Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಮ್ಮ ಪಾಲಿನ ಸೋಲಿಲ್ಲದ ಸೂಪರ್ ಮ್ಯಾನ್,...

ನಮ್ಮ ಪಾಲಿನ ಸೋಲಿಲ್ಲದ ಸೂಪರ್ ಮ್ಯಾನ್, ದಿ ಗ್ರೇಟೆಸ್ಟ್ ಅಲಿ

ರಾಜದೀಪ್ ಸರ್ದೇಸಾಯಿರಾಜದೀಪ್ ಸರ್ದೇಸಾಯಿ4 Jun 2016 10:07 PM IST
share
ನಮ್ಮ ಪಾಲಿನ ಸೋಲಿಲ್ಲದ ಸೂಪರ್ ಮ್ಯಾನ್, ದಿ ಗ್ರೇಟೆಸ್ಟ್ ಅಲಿ

ನಾನು ಮುಹಮ್ಮದ್ ಅಲಿ ಬಾಕ್ಸಿಂಗ್ ಕಣದಲ್ಲಿ ಹೋರಾಡುವುದನ್ನು ಟಿವಿಯಲ್ಲಿ ನೋಡಿಯೇ ಇಲ್ಲ. ಜೋ ಫ್ರೆಝಿಯರ್ ವಿರುದ್ಧದ ಆ ಶ್ರೇಷ್ಠ ಸ್ಪರ್ಧೆ ಯನ್ನೂ ನಾನು ನೋಡಿಲ್ಲ. 1970 ರ ದಶಕದಲ್ಲಿ ಈಗಿನಂತೆ ನಮಗೆ ಮನರಂಜನೆ ನೀಡಲು ಹಲವಾರು ಕ್ರೀಡಾ ಟಿವಿ ಚಾನೆಲ್ ಗಳು ಇರಲಿಲ್ಲ. ಆದರೆ ಅಲಿ ನಮ್ಮ ಕಲ್ಪನೆಯೊಳಗೆ ಶಾಶ್ವತವಾಗಿ ನೆಲೆಸಿದ್ದ ಕ್ರೀಡಾಪಟು. ಕೆಲವು ದಂತಕತೆಗಳನ್ನು ನಾವು ನೇರವಾಗಿ ನೋಡಲೇ ಬೇಕೆಂದಿಲ್ಲ. ಹಾಗೆಯೇ ಅಲಿ ಫೈಟ್ ಮಾಡುವುದನ್ನು ನೋಡಿಯೇ ಆತನ ಅಭಿಮಾನಿಯಗಬೇಕಾಗಿಲ್ಲ. ಫೈಟಿಂಗ್ ರಿಂಗ್ ಕೇವಲ ಒಂದು ಸೈಡ್ ಶೋ ಮಾತ್ರ ಆಗಿತ್ತು ಅಲಿಗೆ. ಆತನಿಗೆ ಇಡೀ ಜಗತ್ತೇ ವೇದಿಕೆಯಾಗಿತ್ತು. ಅಲಿ ಕೇವಲ ಆ ಪೀಳಿಗೆಯ ಶ್ರೇಷ್ಠ ಬಾಕ್ಸರ್ ಮಾತ್ರ ಆಗಿರಲಿಲ್ಲ, ಆತ ಈವರೆಗಿನ ಅ್ಯಂತ ಶ್ರೇಷ್ಠ ಕ್ರೀಡಾಪಟು ಆಗಿದ್ದ.

