ಅಮೆರಿಕ: ತರಬೇತಿ ಅಭ್ಯಾಸದ ವೇಳೆ ದುರಂತ - 9 ಸೈನಿಕರು ಸಾವು

ಹೂಸ್ಟನ್, ಜೂ. 4: ಫೋರ್ಟ್‌ಹುಡ್ ಸೇನಾ ನೆಲೆಯಲ್ಲಿ ನಡೆದ ತರಬೇತಿ ಅಭ್ಯಾಸದ ವೇಳೆ ಪ್ರವಾಹದ ನೀರಿನಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ನಾಲ್ವರು ಸೈನಿಕರು ಶವವಾಗಿ ಪತ್ತೆಯಾಗಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.
ಈ ಸೈನಿಕರು ಪ್ರಯಾಣಿಸುತ್ತಿದ್ದ ಲೈಟ್ ಮೀಡಿಯಂ ಟ್ಯಾಕ್ಟಿಕಲ್ ವೆಹಿಕಲ್ ಗುರುವಾರ ಪ್ರವಾಹದ ನೀರಿನಲ್ಲಿ ಮಗುಚಿ ಬಿದ್ದು ಕೊಚ್ಚಿ ಹೋಗಿತ್ತು.
ಕುಟುಂಬ ಸದಸ್ಯರು ಶವಗಳನ್ನು ಗುರುತಿಸಿದ 24 ಗಂಟೆಗಳ ಬಳಿಕ ಅವರ ಗುರುತನ್ನು ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ದುರಂತದಲ್ಲಿ ಮೂವರು ಸೈನಿಕರು ಬದುಕುಳಿದಿದ್ದಾರೆ.
Next Story





