Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದೇಜಗೌ ಎಂಬ ಕನ್ನಡ ವೃತ್ತಾಂತ

ದೇಜಗೌ ಎಂಬ ಕನ್ನಡ ವೃತ್ತಾಂತ

ವಾರ್ತಾಭಾರತಿವಾರ್ತಾಭಾರತಿ4 Jun 2016 11:30 PM IST
share
ದೇಜಗೌ ಎಂಬ ಕನ್ನಡ ವೃತ್ತಾಂತ

ವೈಶಾಖದ ಕೊನೆಯ ದಿನಗಳ ಬೇಗೆ ಪರಾಕಾಷ್ಠೆಗೇರಿತ್ತು. ಮೇ 31, ಮುಂಜಾನೆಯಲ್ಲೇ ಸುಡುಬಿಸಿಲು. ಬಿಸಿಲಶಾಖದ ಗಾಳಿಯಲ್ಲಿ ಶೋಕ ಅಲೆಅಲೆಯಾಗಿ ತೇಲಿ ಬರುತ್ತ್ತಿತ್ತು. ಬೆಳಗಿನ ಪತ್ರಿಕೆಗಳಲ್ಲಿ ಕನ್ನಡ ಪುರುಷ ದೇಜಗೌ ಇನ್ನಿಲ್ಲ ಎಂದು ಸಾರುವ ಕಪ್ಪುಅಂಚಿನ ಸುದ್ದಿ. ಕಳೆದ ವರ್ಷವಷ್ಟೆ ಕನ್ನಡದ ಈ ಕಟ್ಟಾಳಿನ ಜನ್ಮ ಶತಮಾನೋತ್ಸವದಿಂದ ಸಂಭ್ರಮಿಸಿದ್ದ ಕನ್ನಡಿಗರಿಗೆ ಬರಸಿಡಿಲಿನಂತೆ ಎರಗಿದ ಸುದ್ದಿ.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಅಗ್ರಮಾನ್ಯ ಕನ್ನಡ ಸಾಹಿತ, ದಣಿವರಿಯದ ಕನ್ನಡದ ಹೋರಾಟಗಾರ ಪ್ರೊ.ದೇ.ಜವರೇಗೌಡರ ಬದುಕು ಕನ್ನಡದೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿದ್ದ ಸಾರ್ಥಕ ಬದುಕು. ಜವರೇ ಗೌಡರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಎಂಬ ಕುಗ್ರಾಮದಲ್ಲಿ. ಗ್ರಾಮ ಸ್ವರಾಜ್ಯ ಕಾಣದ ಕಡುಬಡತನದ ಹಳ್ಳಿ.(ಇಂದಿನ ಭಾರತದ ಹಳ್ಳಿಗಳಾದರೂ ‘ಗ್ರಾಮ ಸ್ವರಾಜ್ಯ’ ಕಂಡಿವೆಯೇ ಎಂಬುದು ಒಂದು ಯಕ್ಷ ಪ್ರಶ್ನೆ) ಹಸಿವಿನದೇ ಕಾರುಬಾರು. ಮನೆಯಲ್ಲಿ ಒಪ್ಪತ್ತು ಅಂಬಲಿ ತುಂಬೆ ಸೊಪ್ಪಿನ ಊಟಕ್ಕೂ ಕೊರತೆ. ಬಾಲಕ ಜವರೇಗೌಡರಿಗೆ ಕುರಿ, ಆಡು ಕಾಯುವುದೇ ನಿತ್ಯ ಕಾಯಕ. ಇಂಥ ಹಿನ್ನೆಲೆಯಲ್ಲಿ ಬೆಳೆದ ಹುಡುಗನಲ್ಲಿದ್ದ ಯಾವ ಸಂಕಲ್ಪಶಕ್ತಿ ಗುಡಿಸಿಲಿನಿಂದ ಗಂಗೋತ್ರಿಯವರೆಗೆ ಕೈ ಹಿಡಿದು ನಡೆಸಿತು ಎಂಬುದು ಇಂದಿಗೂ ಒಂದು ವಿಸ್ಮಯವೇ.
