ಸಿರಿಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಟರ್ಕಿಯ ವ್ಯಕ್ತಿಗೆ 108 ವರ್ಷ ಜೈಲು

ಇಸ್ತಾಂಬುಲ್, ಜೂ. 4: ನಿರಾಶ್ರಿತ ಶಿಬಿರವೊಂದರಲ್ಲಿ ಕನಿಷ್ಠ ಎಂಟು ಸಿರಿಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಟರ್ಕಿಯ ನ್ಯಾಯಾಲಯವೊಂದು ಟರ್ಕಿಯ ವ್ಯಕ್ತಿಯೋರ್ವನಿಗೆ 108 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಅಪರಾಧಿ 29 ವರ್ಷದ ಎರ್ದಾಲ್ ಇ. ದಕ್ಷಿಣದ ಗಝಿಯನ್‌ಟೆಪ್ ಪ್ರಾಂತದ ನಿಝಿಪ್‌ನಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಸ್ವಚ್ಛತೆ ಕೆಲಸಗಾರನಾಗಿದ್ದನು.
8ರಿಂದ 12 ವರ್ಷದ ಬಾಲಕರ ಮೇಲೆ ಆತ ಶಿಬಿರದ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದನು ಹಾಗೂ ಅದಕ್ಕಾಗಿ ಅವರಿಗೆ ಹಣ ನೀಡಿದ್ದನು ಎಂದು ಆರೋಪಿಸಲಾಗಿದೆ.
ಆತನಿಗೆ 289 ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಶನ್ ಕೋರಿತ್ತು.
Next Story





