ಪ್ರಜಾಪ್ರಭುತ್ವದಲ್ಲಿ ಹೆದರುವಂಥಾದ್ದು ಏನಿಲ್ಲ: ತೈಪೆ ಅಧ್ಯಕ್ಷೆ

ತೈಪೆ, ಜೂ. 4: ಬೀಜಿಂಗ್‌ನ ತಿಯನಾನ್ಮೆನ್ ಚೌಕದ ಹತ್ಯಾಕಾಂಡದ 27ನೆ ವಾರ್ಷಿಕ ದಿನದ ಸಂದರ್ಭದಲ್ಲಿ ಶನಿವಾರ ಹೇಳಿಕೆಯೊಂದನ್ನು ನೀಡಿರುವ ತೈವಾನ್‌ನ ನೂತನ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್, ಪ್ರಜಾಪ್ರಭುತ್ವದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಚೀನಾಕ್ಕೆ ಕಿವಿಮಾತು ಹೇಳಿದ್ದಾರೆ.
ಈ ವಿಷಯದಲ್ಲಿ ತೈವಾನ್ ಚೀನಾಕ್ಕೆ ಮಾದರಿಯಾಗಬಲ್ಲದು ಎಂದು ಫೇಸ್‌ಬುಕ್ ಸಂದೇಶವೊಂದರಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಆರಂಭದಲ್ಲಿ ತೈವಾನ್‌ನಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ, ಚೀನಾ ಮತ್ತು ಚೀನಾದ ವಸಾಹತುಗಳಾದ ಹಾಂಕಾಂಗ್ ಮತ್ತು ಮಕಾವುಗಳ ಜನರು ತೈವಾನ್‌ನ ಜನರೊಂದಿಗೆ ಮುಕ್ತವಾಗಿ ಬೆರೆತಿರುವುದನ್ನು ಕಂಡಿದ್ದೇನೆ ಎಂದು ತ್ಸಾಯಿ ಹೇಳಿದರು.
‘‘ಇಲ್ಲಿನ ಸಂಗತಿಗಳನ್ನು ಸ್ವತಃ ನೋಡಿದ ಈ ಸ್ನೇಹಿತರು, ಪ್ರಜಾಪ್ರಭುತ್ವಕ್ಕೆ ಭಯಪಡುವಂಥಾದ್ದೇನೂ ಇಲ್ಲ ಎಂಬುದನ್ನು ಮನಗಂಡಿದ್ದಾರೆ. ಪ್ರಜಾಪ್ರಭುತ್ವ ಉತ್ತಮ ಹಾಗೂ ಆಶಾದಾಯಕ ವಿಷಯವಾಗಿದೆ’’ ಎಂದು ಅವರು ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
Next Story