ಇದರ ಬಗ್ಗೆ ಅಲಿಗೆ ಖುದ್ದು ಸಂಶಯವಿರಲಿಲ್ಲ. ಹಿ ವಾಸ್ ದಿ ಗ್ರೇಟೆಸ್ಟ್. ಈ ಮಾತು ಬೇರೆ ಯಾವುದೇ ವ್ಯಕ್ತಿಯ ಬಗ್ಗೆ ಹೇಳಿದ್ದರೆ ಭೊಪರಾಕ್ ಆಗುತ್ತಿತ್ತು. ಆದರೆ ಅಲಿಯ ದೈತ್ಯ ಪ್ರತಿಭೆಗೆ ಇದು ಅತ್ಯಂತ ಸಹಜ ಅಭಿವ್ಯಕ್ತಿ ಯಾಗಿತ್ತು. ಆತನ ಪ್ರತಿಯೊಂದು ಹೇಳಿಕೆಗೆ ನಾವು ಕಟ್ಟಾ ಅಭಿಮಾನಿ ಹುಡುಗರಂತೆ ಕೇಕೆ ಹಾಕುತ್ತಿದ್ದೆವು. ಆತ ನಮಗೆ ನೀಡುತ್ತಿದ್ದ ಥ್ರಿಲ್‌ಗಳಿಗೆ ಮಿತಿಯಿರಲಿಲ್ಲ. ಅಲಿ ನಾನು ಚಿಟ್ಟೆಯಂತೆ ತೇಲಿದೆ ಹಾಗೂ ಜೇನು ನೊಣದಂತೆ ಚುಚ್ಚಿದೆ ಎಂದಾಗ ನಾವದನ್ನು ನಂಬಿದ್ದೇವೆ. ನೀವು ಕನಸಿನಲ್ಲೂ ನನ್ನನ್ನು ಸೋಲಿಸುವ ಬಗ್ಗೆ ಯೋಚಿಸಿದರೆ, ನಿದ್ದೆಯಿಂದ ಎದ್ದು ಕ್ಷಮೆ ಯಾಚಿಸಿ ಎಂದು ಅಲಿ ಹೇಳಿದಾಗ ಅದು ನಮಗೆ ಸರಿ ಎನಿಸಿದೆ. ನಮ್ಮ ಪಾಲಿಗೆ ಆತ ಕೇವಲ ಒಬ್ಬ ಬಾಕ್ಸರ್ ಅಲ್ಲ, ಆತ ಸೋಲಿಲ್ಲದ ಸೂಪ್ ಮ್ಯಾನ್ ನಮ್ಮ ಪಾಲಿಗೆ.

 ಅಲಿಗಿಂತ ಉತ್ತಮ ಬಾಕ್ಸರ್‌ಗಳು ಇದ್ದರೆಂದು ನಾವು ಚರ್ಚಿಸಬಹುದು. ಜೋ ಲೂಯಿಸ್, ರಾಕಿ ಮರ್ಸಿಯಾನೋ, ಸಗರ್ ರೆ ಲಿಯೋನಾರ್ಡ್ - ಇವರೆಲ್ಲರೂ ಬಾಕ್ಸಿಂಗ್‌ನಲ್ಲಿ ಅಲಿಯಷ್ಟೇ ಉತ್ತಮ ದಾಖಲೆ ಇದ್ದವರು ಎಂದು ಹೇಳಬಹುದು. ಬಾಸ್ಕೆಟ್ ಬಾಲ್ ನಲ್ಲಿ ಮೈಕಲ್ ಜೋರ್ಡಾನ್, ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್, ಟೆನಿಸ್ ನಲ್ಲಿ ರೋಜರ್ ಫೆಡರರ್ ದಂತಕತೆಗಳಾಗಿದ್ದಾರೆ. ಅತ್ಯುತ್ತಮ ಬಾಕ್ಸರ್ ಆಗಿದ್ದಕ್ಕಿಂತಲೂ ಮಿಗಿಲಾಗಿ ಅಲಿ ಸಾಧಿಸಿದ್ದಕ್ಕೆ ಇವರು ಯಾರೂ ಸಾಟಿಯಲ್ಲ. ಆತನ ಪ್ರತಿಯೊಂದು ನಡೆಯೂ ದೊಡ್ಡ ಉದ್ದೇಶವೊಂದರ ಸಂಕೇತವಾಗುತ್ತಿತ್ತು. ಆಟ ಕೇವಲ ಜಗತ್ತಿನ ಹೆವಿವೇಟ್ ಚಾಂಪಿಯನ್ ಆಗಿರಲಿಲ್ಲ, ಅದನ್ನು ಮೀರಿದ ಹೆಗ್ಗುರುತಾಗಿ ಅಲಿ ಗುರುತಿಸಿಕೊಂಡ. ಅದು ಅಲಿಯಿಂದ ಮಾತ್ರ ಸಾಧ್ಯ.