ಇಸ್ಕೂಲು ಎಂದರೆ ರೇಗಿ ಹೊಡೆದುಬಡಿದು ಮಾಡುತ್ತಿದ್ದ ತಂದೆ. ಬಾಲಕನಿಗಾದರೋ ಕುರಿಕಾಯುವು ದನ್ನು ತಪ್ಪಿಸಿ ಹೋಗಿ ಶಾಲೆಯಲ್ಲಿ ಕದ್ದು ಪಾಠ ಕೇಳುವ ಗೀಳು. ಬಾಲಕ ಜವರೇ ಗೌಡರಲ್ಲಿ ಸುಪ್ತವಾಗಿದ್ದ ವಿದ್ಯೆ ಕಲಿಯುವ ಆಸಕ್ತಿ ಅಚಾನಕ್ಕಾಗಿ ಪತ್ರಕರ್ತ ಎಚ್.ಕೆ.ವೀರಣ್ಣ ಗೌಡರ ಗಮನಕ್ಕೆ ಬಂತು. ಬೆಂಗಳೂರು ಸುಲ್ತಾನ್ ಪೇಟೆ ಗಣಪತಿ ದೇವಾಲಯಕ್ಕೆ ಸಂಬಂಧಿಸಿದ ಕೋಮು ಗಲಭೆ ತನಿಖಾ ವರದಿ (ಚಿತ್ರ ಗುಪ್ತ-1929) ಖ್ಯಾತಿಯ ವೀರಣ್ಣ ಗೌಡರು, ‘‘ಹುಡುಗನನ್ನು ಶಾಲೆಗೆ ಕಳುಹಿಸದಿದ್ದರೆ ಜೈಲಿಗೆ ಹೋಗಬೇಕಾಗುತ್ತೆ’’ ಎಂಬ ಅಸ್ತ್ರ ಪ್ರಯೋಗಿಸಿ ಬಾಲಕ ಜವರೇ ಗೌಡರ ವಿದ್ಯಾರ್ಜನೆಗೆ ನಿಮಿತ್ತವಾದರು. ಚನ್ನಪಟ್ಟಣದಲ್ಲಿ ಶಾಲೆಯೋದು. ನಂತರ ಬೆಂಗಳೂರು, ಮೈಸೂರುಗಳಲ್ಲಿ ಪ್ರೌಢ ವ್ಯಾಸಂಗ. ಸ್ನಾತಕೋತ್ತರ ವ್ಯಾಸಂಗದ ನಂತರ ಬಂದ ಸರಕಾರಿ ಅಧಿಕಾರಸ್ಥ ಉದ್ಯೋಗದ ಆಮಿಷಕ್ಕೆ ಮರುಳಾಗದೆ ದೇಜಗೌ ಆಯ್ಕೆಮಾಡಿಕೊಂಡದ್ದು ಬೋಧಕ ವೃತ್ತಿಯನ್ನು. ಕನ್ನಡದ ದೀಕ್ಷೆ ಕೊಟ್ಟ ಕುವೆಂಪು ಅವರ ‘ಗುರು’ತ್ವಾಕರ್ಷಣೆಯ ಸೆಳೆತದ ಮುಂದೆ ಅಠಾರ ಕಛೇರಿಯ (ಇಂದಿನ ವಿಧಾನ ಸೌಧ) ಮೋಹದಾಟ ಸಾಗಲಿಲ್ಲ. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾದದ್ದು 1946ರಲ್ಲಿ. ಅವರ ಮೊದಲ ಪುಸ್ತಕ, ಜವಾಹರಲಾಲ ನೆಹರೂ ಅವರ ಸೋದರಿ ಕೃಷ್ಣಾ ಹತೀಸಿಂಗ್ ಅವರ ‘ವಿತ್ ನೋ ರಿಗ್ರೆಟ್ಸ್’ನ ಕನ್ನಡ ಅನುವಾದ ‘ನೆನಪು ಕಹಿಯಲ್ಲ’ ಪ್ರಕಟವಾದದ್ದು 1949ರಲ್ಲಿ. ಅಂದಿನಿಂದ ಕೊನೆಯುಸಿರಿರುವವರೆಗೆ ಕನ್ನಡದ ಕೆಲಸ ಅವರ ಜೀವದುಸಿರಾಯಿತು.
