ಭಾರತದ ದಲಿತ ರಾಜಕೀಯ ಚಳವಳಿಗೆ ಸ್ಫೂರ್ತಿಯಾದ: ಮುಹಮ್ಮದ್ ಅಲಿ

ಆಫ್ರಿಕ ಮೂಲದ ಕರಿಯ ಜನಾಂಗೀಯರಾದ ಮುಹಮ್ಮದ್ ಅಲಿ ಅಮೆರಿಕದ ಪ್ರಜೆ. ಭಾರತದಿಂದ ಬಹುದೂರವೇ ಇದ್ದರೂ, ಅವರು ತನ್ನದೇ ಆದ ರೀತಿಯಲ್ಲಿ, ಆಕ್ರಮಣಕಾರಿ ಕ್ರೀಡೆಯೆಂದೇ ಹೆಸರಾದ ಬಾಕ್ಸಿಂಗ್‌ನಲ್ಲಿ ಬಿಳಿಯ ಜನಾಂಗದ ಪಾರಮ್ಯದ ವಿರುದ್ಧ ಹೋರಾಡಿದ್ದಾರೆ. ಅವರ ಈ ಹೋರಾಟದ ಹುಮ್ಮಸ್ಸು, ಭಾರತದಲ್ಲಿಯೂ ವಿಶೇಷವಾದ ರೀತಿಯಲ್ಲಿ ಪ್ರಭಾವವನ್ನು ಬೀರಿತ್ತು.
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ (ಎಂ.ಜಿ.ಆರ್.) ಹಾಗೂ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ಮುಹಮ್ಮದ್ ಅಲಿ ಭೇಟಿಯ ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಪ್ರಸಾರವಾಗುತ್ತಿವೆ. ಆದರೆ ಈ ಮಹಾನ್ ಬಾಕ್ಸಿಂಗ್ ತಾರೆಯು ಭಾರತದ ಜನಸಂಸ್ಕೃತಿ ಹಾಗೂ ರಾಜಕೀಯದ ಮೇಲೆ ಅಳವಾದ ಪ್ರಭಾವವನ್ನು ಬೀರಿದ್ದಾರೆ. ಭಾರತದ ದಲಿತರು, ಅಮೆರಿಕ ಕರಿಯ ಜನಾಂಗೀಯರ ಸಮಸ್ಯೆಗಳಿಗೂ ಹಲವಾರು ಸಾಮ್ಯತೆಗಳಿವೆ.
ಮುಹಮ್ಮದ್ ಅಲಿ, ಹಲವಾರು ವಿಧಗಳಲ್ಲಿ ಅಮೆರಿಕದ ‘ಬ್ಲಾಕ್ ಪ್ಯಾಂಥರ್ಸ್ ಪಾರ್ಟಿ’ಗೆ ಸ್ಫೂರ್ತಿಯಾಗಿದ್ದರು. ಬ್ಲಾಕ್ ಪ್ಯಾಂಥರ್ಸ್ ಪಾರ್ಟಿಯು, ಅಮೆರಿಕದಲ್ಲಿ ಕರಿಯ ಜನಾಂಗೀಯರ ಅಸ್ಮಿತೆಯನ್ನು ಪ್ರತಿಪಾದಿಸುವ ಜೊತೆಗೆ ಅವರಿಗೆ ಆತ್ಮರಕ್ಷಣೆಯ ಅಗತ್ಯವನ್ನು ಬೋಧಿಸುವ ಕ್ರಾಂತಿಕಾರಿ ಗುಂಪಾಗಿದೆ. ಅಬ್ರಹಾಂ ಲಿಂಕನ್ ಗುಲಾಮಗಿರಿಯನ್ನು ರದ್ದುಪಡಿಸಿದ ಒಂದು ಶತಮಾನದ ಬಳಿಕ, ಬಂದೂಕುಗಳನ್ನು ಹಿಡಿದ ಬ್ಲಾಕ್ ಪ್ಯಾಂಥರ್ಸ್ ಪಕ್ಷದ ನಾಯಕರು, ಪ್ರಖರವಾದ ಭಾಷಣಗಳನ್ನು ಮಾಡುತ್ತಾ ಅಮೆರಿಕದ ಕರಿಯಲ್ಲಿ ಭರವಸೆಯನ್ನು ಮೂಡಿಸಿದರು. ಯಾಕೆಂದರೆ ಬಹಳಷ್ಟು ಮಟ್ಟಿಗೆ ಭಾರತದಲ್ಲಿ ಇಂದಿಗೂ ಕೆಲವು ಮೇಲ್ಜಾತಿಯವರ ಕೈಯಲಿ ತಾರತಮ್ಯ ಹಾಗೂ ಹಿಂಸೆಯನ್ನು ಅನುಭವಿಸುತ್ತಿರುವ ದಲಿತರಂತೆ, ಅಮೆರಿಕದ ಕರೆಯರು ಕೂಡಾ ವರ್ಣಭೇದ ಹಾಗೂ ಭೀತಿಯನ್ನು ಎದುರಿಸಿದ್ದರು.
