Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದಲ್ಲೂ ಅಲಿಯ ಬಾಕ್ಸಿಂಗ್ ಝಲಕ್

ಭಾರತದಲ್ಲೂ ಅಲಿಯ ಬಾಕ್ಸಿಂಗ್ ಝಲಕ್

ವಾರ್ತಾಭಾರತಿವಾರ್ತಾಭಾರತಿ4 Jun 2016 11:54 PM IST
share
ಭಾರತದಲ್ಲೂ ಅಲಿಯ ಬಾಕ್ಸಿಂಗ್ ಝಲಕ್

ಹೊಸದಿಲ್ಲಿ, ಜೂ.4: ಬಾಕ್ಸಿಂಗ್ ಜಗತ್ತಿನ ದಂತಕತೆಯಾದ ಮುಹಮ್ಮದ್ ಅಲಿ, 1980ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಬಾಕ್ಸಿಂಗ್ ಕೌಶಲ್ಯವನ್ನು ಕಾಣುವ ಸುಯೋಗ ಭಾರತೀಯರಿಗೆ ಲಭಿಸಿತ್ತು. ಹೊಸದಿಲ್ಲಿಯಲ್ಲಿ ನಡೆದ ‘ಗ್ರೇಟೆಸ್ಟ್ ಟು ಗ್ರೇಟೆಸ್ಟ್’ ಪ್ರದರ್ಶನದಲ್ಲಿ ಪಾಲ್ಗೊಂಡ ಅವರು, ತನ್ನ ಬಾಕ್ಸಿಂಗ್ ನೈಪುಣ್ಯತೆಯನ್ನು ಝಲಕ್ ಪ್ರದರ್ಶಿಸಿದ್ದರು. ಆಗಿನ ಪ್ರಧಾನಿ ಇಂದಿರಾಗಾಂಧಿ ಕೂಡಾ ಅಲಿ ಅವರ ಪ್ರದರ್ಶನ ಪಂದ್ಯವನ್ನು ವೀಕ್ಷಿಸಿದ್ದರು.

ಲಂಡನ್ ಮೂಲದ ಎನ್‌ಆರ್‌ಐ ಉದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಅಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ್ದ ಮುಹಮ್ಮದ್ ಅಲಿ ಹೊಸದಿಲ್ಲಿ, ಮುಂಬೈ ಹಾಗೂ ಚೆನ್ನೈಗೂ ಭೇಟಿ ನೀಡಿ, ಬಾಕ್ಸಿಂಗ್ ಪ್ರದರ್ಶನ ನೀಡಿದ್ದರು.

ಶುಕ್ರವಾರ ನಿಧನರಾದ ಮುಹಮ್ಮದ್ ಅಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸಂದರ್ಭದಲ್ಲಿ ಸ್ವರಾಜ್, ಈ ಬಾಕ್ಸಿಂಗ್ ತಾರೆಯ ಭಾರತ ಭೇಟಿಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.‘‘ ಮುಹಮ್ಮದ್ ಅಲಿ ನಿಜಕ್ಕೂ ದಂತಕತೆಯಾಗಿದ್ದರು. ಅವರ ಆಟವನ್ನು ಕಂಡು ಭಾರತದ ಜನತೆ ರೋಮಾಂಚಿತರಾಗಿದ್ದರು’’ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಲಿಯ ಜೊತೆ ವಿಚಾರವಿನಿಮಯ ನಡೆಸಿದ ಹಾಗೂ ಅವರೊಂದಿಗೆ ಕೆಲವು ಬಾಕ್ಸಿಂಗ್‌ಪಂಚ್‌ಗಳನ್ನು ವಿನಿಮಯ ಮಾಡಿಕೊಂಡ ಭಾರತೀಯ ಬಾಕ್ಸರ್‌ಗಳು ಇನ್ನೂ ಹೆಚ್ಚು ಪುಳಕಿತರಾಗಿದ್ದರು. ತಮಿಳುನಾಡಿನ ಬಾಕ್ಸರ್ ರ್ಯಾಂಡೋಲ್ಫ್ ಪೀಟರ್ಸ್‌, ಅಲಿಯೊಂದಿಗೆ ಪ್ರದರ್ಶನ ನೀಡಿದ ಭಾರತೀಯ ಆಟಗಾರರಲ್ಲೊಬ್ಬರಾಗಿದ್ದರು.