ಕನ್ನಡ ಅಧ್ಯಾಪಕನ ಕೆಲಸದಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯ ಉನ್ನತಹುದ್ದೆಯವರೆಗೆ ದೇಜಗೌ ಸಾಗಿ ಬಂದ ಹಾದಿ ಹೂವಿನ ಹಾದಿ ಏನಾಗಿರಲಿಲ್ಲ. ಪರಿಸರದೊಂದಿಗೆ ಹೋರಾಡುತ್ತಲೇ ಔನ್ನತ್ಯಕ್ಕೇರಿದ ಸಾಹಸ. ಅವರದು ನೂರು ಉಳಿಪೆಟ್ಟು ತಾಕಿ ರೂಪುಗೊಂಡ ವ್ಯಕ್ತಿತ್ವ ಎಂಬುದು ಬಲ್ಲವರ ಅಂಬೋಣ. ಕಾಯಕ ಶ್ರದ್ಧೆ, ಅಧ್ಯಯನಶೀಲತೆ ಮತ್ತು ವಿನಯ ದೇಜಗೌ ಅವರ ಮೂರು ಗುಣವಿಶೇಷಗಳು. ತಮ್ಮ ಸಾಧನೆಯೆಲ್ಲ ಗುರುವಿನ ಅನುಗ್ರಹ, ಕನ್ನಡಿಗರ ಪ್ರೀತಿಯ ಫಲ ಎನ್ನುತ್ತಿದ್ದುದು ಅವರ ವಿನಯವಂತಿಕೆಯ ದ್ಯೋತಕವಾಗಿತ್ತು
       
 ದೇಜಗೌ, ಅಧ್ಯಾಪಕರಾಗಿ ಒಳ್ಳೆಯ ಮೇಷ್ಟ್ರು, ಕುಲಪತಿಯಾಗಿ ದಕ್ಷ ಆಡಳಿತಗಾರರು, ಸಾಹಿತಿಯಾಗಿ ಕನ್ನಡಕ್ಕೆ ಕೆಲವು ಶ್ರೇಷ್ಠ ಕೃತಿಗಳನ್ನು ಕೊಟ್ಟವರು -ಎಂಬುದು ಕನ್ನಡಿಗರಿಗೆ ತಿಳಿದ ವಿಷಯವೇ. ವಿದ್ವಜ್ಜನರ ದೃಷ್ಟಿಯಲ್ಲಿ ಅವರು ‘ಕನಸಿನ ಕೊಲಂಬಸ್’, ‘ಕನ್ನಡದ ಗದ್ಯ ಶಿಲ್ಪಿ’ ಮತ್ತು ‘ಕನ್ನಡದ ನಿತ್ಯ ಕುಲಪತಿ’. ಇವೆಲ್ಲ ದೇಜಗೌ ಅವರ ಸಾಧನೆಗಳಿಗೆ ಸಾರ್ಥಕವಾದ ರೂಪಕಗಳೇ ಸೈ. ಅವರ ‘ಕೊಲಂಬಸ್’ ಸಾಹಸಗಳು-ಅನ್ವೇಷಣೆಗಳು ಶಿಕ್ಷಣ, ಸಾಹಿತ್ಯಗಳಿಂದ ಹಿಡಿದು ಹಲವಾರು ಕ್ಷೇತ್ರಗಳ ವಿಶಾಲ ವ್ಯಾಪ್ತಿಯದು. ಶಿಕ್ಷಣವೇತ್ತರಾಗಿ, ಸಾಹಿತಿಯಾಗಿ, ಕನ್ನಡ ಹೋರಾಟಗಾರರಾಗಿ ಅವರು ಮಾಡಿರುವ ಕೆಲಸಗಳು, ಕಟ್ಟಿರುವ ಸಂಸ್ಥೆಗಳು ಈ ಮಾತಿಗೆ ನಿದರ್ಶನವಾಗಿ ನಮ್ಮ ಮುಂದಿವೆ. ಇದರಲ್ಲಿ ಅಗ್ರ ತಾಂಬೂಲ ಅವರ ದೂರದೃಷಿ-ಕಾಣ್ಕೆಗಳಿಗೆ ಅಪೂರ್ವ ಮಾದರಿಯಾಗಿ ನಿಂತಿರುವ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸಲ್ಲಬೇಕು. ಪ್ರಪಂಚದ ಸಕಲ ಜ್ಞಾನವೂ ಕನಡದಲ್ಲಿ ಲಭ್ಯವಾಗಬೇಕು ಎಂಬ ಶಪಥದಿಂದ ರೂಪಿಸಿದ ಯೋಜನೆಗಳ, ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕನ್ನಡ ಅಧ್ಯಯನ ಕೇಂದ್ರವನ್ನು ಒಂದು ಮಿನಿ ವಿಶ್ವ ವಿದ್ಯಾನಿಲಯದೋಪಾದಿಯಲ್ಲಿ ಕಟ್ಟಿಬೆಳೆಸಿದ್ದು ಅವರ ಒಂದು ಮಹತ್ಸಾಧನೆಯೇ ಸರಿ. ಜಾನಪದ, ಭಾಷಾ ವಿಜ್ಞಾನ, ಶಾಸನ ಅಧ್ಯಯನ, ಗ್ರಂಥ ಸಂಪಾದನೆ, ಹರಿದಾಸ ಸಾಹಿತ್ಯ, ಭಾಷಾಂತರ, ವಿಶ್ವಕೋಶ-ಹೀಗೆ ಹಲವಾರು ವಿದ್ವದಧ್ಯಯನ ವಿಭಾಗಗಳನ್ನು ಕನ್ನಡ ಅಧ್ಯಯನ ಸಂಸ್ಥೆಯ ಛಾವಣಿಯಡಿ ಬೆಳೆಸಿದ ಕೀರ್ತಿ ದೇಜಗೌ ಅವರದು. ಜ್ಞಾನ ಮಾತೃಬಾಷೆಯಲ್ಲಿ ಬೆಳೆಯಬೇಕು, ಜಗತ್ತಿನ ಮೂಲೆಮೂಲೆಗಳಲ್ಲಿ ಆಗುತ್ತಿರುವ ಜ್ಞಾನವಿಜ್ಞಾನಗಳ ಬೆಳವಣಿಗೆಗಳು, ವಿದ್ಯಮಾನಗಳು, ಸಾಹಿತ್ಯ ಕೃತಿಗಳು ಕನ್ನಡದಲ್ಲಿ ದೊರೆಯುವಂತಾಗಬೇಕು ಎನ್ನುವುದು ದೇಜಗೌ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅಂತೆಯೇ ಎನ್‌ಸೈಕ್ಲೊಪೀಡಿಂಾ ಬ್ರಿಟಾನಿಕಾ ಮಾದರಿಯ ಹದಿನಾಲ್ಕು ಸಂಪುಟಗಳ ಕನ್ನಡ ವಿಶ್ವಕೋಶ, ಎಪಿಗ್ರಾಫಿಯಾ ಕರ್ನಾಟಕದ ಪುನರ್ ಮುದ್ರಣ, ಕನ್ನಡ-ಇಂಗ್ಲಿಷ್ ನಿಘಂಟು ಮೊದಲಾದವುಗಳ ಪ್ರಕಟಣೆಗೆ ದೇಜಗೌ ಆದ್ಯತೆ ನೀಡಿದರು. ಅವರ ಬೌದ್ಧಿಕ ಹಾಗೂ ಕರ್ತೃತ್ವ ಶಕ್ತಿಗಳಿಗೆ ದೃಷ್ಟಾಂತವಾಗಿರುವ ಇವು ಅವರ ಸಾಧನೆಯ ಹೆಗ್ಗುರುತುಗಳು. ಜಾನಪದ ವಸ್ತು ಸಂಗ್ರಹಾಲಯ, ಮಂಗಳೂರು ಮತ್ತು ಬಿ.