ಮುಂಡಗೋಡ-ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ರವರ 59 ನೇ ಜನ್ಮದಿನ

ಮುಂಡಗೋಡ,ಜೂ 4: ಮುಂಡಗೋಡ-ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ರವರ 59 ನೇ ಜನ್ಮದಿನವಾದ ಅಂಗವಾಗಿ ಮುಂಡಗೋಡ ಕಾಂಗ್ರೆಸ್ ನ ಕಾರ್ಯಕರ್ತರು ಇಂದು ಶನಿವಾರ ಇಲ್ಲಿಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ಹಂಚಿ ಶಿವರಾಮ ಹೆಬ್ಬಾರವರು ನೂರಾರು ವರ್ಷಗಳಕಾಲ ಬಾಳಲಿ ಎಂದು ಹರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡಾ ಪಾಟೀಲ, ರಾಮಣ್ಣ ಪಾಲೇಕರ, ಪ.ಪಂ ಉಪಾಧ್ಯಕ್ಷ ಫಕ್ಕಿರಪ್ಪ ಅಂಟಾಳ, ಪ.ಪಂ ಸದಸ್ಯರಾದ ರಾಬರ್ಟ ಲೋಭೊ, ಅಲ್ಲಿಖಾನ ಪಠಾಣ, ಲತೀಫ ನಾಲಬಂದ, ಸಂಜು ಪಿಶೆ, ಮೌನೇಶ್ವರ ಕೊರವರ, ರಾಮಾಬಾಯಿ ಕುದಳೆ, ಶಕುಂತಲಾ ತಳವಾರ, ಜ್ಯೋತಿ ಕಲಾಲ, ಯುವ ಧುರಿಣರಾದ ಮಹ್ಮದಗೌಸ ಮಕಾನದಾರ, ಜೈನೋ ಬೆಂಡಿಗೇರಿ, ಭಾಸ್ಕರ ನಾಯ್ಕ, ಆಸೀಫ ಮಕಾನದಾರ ಸೇರಿದಂತೆ ಮುಂತಾದವರು ಕಾಂಗ್ರೆಸ್ ಕಾರ್ಯಕರ್ತರು, ಶಿವರಾಮ ಹೆಬ್ಬಾರ ಅಭಿಮಾನಿಗಳು ಉಪಸ್ಥಿತರಿದ್ದರು.
Next Story





