ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾಗಿ ದೇವಿಪ್ರಸಾದ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಮಹಾಸಭೆ ಶನಿವಾರ ಸಂಘದ ಕಚೇರಿಯಲ್ಲಿ ನಡೆದು 2016-17 ನೇ ಸಾಲಿಗೆ ಜೈ ಕನ್ನಡಮ್ಮ ವಾರಪತ್ರಿಕೆ ಸಂಪಾದಕ ದೇವಿಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಅಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ವರದಿಗಾರ ಶ್ರೀನಿವಾಸ ತಂತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಜೈಕನ್ನಡಮ್ಮ ವಾರಪತ್ರಿಕೆ ವರದಿಗಾರ ಹೃಷಿಕೇಶ್ ಧರ್ಮಸ್ಥಳ, ಜತೆ ಕಾರ್ಯದರ್ಶಿಯಾಗಿ ಕರಾವಳಿ ಅಲೆ ವರದಿಗಾರ ಅಚುಶ್ರೀ ಬಾಂಗೇರು ಹಾಗೂ ಹೊಸದಿಗಂತ ವರದಿಗಾರ ದೀಪಕ್ ಆಠವಳೆ ಅವರನ್ನು ಖಚಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಆರ್.ಎನ್. ಪೂವಣಿ, ಲಕ್ಷ್ಮೀ ಮಚ್ಚಿನ, ಭುವನೇಶ್ ಗೇರುಕಟ್ಟೆ, ವಿನಯಕುಮಾರ್ ಸೇಮಿತ, ಮನೋಹರ ಬಳೆಂಜ, ರಾಜೇಶ್ ಪೆಂರ್ಬುಡ, ಪುಷ್ಪರಾಜ ಶೆಟ್ಟಿ, ಶಿಬಿ ಧರ್ಮಸ್ಥಳ, ಆಸೀಫ್ ಸರಳೀಕಟ್ಟೆ, ಧನಕೀರ್ತಿ ಆರಿಗ, ಮಂಜುನಾಥ ರೈ, ಬಿ.ಎಸ್.ಕುಲಾಲ್, ಅಶ್ರಫ್ ಆಲಿಕುಂಞ, ಪದ್ಮನಾಭ ಕುಲಾಲ್, ಸಂಜೀವ ಎನ್.ಸಿ. ಮುಂದುವರಿಯಲಿದ್ದಾರೆ.
ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಲಾಯಿತು. ಜು. 2 ರಂದು ಪತ್ರಿಕಾ ದಿನಾಚರಣೆ ಹಾಗೂ ದಶಮಾನೋತ್ಸವ ಸಮಾರೋಪ ಸಮಾರಂಭ ನಡೆಸುವುದೆಂದು ನಿರ್ಧರಿಸಲಾಯಿತು.