ಆರ್. ಪ್ರಾಜೆಕ್ಟ್‌ಗಳಲ್ಲಿ ಸ್ನಾತಕೋತ್ತರ ಕೇಂದ್ರಗಳ ಸ್ಥಾಪನೆ, ಕುವೆಂಪು ವಿದ್ಯಾವರ್ಧಕ ಸಂಸ್ಥೆ, ಕುವೆಂಪು ವಿದ್ಯಾ ಪರಿಷತ್ ಹಾಗೂ ಇತೀಚಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮೊದಲಾದವು ಅವರ ಮಹತ್ವದ ಸಾಂಸ್ಥಿಕಸ್ವರೂಪದ ಸಾಧನೆಗಳು. ಕನ್ನಡ ಸಂಸ್ಕೃತಿಗೆ ತಕ್ಕುದಾದ ವಿದ್ಯಾಪ್ರಸಾರ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕುವೆಂಪು ವಿದ್ಯಾವರ್ಧಕ ಸಂಸ್ಥೆಗೆ ದೇಜಗೌ ಅವರ ಸ್ವಂತ ಮನೆ ಸಮರ್ಪಿತ.
 ಇನ್ನೂರಕ್ಕೂ ಹೆಚ್ಚು ಕೃತಿಗಳ ಕರ್ತೃವಾದ ದೇಜಗೌ ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಗ್ರಂಥ ಸಂಪಾದನೆ, ಸಂಶೋಧನೆ, ಆತ್ಮ ಕಥನ -ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ತಮ್ಮ ಸೃಜನಶೀಲತೆ ಮತ್ತು ಪಾಂಡಿತ್ಯ ಗಳನ್ನು ಮೆರೆದವರು. ಈ ಒಂದೊಂದು ಪ್ರಕಾರಗಳಲ್ಲೂ ಅವರ ‘ಗದ್ಯಶಿಲ್ಪಿ’ಯ ಪ್ರತಿಭಾ ಕೌಶಲವನ್ನು ಕಾಣಬಹುದು. ದೇಜಗೌ ಅವರನ್ನು ಗದ್ಯಶಿಲ್ಪಿಎಂದು ಬಣ್ಣಿಸಿರುವುದು ಯೋಗ್ಯವೂ ನ್ಯಾಯೋಚಿತವೂ ಆದುದಾಗಿದೆ. ಗದ್ಯ ಶೈಲಿಯನ್ನು ಕುರಿತು ಅವರೊಂದು ಗ್ರಂಥ ರಚಿಸಿದ್ದಾರೆ. ಗದ್ಯ ಶೈಲಿಯ ಸೂಕ್ಷ್ಮಗಳನ್ನೂ ವಿಶಿಷ್ಟ ಲಯಗಾರಿಕೆಯನ್ನೂ ವಿವೇಚಿಸಿರುವ ಈ ಪುಸ್ತಕವನ್ನು ವಿಮರ್ಶಕರು ಕನ್ನಡದಲ್ಲಿ ಪ್ರಪ್ರಥಮವಾದ ಲಕ್ಷ್ಯ ಗ್ರಂಥವೆಂದು ಗುರುತಿಸಿದ್ದಾರೆ. ಸ್ವತ: ದೇಜಗೌ ಬರವಣಿಗೆಯಲ್ಲೇ, ಅವರ ‘ಹೋರಾಟದ ಬದುಕು’ ಆತ್ಮಕಥೆಯಲ್ಲಿನ ಅಚ್ಚ ದೇಸೀ ಕನ್ನಡದಿಂದ ಹಿಡಿದು ‘ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ’ಯಲ್ಲಿನ ಸಂಸ್ಕೃತಭೂಯಿಷ್ಠ ಕನ್ನಡದವರೆಗೆ, ವಿಭಿನ್ನ ಶೈಲಿಯ ಪ್ರಯೋಗವನ್ನು ನಾವು ಕಾಣಬಹುದಾಗಿದೆ.