ಬ್ಲಾಕ್ ಪ್ಯಾಂಥರ್ ಪಾರ್ಟಿಯಿಂದ ಪ್ರೇರಿತರಾಗಿ ಭಾರತದಲ್ಲಿ ಕೆಲವು ಕ್ರಾಂತಿಕಾರಿ ದಲಿತರು, ದಲಿತ್ ಪ್ಯಾಂಥರ್ಸ್, ಸಾಮಾಜಿಕ-ರಾಜಕೀಯ ಆಂದೋಲನವನ್ನು ಆರಂಭಿಸಿದರು ಹಾಗೂ ಈ ಚಳವಳಿಯು ಭಾರತದಲ್ಲಿ ದಲಿತಶಕ್ತಿಯನ್ನು ಒಂದು ತೀವ್ರವಾದಿ ವಿಚಾರಧಾರೆಯಾಗಿ ರೂಪಿಸುವ ಪ್ರಯತ್ನಕ್ಕೆ ಚಾಲನೆ ನೀಡಿತು. ಇದಕ್ಕೂ ಮೊದಲು ದಲಿತರು ಸೌಮ್ಯವಾದಿ ಸುಧಾರಕ, ಭಾರತೀಯ ಸಂವಿಧಾನದ ಶಿಲ್ಪಿ ಭೀಮ ರಾವ್ ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದಿದ್ದರು. ದಲಿತ ಪ್ಯಾಂಥರ್ಸ್ ನಾಯಕರು, ತಮಿಳುನಾಡಿನ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಅಂದರೆ ವಿಮೋಚನಾ ಚಿರತೆಗಳ ಪಕ್ಷದ ಸ್ಥಾಪನೆಗೂ ಪ್ರೇರಕ ಶಕ್ತಿಯಾಗಿದ್ದರು. ತೋಳ್ ತಿರುಮಾಳ್ವನ್ ನೇತೃತ್ವದ ವಿಸಿಕೆ ಪಕ್ಷವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಪೀಪಲ್ ವೆಲ್‌ಫೇರ್ ಫ್ರಂಟ್ (ಪಿಡಬ್ಲುಎಫ್) ಮೈತ್ರಿಕೂಟದ ಭಾಗವಾಗಿತ್ತು.
ಅತ್ತ ಉತ್ತರ ಭಾರತದಲ್ಲಿ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್, ಈ ಮೊದಲು ದಲಿತ ಸೇನಾ ಎಂಬ ಹೆಸರಿನಲ್ಲಿ ತಮ್ಮ ಆದ ಸಂಘಟನೆಯೊಂದನ್ನು ರಚಿಸಿದ್ದರು. ಹೀಗೆ, ಚಿಂತನೆಗ, ಶೈಲಿ ಹಾಗೂ ದೃಶ್ಯ ರೂಪದಲ್ಲಿ ಮುಹಮ್ಮದ್ ಅಲಿ ಭಾರತದ ಫ್ಯಾಶನ್ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಾಸುಹೊಕ್ಕಾದ್ದಾರೆ.





