು ಕನ್ನಡಕ್ಕೆ ಅನ್ಯಾಯವಾದಾಗ ಪ್ರತಿಭಟಿಸಬೇಕು ಎಂದು ಹೇಳಿದರು. ಇಂದು ಕನ್ನಡವನ್ನು ಕಲಿಸುವ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು ಇದಕ್ಕೆ ಒಂದರ್ಥದಲ್ಲಿ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು. ಇಂಗ್ಲೀಷ್ ವ್ಯಾಮೋಹದ ಮುಂದೆ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು ಸರ್ಕಾರಿ ಶಾಲೆಯ ಮತ್ತು ಕನ್ನಡ ಭಾಷೆಯ ಉಳಿವುಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ ಎಂದರು.

ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು- ಕಲ್ಕೂರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ನಾವು ಮಾತನಾಡುವ ನಮ್ಮೊಳಗಿನ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮೊದಲು ನಮ್ಮೊಳಗಿನ ಅಂತರ್ಯದ ಧ್ವನಿ ಗಟ್ಟಿಗೊಳ್ಳಬೇಕು. ಕನ್ನಡ ಶಬ್ದ ಬಳಕೆ ಮಾಡಬೇಕಾದ ಪ್ರತಿಯೊಂದು ವಿಷಯಕ್ಕೂ ಇಂಗ್ಲೀಷ್ ಶಬ್ದವನ್ನು ಸೇರಿಸುವ ಮೂಲಕ ಕನ್ನಡ ಅವನತಿಗೆ ಕನ್ನಡಿಗರೇ ದಾರಿ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.

ಭಾಷೆಯ ಉಳಿವಿಗಾಗಿ, ರಕ್ಷಣೆಗಾಗಿ ಕ್ರಾಂತಿಗೂ ಸಿದ್ದರಾಗಬೇಕು- ಕೃಷ್ಣೇ ಗೌಡ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ರಾಜ್ಯಾಧ್ಯಕ್ಷ ಕೃಷ್ಣೇ ಗೌಡ ಮಾತನಾಡಿ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಕನ್ನಡಿಗರ ರಕ್ಷಣೆಗಾಗಿ ಯಾವುದೇ ಕ್ರಾಂತಿ ಮಾಡಲೂ ನಾವು ಸಿದ್ದರಾಗಬೇಕು ಎಂದು ಹೇಳಿದರು. ಯಾವುದೇ ಸರ್ಕಾರಗಳು ಇಂದು ಜನರ ಬಹುಮುಖ್ಯ ಬೇಡಿಕೆಗಳಿಗೆ ಸ್ಪಂದನೆ ಕೊಡುತ್ತಿಲ್ಲ ಹಾಗಾಗಿ ಕಟ್ಟ ಕಡೆಯ ವ್ಯಕ್ತಿಗೆ ಯಾವುದೇ ಮೂಲಭೂತ ಅವಶ್ಯಕತೆಗಳು ಲಭ್ಯವಾಗುತ್ತಿಲ್ಲ. ಕನ್ನಡ ಭಾಷೆ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕು ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನವನ್ನು ವರ್ಧಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕಾಗಿದೆ ಎಂದು ಹೇಳಿದರು.

ಸನ್ಮಾನ ಸಮಾರಂಭ:

ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕರ್ನಾಟಕ ರಾಜ್ಯಾಧ್ಯಕ್ಷ ಕೃಷ್ಣೇ ಗೌಡ, ಮಾನವ ಸಂಪನ್ಮೂಲ ಅಭಿವೃದ್ದಿ ಬೆಂಗಳೂರು ಇದರ ಡಾ. ಉಮ್ಮರ್ ಬೀಜದಕಟ್ಟೆ, ಶಿಕ್ಷಣ ತಜ್ಷ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರನ್ನು ಶಾಸಕಿ ಶಕುಂತಳಾ ಶಟ್ಟಿ ಸನ್ಮಾನಿಸಿದರು.

 ವೇದಿಕೆಯಲ್ಲಿ ಗಾಳಿಮುಖ ಖಲೀಲ್ ಸ್ವಲಾಹ್ ವಿದ್ಯಾಸಂಸ್ಥೆಯ ಚೇರ್‌ಮೇನ್ ಅಸ್ಸಯ್ಯದ್ ಹಸನ್ ಅಬ್ದುಲ್ಲ ಕೋಯ ತಂಙಳ್ ಆದೂರು, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎಂ ಟಿಪ್ಪುವರ್ಧನ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸೂರ್ಯ ಶಕಾರಿ ಪತ್ರಿಕೆ ಸಂಪಾದಕ ಬಿ.ಎಚ್ ಸುರೇಶ್, ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಪುತ್ತೂರು ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಹರ್ಷದ್ ದರ್ಬೆ, ನಗರಸಭಾ ಸದಸ್ಯ ಎಚ್ ಮಹಮ್ಮದಾಲಿ ಉಪಸ್ಥಿತರಿದ್ದರು. ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಕೃಷ್ಣ ಪ್ರೌಢಶಾಲಾ ಮುಖ್ಯ ಗುರು ಮನೋಹರ್ ರೈ ಎನ್ ವಂದಿಸಿದರು. ಶಿಕ್ಷಕರಾದ ಪ್ರಸಾದ್ ಎನ್.ಎಸ್ ಮತ್ತು ರೂಪಕಲಾ ಕೆ ಕಾರ್ಯಕ್ರಮ ನಿರೂಪಿಸಿದರು.

ಆಕಾಶವಾಣಿಯಲ್ಲಿ ನೇರ ಪ್ರಸಾರ:

ಸಮ್ಮೇಳನದ ಸಂಪೂರ್ಣ ನೇರ ಪ್ರಸಾರವನ್ನು ಮಂಗಳೂರು ಆಕಾಶವಾಣಿಯಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ಭವ್ಯ ಮೆರವಣಿಗೆ:

ಸಭಾ ಕಾರ್ಯಕ್ರಮದ ಮೊದಲು ಪುತ್ತೂರು ಮಾಯಿದೆ ದೇವುಸ್ ಚರ್ಚ್ ವಠಾರದ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಉದ್ಘಾಟಿಸಿದರು. ಬಳಿಕ ಗಾಂಧಿಕಟ್ಟೆಯ ಬಳಿಗೆ ತೆರಳಿ ಗಾಂಧಿ ಪ್ರತಿಮೆಗೆ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾಲಾರ್ಪಣೆ ಮಾಡಿದರು. ನಗರದ ಮುಖ್ಯ ರಸ್ತೆಯಾಗಿ ಕೊಂಬೆಟ್ಟು ಬಂಟರ ಭವನದ ತನಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಬ್ಯಾಂಡ್, ವಾದ್ಯ ಹಾಗೂ ದಫ್ ಪ್ರದರ್ಶನ ಆಕರ್ಷಣೀಯವಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X