ರಾಷ್ಟ್ರ ಕವಿ ಕುವೆಂಪು ಮತ್ತು ಅವರ ಸಾಹಿತ್ಯ ಕುರಿತು ಬರೆದಿರುವ ಕೃತಿಗಳು, ಜೀವನ ಚರಿತ್ರೆಗಳು, ಕನಕ ದಾಸರ ರಾಮಧಾನ್ಯ ಚರಿತ್ರೆ-ನಳ ಚರಿತೆಯಂಥ ಸಂಪಾದಿತ ಗ್ರಂಥಗಳು, ವಿಶ್ವ ಸಾಹಿತ್ಯದ ಅಭಿಜಾತ ಕೃತಿಗಳ ಅನುವಾದಗಳು ದೇಜಗೌ ಸಾಹಿತ್ಯ ಸಾಧನೆಯನ್ನು ಬಿಂಬಿಸುವ ಉತ್ಕೃಷ್ಟ ಉದಾಹರಣೆಗಳು. ನಾಲ್ಕು ಸಂಪುಟಗಳಲ್ಲಿರುವ ಕುವೆಂಪು ಸಾಹಿತ್ಯ ಅಧ್ಯಯನ, ಕುವೆಂಪು ಸೂಕ್ತಿಮಾಲೆ, ಕುವೆಂಪು ದರ್ಶನ ಮತ್ತು ಸಂದೇಶ, ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ ಕೃತಿಗಳು ತಲೆಮಾರಿನಿಂದ ತಲೆಮಾರಿಗೆ ಕುವೆಂಪು ಸಾಹಿತ್ಯದ ಅಧ್ಯಯನಕ್ಕೆ ಸಹಾಯಕವಾಗಿ ನಿಲ್ಲಬಲ್ಲ ಶ್ರೇಷ್ಠ ಆಕರ ಗ್ರಂಥಗಳು ಎಂಬುದು ವಿದ್ವಾಂಸರೂ ಒಪ್ಪುವ ಮಾತು. ಗಾಂಧಿ, ಕ್ರಾಂತಿಕಾರಿ ಅಂಬೇಡ್ಕರ್, ತೀನಂಶ್ರೀ, ವಿಚಾರವಾದಿ ಪೆರಿಯಾರ್, ಸಮಾಜವಾದಿ ಲೋಹಿಯಾ, ಕನ್ನಡಿಗರಿಗೆ ಸರ್ವಋತುವಿನಲ್ಲೂ ಪ್ರಸ್ತುತವೆನ್ನಿಸಬಹುದಾದ ಜೀವನಚರಿತ್ರೆಗಳು. ಕನಕದಾಸರ ನಳಚರಿತ್ರೆಗೆ ಬರೆದಿರುವ ಪೀಠಿಕೆ ಸಂಶೋಧನಾತ್ಮಕ ತೌಲನಿಕ ಅಧ್ಯಯನವಾದರೆ, ಕುಮಾರ ರಾಮ ಸಾಂಗತ್ಯ ಬರೆದ ನಂಜುಂಡ ಕವಿಯ ಬಗೆಗಿನ ಗ್ರಂಥ ಒಂದು ಚಾರಿತ್ರಿಕ ಕಾವ್ಯದ ಸಮಗ್ರ ವಿವೇಚನೆಗೆ ಮಾದರಿ ಎಂಬ ಅಗ್ಗಳಿಕೆಯದು.
