ಇರಾ: ಅಂಗನವಾಡಿ ಕೇಂದ್ರದ ಸಹಾಯಕಿಗೆ ಬೀಳ್ಕೊಡುಗೆ

ಕೊಣಾಜೆ: ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸಮಾರು 18 ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ರಾಜೀವಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಶನಿವಾರ ನಡೆಯಿತು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಗುಣವತಿ, ಇರಾ ಯುವಕ ಮಂಡಲ (ರಿ) ಇದರ ಅದ್ಯಕ್ಷರಾದ ಅದ್ರಾಮ ಇರಾ, ನಿವೃತ್ತ ಸರಕಾರಿ ನೌಕರ ಟಿ.ವಾಮನ ಪೂಜಾರಿ, ಭಾರತ್ ಫ್ರೆಂಡ್ಸ್ ಕ್ಲಬ್ ನ ರಾಮು ಇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಸ್ವಾಗತಿಸಿ, ನಿವೇದಿತಾ ಮಹಿಳಾ ಮಂಡಲದ ಕೋಶಾಧಿಕಾರಿ ಸುಜಾತ ವಿ ಕೊಟ್ಟಾರಿ ವಂದಿಸಿದರು.
Next Story





