ಇಂದು ಉಚಿತ ವೈದ್ಯಕೀಯ ತಪಾಸಣೆ
ಹಿರಿಯಡ್ಕ, ಜೂ.4: ಮಣಿಪಾಲ ಟೌನ್ ರೋಟರಿ ಕ್ಲಬ್, ಮೊಗವೀರ ಯುವ ಸಂಘಟನೆ ಹಿರಿಯಡಕ ಘಟಕ, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಮತ್ತು ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇವುಗಳ ಸಹಭಾಗಿತ್ವದಲ್ಲಿ ಹಿರಿಯಡ್ಕದ ಮಾಧವಮಂಗಳ ಸಭಾಭವನದಲ್ಲಿ ಜೂ.5ರಂದು ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ವೈದ್ಯರಿಂದ ಸಾರ್ವಜನಿಕರಿಗಾಗಿ ಉಚಿತ ಮಧುಮೇಹ, ಮಧುಮೇಹಿ ಕಾಲು ತಪಾಸಣೆ, ನೇತ್ರ ಹಾಗೂ ಹೃದಯ ತಪಾಸಣೆಗಳ ಶಿಬಿರವನ್ನು ಆಯೋಜಿಸಲಾಗಿದೆ.
ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ, ತಜ್ಞರ ಶಿಫಾರಸ್ಸಿನಂತೆ ಉಚಿತ ಇಸಿಜಿ ಹಾಗು ಇನ್ನಿತರ ಸೇವೆಗಳು ಲಭ್ಯವಿದ್ದು, ಮಾಹಿತಿಗಳಿಗಾಗಿ ಮೊ.ಸಂ.9880328604ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