ಅಲಿಗೆ ಪರಿಚಯಿಸಲ್ಪಟ್ಟ ಕೆಲವು ಅದೃಷ್ಟಶಾಲಿ ಬಾಕ್ಸರ್‌ಗಳಲ್ಲೊಬ್ಬರಾದ ರ್ಯಾಂಡೊಲ್ಫ್ ಪೀಟರ್ಸ್‌ ಅವರು, ಅಲಿಯವರಿಗೆ ತನ್ನೊಂದಿಗೆ ಶ್ಯಾಡೋ ಬಾಕ್ಸಿಂಗ್ ಆಡುವಂತೆ ತಾನು ಕೋರಿದಾಗ, ಅಲಿಯ ಮುಖದಲ್ಲಿ ಕಂಡುಬಂದ ಅಚ್ಚರಿಯನ್ನು ತಾನಿಂದಿಗೂ ಮರೆತಿಲ್ಲವೆಂದು ಅವರು ನೆನಪಿಸಿಕೊಳ್ಳುತ್ತಾರೆ.

ಆಗ 25 ವರ್ಷ ವಯಸ್ಸಿನವರಾಗಿದ್ದ ರ್ಯಾಂಡೊಲ್ಫ್ ಅವರು ರೈಲ್ವೆನ ಫಿದರ್‌ವೇಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು. ನನ್ನ ಕೋರಿಕೆಯನ್ನು ಕೇಳಿ ಅಲಿ ಅಚ್ಚರಿಗೊಂಡರು. ‘ನೀನಿಷ್ಟು ಸಣ್ಣವ, ನನ್ನೊಂದಿಗೆ ಕಾದಾಡಲು ಬಯಸುತ್ತೀಯಾ?. ನನ್ನ ಒಂದು ಏಡಗೈ ಹೊಡೆತದಿಂದ ನೀನು ಕ್ರೀಡಾಂಗಣದ ಹೊರಗೆ ಹೋಗಿ ಬೀಳುವಿ’’ ಎಂದರು.ಆಗ ನಾನು ಮುಗುಳ್ನಗುತ್ತಾ ನನ್ನನ್ನು ಪರಿಚಯಿಸಿಕೊಂಡು, ನನ್ನ ಆಸನದಲ್ಲಿ ಅಸೀನನಾದೆ. ಮಾಜಿ ಹೆವಿವೇಟ್ ಚಾಂಪಿಯನ್ ಜಿಮ್ಮಿ ಎಲ್ಲಿಸ್ ಜೊತೆ ಪ್ರದರ್ಶನ ಪಂದ್ಯದ ಬಳಿಕ ಅವರು ನನ್ನನ್ನು ಕರೆದು, ವೇದಿಕೆಗೆ ಬರುವಂತೆ ತಿಳಿಸಿದರು. ಅವರು ನನ್ನೊಂದಿಗೆ ಎರಡು ನಿಮಿಷ ಮಾತನಾಡಿ, ಹುರಿದುಂಬಿಸಿದರು ಹಾಗೂ ಅವರು ತನ್ನ ಎಡಗೈನ ಬಾಕ್ಸಿಂಗ್ ಕವಚವನ್ನು ಉಡುಗೊರೆಯಾಗಿ ನೀಡಿದರು’’ ಎಂದು ಈಗ 63 ವರ್ಷ ವಯಸ್ಸಾಗಿರುವ ರ್ಯಾಂಡೋಲ್ಫ್ ಭಾವುಕರಾಗಿ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X