ಬೆಳ್ತಂಗಡಿ: ಸರಕಾರಿ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿ- 12 ಮಂದಿ ಪ್ರಯಾಣಿಕರಿಗೆ ಗಾಯ

ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೂಡುಜಾಲು ಎಂಬಲ್ಲಿ ಶನಿವಾರ ಸರಕಾರಿ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿಯಾಗಿ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಕೊಕ್ಕಡ ಕಡೆಯಿಂದ ಧಮಸ್ಥಳ ಕಡೆಗೆ ಬರುತ್ತಿದ್ದ ಬಸ್ ಗಳು ಬೂಡುಜಾಲು ತಿರುವಿನಲ್ಲಿ ಪರಸ್ಪರ ಡಿಕ್ಕಿಯಾಗಿದೆ, ಬಸ್ಸಿನ ಮುಂಭಾಗ ಡಿಕ್ಕಿಯ ರಭಸಕ್ಕೆ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಛಾಯಾ, ದಿವಾಕರ್, ಹರೀಶ್, ಲಕ್ಷ್ಮಣ, ಕೆಂಪಯ್ಯ ಮೊದಲಾದವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