ಸವರ್ಣೀಯರ ಹೊಟೇಲ್‌ಗೆ ಪ್ರವೇಶ ನಿರಾಕರಿಸಿದಾಗ ತನ್ನ ಚಿನ್ನದ ಪದಕವನ್ನು ಓಹಿಯೋ ನದಿಗೆ ಬಿಸಾಡಿದ್ದಿರಬಹುದು, ತನ್ನ ಹೆವಿವೇಟ್ ಚಾಂಪಿಯನ್ ಪಟ್ಟ ಹೋದರೂ ಪರವಾಗಿಲ್ಲ ವಿಯೆಟ್ನಾಮ್ ಯುದ್ಧಕ್ಕೆ ಹೋಗುವುದಿಲ್ಲ ಎಂದಿದ್ದಾಗಲಿ, ಇಸ್ಲಾಂ ಸ್ವೀಕರಿಸಿದ್ದಾಗಲಿ ಅಲಿ ಯಾವತ್ತೂ ತಡೆಯಿಲ್ಲದ ಬಂಡಾಯಗಾರ. ಆಟದ ಪ್ರತಿಯೊಂದು ನಿಯಮವನ್ನು ಮುರಿದ ಆದರೂ ಗೆದ್ದ ಕ್ರೀಡಾ ಕ್ರಾಂತಿಕಾರಿ ಅಲಿ. ಆತನನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಸೋಲಿಸುವವರು ಯಾರೂ ಇರಲಿಲ್ಲ. ಹಾಗೆಯೇ ಆತನ ಸ್ಫೂರ್ತಿ, ಚೈತನ್ಯವನ್ನು ಸೋಲಿಸುವವರೂ ಯಾರೂ ಇರಲಿಲ್ಲ.

ಇಂದು ಬೆಳಗ್ಗೆ ಟಿವಿ ಶೋ ಒಂದರಲ್ಲಿ ನಾನು ಅಲಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಹೋಲಿಸಿದೆ. ಅಂಬೇಡ್ಕರ್ ದಲಿತರಿಗೆ ಏನಾಗಿದ್ದರೋ, ಅಲಿ ಇಡೀ ಜಗತ್ತಿನ ಕರಿಯರಿಗೆ ಅದೇ ಆಗಿದ್ದ. ಬ್ರಾಹ್ಮಣ್ಯ ಯಜಮಾನಿಕೆಯ ಹಿಂದೂ ಧರ್ಮದ ವಿರುದ್ಧ ಪ್ರತಿಭಟನೆಯಾಗಿ ಅಂಬೇಡ್ಕರ್ ಬುದ್ಧ ಧರ್ಮ ಸ್ವೀಕರಿಸಿದರೆ, ಅಸಮಾನತೆಯ ವರ್ಣಭೇದದ ಸಮಾಜದ ವಿರುದ್ಧ ಅಲಿ ಇಸ್ಲಾಮನ್ನು ಆಯ್ಕೆ ಮಾಡಿಕೊಂಡ. ಕಾಸಿಯಸ್ ಕ್ಲೇ ಮುಹಮ್ಮದ್ ಅಲಿ ಆದಾಗ ಆತ ಕೇವಲ ತನ್ನ ಹೆಸರು ಮಾತ್ರ ಬದಲಾಯಿಸಿದ್ದಲ್ಲ, ಇಡೀ ಒಂದು ಪೀಳಿಗೆಗೆ ಆತ ಆ ಮೂಲಕ ಹೊಸ ಚೈತನ್ಯ ತುಂಬಿದ. ವರ್ಣ ಭೇದದ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ಶಾಂತಿಯುತ ಪ್ರತಿಭಟನೆಗೆ ನಾಯಕತ್ವ ನೀಡಿದರೆ , ಅಲಿ ಅದಕ್ಕೊಂದು ಮೊನಚು ನೀಡಿದ.