‘ಕನಸಿನ ಲೋಕದ ಕೊಲಂಬಸ್’ ಎಂದು ಪ್ರೊ.ಎಚ್ಚೆಸ್ಕೆ ನೀಡಿರುವ ಅಭಿದಾನ ಹೆಚ್ಚು ಅರ್ಥಪೂರ್ಣವಾಗಿ ಕಾಣುವುದು ದೇಜಗೌ ಅವರ ಅನುವಾದಗಳಲ್ಲಿ. ವಿಭಿನ್ನ ಸಂಸ್ಕೃತಿಗಳ ದಿಗಂತಗಳಲ್ಲಿ ಮಾನವ ಬದುಕನ್ನು ಅನ್ವೇಷಿಸುವ ಕುತೂಹಲವೇ ದೇಜಗೌ ಅವರ ಅನುವಾದಗಳ ಹಿಂದಿನ ಪ್ರೇರಣೆ ಎನಿಸುತ್ತದೆ. ಜೀನ್ ಆಸ್ಟಿನ್ ಅವರ ‘ಪ್ರೈಡ್ ಅಂಡ್ ಪ್ರಿಜ್ಯುಡಿಸ್’ ನ್ನು ‘ಹಮ್ಮುಬಿಮ್ಮು’ ಆಗಿ ಕನ್ನಡದಲ್ಲಿ ಪುನರ್‌ಸೃಷ್ಟಿಸಿದ್ದಾರೆ. ಇದರಲ್ಲಿ ಭಾಷಾಂತರದ ಬಗೆಗಿನ ಅವರ ಒಲವು, ಉತ್ಸಾಹ ಮತ್ತು ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬರಬೇಕು ಎಂಬ ಮಹತ್ವಾಕಾಂಕ್ಷೆ ಸುವ್ಯಕ್ತ. ‘‘ಭಾಷಾಂತರವೊಂದು ಪುನರ್‌ಸೃಷ್ಟಿ ಕಾರ್ಯ, ನಿಜ; ಆದರೆ....ಮೂಲಕೃತಿಕಾರ ಮತ್ತು ಭಾಷಾಂತರಕಾರರ ಪರಸ್ಪರ ಹೃದಯ ಸಂವಾದ ಹಾಗೂ ಬೌದ್ಧಿಕ ಸಂಘರ್ಷಗಳಿಂದ ಹೊರಹೊಮ್ಮುವ ಮಿಂಚಿನಲೆಗಳು;ಅದೊಂದು ನವೀನ ಸೃಷ್ಟಿ’’ ಎಂಬುದು ಅನುವಾದ ಸಾಹಿತ್ಯ ಕುರಿತ ಅವರ ಪರಿಕಲ್ಪನೆ. ವಿಶ್ವದ ಮಹಾನ್ ಲೇಖಕರಲ್ಲಿ ಒಬ್ಬರಾದ ಟಾಲ್‌ಸ್ಟಾಯ್ ಅವರ ‘ಪುನರುತ್ಥಾನ’ (ರೆಸರೆಕ್ಷನ್), ಸುಮಾರು 1,800 ಪುಟಗಳ ‘ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್) ‘ಅನ್ನೆಕರೇನಿನಾ’ ಕಾದಂಬರಿಗಳನ್ನಲ್ಲದೆ ಐದು ನಾಟಕಗಳನ್ನೂ ತಮ್ಮ ಪರಿಕಲ್ಪನೆಗನುಗುಣವಾಗಿಯೇ ಕನ್ನಡಕ್ಕೆ ತಂದಿದ್ದಾರೆ. ಟಾಲ್‌ಸ್ಟಾಯ್ ಕೃತಿಗಳ ಭಾಷಾಂತರಕ್ಕಾಗಿ ದೇಜಗೌ ಅವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿಯೂ ಸಂದಿದೆ.
