ವಿವಾದಾಸ್ಪದ ದ್ವೀಪಗಳ ತಂಟೆಗೆ ಚೀನಾ ಹೋಗಬಾರದು - ಕಾರ್ಟರ್ ತಾಕೀತು

ಸಿಂಗಾಪುರ, ಜೂ. 4: ಫಿಲಿಪ್ಪೀನ್ಸ್ ತನ್ನದೆಂದು ಹೇಳಿಕೊಳ್ಳುತ್ತಿರುವ ದಕ್ಷಿಣ ಚೀನಾ ಸಮುದ್ರದ ದ್ವೀಪವೊಂದರಲ್ಲಿ ಚೀನಾ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡರೆ ಅಮೆರಿಕ ಮತ್ತು ಇತರ ದೇಶಗಳು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಶನಿವಾರ ಎಚ್ಚರಿಸಿದ್ದಾರೆ.
ಸಿಂಗಾಪುರದಲ್ಲಿ ನಡೆದ ಭದ್ರತಾ ಶೃಂಗ ಸಮ್ಮೇಳನವೊಂದರಲ್ಲಿ ಮಾತನಾಡಿದ ಕಾರ್ಟರ್, ವಿವಾದಾಸ್ಪದ ಜಲಪ್ರದೇಶಗಳಲ್ಲಿ ಚೀನಾ ತನ್ನ ಸೇನಾ ವಿಸ್ತರಣೆಯನ್ನು ಕೈಗೊಂಡರೆ, ಚೀನಾ ಒಂಟಿಯಾಗಬೇಕಾದ ಅಪಾಯವನ್ನು ಎದುರಿಸುತ್ತದೆ ಎಂದು ಅವರು ಎಚ್ಚರಿಸಿದರು.
ಅದೇ ವೇಳೆ, ಅಪಘಾತದ ಸಾಧ್ಯತೆಗಳನ್ನು ಕಡಿಮೆಗೊಳಿಸಲು ಚೀನಾದೊಂದಿಗೆ ಪ್ರಬಲ ದ್ವಿಪಕ್ಷೀಯ ಭದ್ರತಾ ಸಹಕಾರವನ್ನು ಹೊಂದುವ ಪ್ರಸ್ತಾಪವನ್ನು ಅವರು ಮುಂದಿಟ್ಟರು.
Next Story