 ಹಾಗಾಗಿ ಅಲಿಯ ನಿಧನ ಕೇವಲ ಒಬ್ಬ ಕ್ರೀಡಾ ತಾರೆಯ ನಿಧನ ಅಲ್ಲ. ಅದು ಪ್ರಭುತ್ವದ ವಿರುದ್ಧದ ಹೀರೋಗಳನ್ನು ಜನರು ಅಭಿಮಾನದಿಂದ ಕಾಣುತ್ತಿದ್ದ ಕಾಲದ ಇನ್ನೊಂದು ಕೊಂಡಿ ಕಳಚಿ ದಂತೆ. ಆ ಕಾಲದಲ್ಲಿ ಒಬ್ಬ ಅಥ್ಲೀಟ್ ನನ್ನು ಆತನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಮೇಲೆ ಅಲ್ಲ ಬದಲಾಗಿ ಆತ ಸಮಾಜಕ್ಕೆ ನೀಡಿದ ಕೊಡುಗೆಯಿಂದ ಅಳೆಯಲಾಗುತ್ತಿತ್ತು. 1996 ರ ಅಟ್ಲಾಂಟ ಒಲಿಂಪಿಕ್ಸ್ ಜ್ಯೋತಿ ಬೆಳಗಲು ಅಲಿಗೆ ಆಹ್ವಾನ ನೀಡಿದಾಗ ಭಾವೋದ್ವೇಗಕ್ಕೆ ಒಳಗಾಗಿದ್ದು ನನಗೀಗ ನೆನಪಿದೆ. ಇಂದು ಬೆಳಗ್ಗೆ ನಾನು ಮತ್ತೆ ಅತ್ತೆ. ಬೆಳೆದು ನಿಂತ ಗಂಡಸರಿಗೂ ಕಣ್ಣೀರು ಹಾಕಿಸುವ ಸಾಮರ್ಥ್ಯ ಅಲಿಗಿತ್ತು. ಆತ ಯಾವತ್ತೂ ಒಳ್ಳೆಯ ಉದ್ದೇಶಕ್ಕೆ ಹೋರಾಡಿದ. ಹಾಗಾಗಿ ನಮ್ಮನ್ನು ಕಣ್ಣೀರು ಹಾಕುವಂತೆ ಮಾಡಿದ. ಏಕೆಂದರೆ ಆತನ ಹೋರಾಟ ನಮ್ಮ ಹೋರಾಟವಾಗಿತ್ತು.

ಕೊನೆಯ ಮಾತು: 1991 ರಲ್ಲಿ ನನಗೆ ಮುಹಮ್ಮದ್ ಅಲಿಯನ್ನು ಸಂದರ್ಶಿಸುವ ಜೀವಮಾನದ ಅವಕಾಶ ಸಿಕ್ಕಿತ್ತು. ಜುಹು ಹೊಟೇಲ್ ಒಂದರಲ್ಲಿ ಅಲಿ ತಂಗಿದ್ದಾರೆಂದು ಸ್ನೇಹಿತನೊಬ್ಬ ನೀಡಿದ ಮಾಹಿತಿ ಪಡೆದು ಅಲ್ಲಿಗೆ ಹೋದೆ. ಕೊಠಡಿಯ ಬಾಗಿಲು ಬಡಿದಾಗ ಬಂದು ಬಾಗಿಲು ತೆರೆದಿದ್ದು ‘ಜಗತ್ತಿನ ಅತ್ಯಂತ ಸುಂದರ ಮುಖ’ ಇದ್ದ ವ್ಯಕ್ತಿಯಲ್ಲ. ಏಕೆಂದರೆ ಆಗಲೇ ಅವರಿಗೆ ಪಾರ್ಕಿನ್ಸನ್ ಬಾಧಿಸಿತ್ತು ಹಾಗೂ ನಡೆಯುವುದು, ಮಾತಾಡುವುದೇ ಅವರಿಗೆ ಕಷ್ಟವಾಗುತ್ತಿತ್ತು. ಆದರೆ ನನಗದು ಮುಖ್ಯವಾಗಿರಲಿಲ್ಲ. ಅಲಿಯ ಜೊತೆ ಇರುವುದೇ ನನ್ನ ಪಾಲಿಗೆ ಬಹುದೊಡ್ಡ ಗೌರವವಾಗಿತ್ತು. ಆತ ಹಿಂದೆಯೂ ಮುಂದೆಯೂ ಅತ್ಯಂತ ಶ್ರೇಷ್ಠ. ದಿ ಗ್ರೇಟೆಸ್ಟ್ !

ರಾಜದೀಪ್ ಸರ್ದೇಸಾಯಿ

share
ರಾಜದೀಪ್ ಸರ್ದೇಸಾಯಿ
ರಾಜದೀಪ್ ಸರ್ದೇಸಾಯಿ
Next Story
X