‘ಕನ್ನಡದ ನಿತ್ಯ ಕುಲಪತಿ’ ಎನ್ನುವ ವರ್ಣನೆ ಹೆಚ್ಚು ಔಚಿತ್ಯಪೂರ್ಣವಾಗಿ ಕಾಣುವುದು ದೇಜಗೌ ಅವರ ಕನ್ನಡಪರ ಕಾಳಜಿಗಳಲ್ಲಿ. ಅವರು ಕನ್ನಡದ ಕಟ್ಟಾಳು ಅಷ್ಟೇ ಆಗಿರದೆ ದಣಿವರಿಯದ ಕನ್ನಡ ಹೋರಾಟಗಾರರೂ ಆಗಿದ್ದರು. ಅವರಿಗೆ ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಮಾಜ, ಕನ್ನಡ ಸಂಸ್ಕೃತಿ ಇವೆಲ್ಲ ಕನ್ನಡಿಗರ ಬದುಕಿನ ಕಟು ವಾಸ್ತವ ಎಂಬ ಸ್ಪಷ್ಟ ತಿಳಿವಳಿಕೆಯಿತ್ತು. ಎಂದೇ ಈ ವಾಸ್ತವಕ್ಕೆ ಭಂಗಬಂದಾಗಲೆಲ್ಲ ಅವರು ಕನ್ನಡದ ಕಲಿಯಾಗುತ್ತಿದ್ದರು. ಕನ್ನಡ ಆಡಳಿತ ಭಾಷೆಯಾಗ ಬೇಕು, ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು, ಕನ್ನಡಕ್ಕೆ ಶಾಸ್ತ್ರೀಯ ಬಾಷೆಯ ಸ್ಥಾನಮಾನ ಸಿಗಬೇಕು ಮೊದಲಾದ ಚಳವಳಿಗಳಿಗೆ ನಾಂದಿ ಹಾಡಿದ ದೇಜಗೌ ಜೀವಮಾನದುದ್ದಕ್ಕೂ ಕನ್ನಡ ಚಳವಳಿಯ ಮುಂಚೂಣಿಯ ನೇತಾರರಾಗಿದ್ದವರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಬೇಕೆಂದು ಆಗ್ರಹಪಡಿಸಿ ಇಳಿವಯಸ್ಸನ್ನೂ ಲೆಕ್ಕಿಸದೆ ಐದು ಸಲ ನಿರಶನ ನಡಿಸಿದ ಗಾಂಧಿ ಮಾರ್ಗದ ಸತ್ಯಾಗ್ರಹಿ ಅವರು. ದೇಜಗೌ ಮತ್ತು ಅವರ ಶೈಲಿಯ ಸತಾಗ್ರಹ ಈಗ ಇತಿಹಾಸ. ಗಣ್ಯರ ಬೌತಿಕ ಅವಸಾನವಾದಾಗ ನಾಡುನುಡಿಗೆ ದೊಡ್ಡ ನಷ್ಟ ಎನ್ನುವ ಮಾತು ಈಗೀಗ ಕ್ಲೀಷೆ ಎನಿಸಿದರು ದೇಜಗೌ ಅವರ ನಿರ್ಗಮನ ಅಷ್ಟು ಸುಲಭವಾಗಿ ವಿಸ್ಮತಿಗೆ ಸಲ್ಲುವಂಥಾದ್ದಲ್ಲ.

ಭರತ ವಾಕ್ಯ:
ತಾವು ಬಿದಿರಿನ ಕೊಳವೆೆ, ಉಸಿರೆಲ್ಲ ಕನ್ನಡ ಎಂದು ನಂಬಿ ಬದುಕಿದ ಮಹನೀಯರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X