ಕುಂದಾಪುರ, ಜೂ.4: ಕೋಣಿ ಪೂರ್ಣಿಮ ಬಾರ್‌ನ ಬಳಿ ಜೂ.2ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಅಶೋಕ ಪೂಜಾರಿ ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ, 510ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಈತ ಮಟ್ಕಾದಿಂದ ಸಂಗ್ರಹವಾದ ಹಣವನ್ನು ಸುರೇಶ್ ಕೋಣಿ ಎಂಬ ಮಟ್ಕಾ ಬಿಡ್ಡರ್‌ಗೆ ನೀಡುತ್ತಿರುವುದಾಗಿ ತಿಳಿದುಬಂದಿದೆ.