ಗೃಹ ಸಚಿವರ ಸರ್ವಾಧಿಕಾರಿ ಧೋರಣೆ - ಸಿ.ಟಿ.ರವಿ ಟೀಕೆ
ಮಂಗಳೂರು,ಜೂ.4:ರಾಜ್ಯದಲ್ಲಿ ಪೊಲೀಸರು ಮುಷ್ಕರ ನಡೆಸಲು ಹೊರಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ.ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುವುದಾಗಿ ಬಜೆಪಿ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಅವರು ಇಂದು ಖಾಸಗಿ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಬೆಳವಣಿಯ ಬಗ್ಗೆ ಪ್ರತಿಕ್ರೀಯೆ ನೀಡಿದರು.
ರಾಜ್ಯದ ಗೃಹ ಸಚಿವರು ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮ ಈ ಹಿಂದೆ ದೇಶದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತೆಗದು ಕೊಂಡ ಕ್ರಮಗಳಂತೆ ಕಂಡು ಬಂದಿವೆ.ಮಾಧ್ಯಮದವರ ಜೊತೆಯೂ ಬೆದರಿಸುವ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ.ಡಿವೈಎಸ್‌ಪಿ ಅನುಪಮ ಶೆಣೈ ಪ್ರಕರಣದಲ್ಲಿ ಗೃಹ ಸಚಿವರು ಮಧ್ಯೆ ಪ್ರವೇಶಿಸಬೇಕು .ರಾಜ್ಯದಲ್ಲಿ ಆಡಳಿತ ಹದೆಗೆಟ್ಟಿದೆ ಎಂದು ಸಿ.ಟಿ.ರವಿ ತಿಳಿಸಿದರು.
ರಾಜ್ಯ ಸಭಾ ಚುನಾವಣೆಗೆ ಹಣದ ಆಮಿಷ ಒಡ್ಡಿದವರು ಹಾಗೂ ಹಣದ ಬೇಡಿಕೆ ಇಟ್ಟವರ ವಿರುದ್ಧ ಕ್ರಮ ಜರುಗಬೇಕು:-ಹಣದ ಆಮಿಷ ಒಟ್ಟಿದವರನ್ನು ಅನರ್ಹಗೊಳಿಸೇಕು ಮತಹಾಕಲು ಹಣದ ಬೇಡಿಕೆ ಇಟ್ಟವರನ್ನು ಅನರ್ಹಗೊಳಿಸಬೇಕು ಎಂದು ಸಿ.ಟಿ.ರವಿ ತಿಳಿಸಿದರು.








