ಮುಹಮ್ಮದ್ ಅಲಿ ಶ್ರೇಷ್ಠರಾದ ಆ 20 ಕ್ಷಣಗಳು!

1. ಬೈಕ್ ಕಳವಾದ ಬಳಿಕ ಬಾಕ್ಸಿಂಗ್ ಆರಂಭ (1954)
ಉಚಿತ ಊಟದ ಆಮಿಷ ಇಲ್ಲದಿದ್ದರೆ ಮುಹಮ್ಮದ್ ಅಲಿ ಎಂದೂ ಬಾಕ್ಸಿಂಗ್‌ಗೆ ಧುಮುಕುತ್ತಲೇ ಇರಲಿಲ್ಲ. 12ರ ಹುಡುಗ ಕ್ಯಾಸ್ಸಿಯಸ್ ಕ್ಲೇ, ಉಚಿತ ಪಾಪ್‌ಕಾರ್ನ್ ಹಾಗೂ ಕ್ಯಾಂಡಿ ಸವಿಯಲು ಲೌಸ್‌ವಿಲ್ಲೆ ಹೋ ಷೋಗೆ ಕೆಂಪು- ಬಿಳಿ ಬಣ್ಣದ ಬೈಕ್‌ನಲ್ಲಿ ಓಡಾ ಡುತ್ತಿದ್ದ ಕಾಲ ಅದು. ಆದರೆ ಬಾಲಕ ಷೋ ನೋಡಿ ವಾಪಸು ಬಂದಾಗ ಬೈಕ್ ಮಾಯ ವಾಗಿತ್ತು. ಒಬ್ಬ ವ್ಯಕ್ತಿ ಪೊಲೀಸ್ ಬಳಿ ಈ ಬಗ್ಗೆ ಮಾತನಾಡುವಂತೆ ಸಲಹೆ ಮಾಡಿದ. ಕೊಲಂಬಿಯಾ ಜಿಮ್ ಬಳಿ ಇದ್ದ ಆ ವ್ಯಕ್ತಿ ಜಾಯ್ ಮಾರ್ಟಿನ್. ಈ ಘಟನೆ ಬಗ್ಗೆ ಮುಹಮ್ಮದ್ ಅಲಿ ತಮ್ಮ ‘‘ದ ಗ್ರೇಟೆಸ್ಟ್’’ ಎಂಬ ಆತ್ಮಚರಿತ್ರೆಯಲ್ಲಿ ಹೀಗೆ ಬರೆದು ಕೊಂಡಿದ್ದಾರೆ: ನಾನು ಅಳುತ್ತಾ ಕೆಳಗೆ ಓಡಿ ಬಂದೆ. ಆದರೆ ಆ ದೃಶ್ಯ, ಶಬ್ದ ಹಾಗೂ ಬಾಕ್ಸಿಂಗ್ ವಾಸನೆ ನನ್ನಲ್ಲಿ ಉತ್ಕಟ ಆಕಾಂಕ್ಷೆ ಮೂಡಿಸಿತು. ನಾನು ನನ್ನ ಬೈಕನ್ನು ಮರೆತೇ ಬಿಟ್ಟೆ ಕ್ಲೇ ಅಲ್ಲಿಂದ ಹೊರಡಲು ಅನುವಾದಾಗ ಮಾರ್ಟಿನ್ ಅವರ ಭುಜದ ಮೇಲೆ ಮೆಲುವಾಗಿ ಬಡಿದು, ಹೀಗೆ ಇಲ್ಲಿ ಪ್ರತಿ ರಾತ್ರಿ ಬಾಕ್ಸಿಂಗ್ ಆಡುತ್ತೇವೆ. ಸೋಮವಾರದಿಂದ ಶುಕ್ರವಾರದವರೆಗೆ, ಸಂಜೆ 6 ರಿಂದ 8ರ ನಡುವೆ. ಆಸಕ್ತಿ ಇದ್ದರೆ ಸೇರಬಹುದು. ಇಲ್ಲಿದೆ ಅರ್ಜಿ ಎಂದು ಹೇಳಿ ಅರ್ಜಿ ನಮೂನೆ ನೀಡಿದ.
2. ಮೊದಲ ಜಯ (1954)
ಕ್ಲೇ ಸಹಜ ಬಾಕ್ಸರ್ ಆಗಿರಲಿಲ್ಲ. ಮೊದಲ ಬಾರಿಗೆ ರಿಂಗ್‌ಗೆ ಇಳಿದದ್ದು ಹಳೆ ಹುಲಿಯ ಜತೆಗೆ. ಸುಲಭವಾಗಿ ಸೋತು ಸುಣ್ಣವಾದ. ನಿಮಿಷದಲ್ಲೇ ಆತನ ಮೂಗಿನಲ್ಲಿ ರಕ್ತ ಸುರಿಯ ಲಾರಂಭಿಸಿತು. ಆತನನ್ನು ಕೊನೆಗೆ ಹೊರಗೆ ಎಳೆಯಬೇಕಾಯಿತು. ಆದರೆ ಆರು ವಾರಗಳ ಬಳಿಕ ಕ್ಲೇ, ರಾನಿ ಓ ಕೀಫಿ ವಿರುದ್ಧ ಮೊದಲ ಬೌಟ್ ಜಯ ಸಾಸಿದರು. ಮಾರ್ಟಿನ್ ತಮ್ಮ ಟುಮಾರೋಸ್ ಚಾಂಪಿಯನ್ ಎಂಬ ಜನಪ್ರಿಯ ಟಿ.ವಿ. ಕಾರ್ಯಕ್ರಮದಲ್ಲಿ ಇದನ್ನು ಬಿಂಬಿಸಿದರು. ಇದಾದ ಬಳಿಕ ಆತನ ತಂದೆ ಕ್ಯಾಸ್ಸಿಯಸ್ ಕ್ಲೇ ಸೀನಿಯರ್, ನನ್ನ ಮಗ ಮತ್ತೊಬ್ಬ ಜಾಯ್ ಲೂಯಿಸ್ ಆಗುತ್ತಾನೆ. ದ ವರ್ಲ್ಡ್ ಹೆವಿವೇಟ್‌ಚಾಂಪಿಯನ್ ಕ್ಯಾಸ್ಸಿಯಸ್ ಕ್ಲೇ! ಎಂದು ಉದ್ಗರಿಸಿದ್ದರು.
3. ರೋಮ್ ಒಲಿಂಪಿಕ್ಸ್ ಚಿನ್ನ (1960)
ಕ್ಲೇ ಒಲಿಂಪಿಕ್ಸ್ ಹತ್ತಿರಕ್ಕೂ ಸುಳಿದಿರಲಿಲ್ಲ. ಏಕೆಂದರೆ ವಿಮಾನ ಹಾರಾಟದ ಬಗ್ಗೆ ಆತನಿಗೆ ಭಯ ಇತ್ತು. ವಿಮಾನ ಹತ್ತುವಾಗಕೂಡಾ ಸೇನೆಯ ಬಳಿ ಹೆಚ್ಚುವರಿ ಇದ್ದ ಪ್ಯಾರಾಚೂಟ್ ಕಟ್ಟಿಕೊಂಡಿದ್ದ. ಮೊದಲ ಮೂರು ಬೌಟ್‌ಗಳಲ್ಲಿ ಸುಲಭ ಜಯ ಸಾಸಿದ ಬಳಿಕ 1956ರ ಕಂಚಿನ ಪದಕ ವಿಜೇತ ಬಿಂಗಿವ್ ಪೀಟ್ರಿಯಾವಿಸ್ಕಿ ವಿರುದ್ಧ ಪೈನಲ್‌ನಲ್ಲಿ ಕಠಿಣ ಸವಾಲು ಎದುರಾಯಿತು. ಆದರೆ ಅವಿರೋಧ ತೀರ್ಪಿನಲ್ಲಿ ಜಯ ಸಾಸುವ ಮುನ್ನ ಕ್ಲೇ ಸಾಕಷ್ಟು ಹೋರಾಡಿದರು. ಮುಂದೆ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವಂತೆ ಈ ಚಿನ್ನದ ಪದಕವನ್ನು ಅವರು ಓಹಿಯೊ ನದಿಗೆ ಎಸೆದಿದ್ದರು. ನಾನು ಹೋರಾಡುವ ಕೆಲವೇ ನಿಮಿಷಗಳ ಮುನ್ನ ಆ ವ್ಯಕ್ತಿಯನ್ನು ನಾನು ಸಾಯುವಂತೆ ಹೊಡೆದೆ. ಏಕೆಂದರೆ ಆತ ಅದನ್ನು ನನ್ನಿಂದ ಕಸಿದುಕೊಳ್ಳಲು ಯತ್ನಿಸಿದ್ದ... ಆದರೆ ನಾನು ಈಗ ಅದನ್ನು ನದಿಗೆ ಎಸೆದಿದ್ದೇನೆ. ಈ ಬಗ್ಗೆ ನನಗೆ ನೋವು ಅಥವಾ ವಿಷಾದ ಇಲ್ಲ. ಕೇವಲ ನಿರಾಳತೆ ಹಾಗೂ ಬಲ ಬಂದಿದೆ ಇದು ಕಲ್ಪನೆ. ವಾಸ್ತವ ಇನ್ನೂ ಹೆಚ್ಚು ವ್ಯಾವಹಾರಿಕ: ಅವರು ಪದಕ ಕಳೆದುಕೊಂಡರು.
4. ಜಾರ್ಜ್ ಜತೆ ಕ್ಲೇ ಮುಖಾಮುಖಿ (1961)
ವೃತ್ತಿಪರ ಬಾಕ್ಸರ್ ಆಗ ಬೆಳೆದ ಬಳಿಕ, ಕ್ಲೇ ಆರು ತಿಂಗಳಲ್ಲಿ ಆರು ಹೋರಾಟಗಳಲ್ಲಿ ಗೆದ್ದರು. ಇದಾದ ಬಳಿಕ ಲಾಸ್ ವೇಗಸ್ ರೇಡಿಯೊ ಅವರ ಏಳನೆ ಸ್ಪರ್ಧೆಯನ್ನು ಉತ್ತೇಜಿಸಿತು. ಅದು ಖ್ಯಾತ ಬಾಕ್ಸರ್ ಜಾರ್ಜಿಯಸ್ ಜಾರ್ಜ್ ವ್ಯಾಂಗರ್ ಜತೆಗಿನ ಮುಖಾಮುಖಿ. ಅವರ ಕೌಶಲ ಅವರಿಗೆ ಅಪಾರ ಅಭಿಮಾನಿ ವರ್ಗವನ್ನು ಸೃಷ್ಟಿಸಿತ್ತು. ಮುಂದೆ ಅಲಿ ತಮ್ಮ ಆತ್ಮಚರಿತ್ರೆ ಲೇಖಕ ಥಾಮ್ಸನ್ ಹೌಸರ್‌ಗೆ ಹೇಳಿದಂತೆ, ಆತ ಬೊಬ್ಬಿಡುತ್ತಲೇ ಹೋರಾಟ ಆರಂಭಿಸಿದರು. ಈ ನಿಷ್ಪ್ರಯೋಜಕ ವ್ಯಕ್ತಿ ನನ್ನನ್ನು ಸೋಲಿಸಿದಲ್ಲಿ, ನಾನು ರಿಂಗ್‌ನಲ್ಲಿ ಹೊರಳಾಡಿ, ನನ್ನ ಕೂದಲು ಕತ್ತರಿಸಿಕೊಳ್ಳುತ್ತೇನೆ. ಆದರೆ ಅದು ಸಾಧ್ಯವೇ ಇಲ್ಲ; ಏಕೆಂದರೆ ನಾನು ವಿಶ್ವದ ಶ್ರೇಷ್ಠ ಹೋರಾಟಗಾರ ಎಂದು ಜಾರ್ಜ್ ಕೂಗಾಡಿದ್ದರು. ಆಗ ನಾನು ನನ್ನ ಮನಸ್ಸಿನಲ್ಲೇ ಹೀಗೆ ಅಂದುಕೊಳ್ಳುತ್ತಿದ್ದೆ. ಈ ಹೋರಾಟವನ್ನು ನಾನು ಎದುರು ನೋಡು ತ್ತಿದ್ದೇನೆ. ಜಾರ್ಜಿಯಸ್ ಜಾರ್ಜ್ ಹೋರಾಡುತ್ತಿದ್ದರೆ ನಾನೂ ಸೇರಿದಂತೆ ಜನ ಕಿಕ್ಕಿರಿದು ನೆರೆದಿರುತ್ತಾರೆ. ಆದ್ದರಿಂದ ನಾನು ಹೆಚ್ಚು ಮಾತನಾಡಿದರೆ, ನನ್ನನ್ನು ನೊಡಲು ಎಷ್ಟು ಮಂದಿ ಹಣ ಕೊಟ್ಟು ಬರುತ್ತಾರೆ ಎನ್ನುವುದು ನನಗೇ ಗೊತ್ತಿರಲಿಲ್ಲ
5. ಬಾಕ್ಸಿಂಗ್‌ನ ನಾಸ್ಟ್ರಾಡಾಮಸ್ ಆದ ಕ್ಲೇ (1962)
ಅಲಿ ತಕ್ಷಣ ಯಾವ ಸುತ್ತಿನಲ್ಲಿ ಗೆಲ್ಲಬಹುದು ಎನ್ನುವುದನ್ನು ಸರಿಯಾಗಿ ಅಂದಾಜಿಸಲು ಆರಂಭಿಸಿದರು. ಮೂರನೇ ಸುತ್ತು ಎಂದು ಅವರು ಎಂಟು ಬಾರಿ ಹೇಳಿದ್ದರಲ್ಲಿ ಏಳು ಬಾರಿ ಅದು ಸರಿಯಾಯಿತು. 1962ರ ೆಬ್ರವರಿಯಲ್ಲಿ ಅವರು ಐದನೇ ಸುತ್ತಿನ ಬದಲಾಗಿ ನಾಲ್ಕನೆ ಸುತ್ತಿನಲ್ಲೇ ಡಾನ್ ವಾರ್ನರ್ ಅವರನ್ನು ಸೋಲಿಸಿದರು. ಮೊದಲು ಹೋರಾಟ ಮುಗಿಸಲು ಕಾರಣವೆಂದರೆ ವಾರ್ನರ್ ಹಸ್ತಲಾಘವ ನೀಡಲಿಲ್ಲ ಎಂದು ಹೇಳಿಕೊಂಡರು. ಅಂಥ ಪ್ರಚಾರ ಕೌಶಲ ಪ್ರತಿಲ ಕೊಟ್ಟಿತು. ಕ್ಲೇ ಡಾಗ್ ಜೋನ್ಸ್ ಜತೆಗಿನ ಪ್ರಾಥಮಿಕ ಬೌಟ್‌ಗೆ ಆರಂಭಿಸುವ 30 ನಿಮಿಷ ಮುನ್ನವೇ ಬಾಕ್ಸಿಂಗ್ ಬರಹಗಾರ ಎ.ಜೆ.ಲೀಬ್ಲಿಂಗ್ ಮೆಡಿಸನ್ ಸ್ಕ್ವಾರ್ ಗಾರ್ಡನ್‌ಗೆ ಆಗಮಿಸಿದರು. ಆದರೆ ಎಲ್ಲ ಟಿಕೆಟ್‌ಗಳು ಮಾರಾಟವಾಗಿ ಜನ ನಿರಾಸೆಯಿಂದ ಹೋಗುತ್ತಿದ್ದುದನ್ನು ಕಂಡು ದಂಗಾದರು.
6. ಹೆನ್ರಿ ಕೂಪರ್ ವಿರುದ್ಧದ ಪ್ರದರ್ಶನ (1963)
ವೆಂಬ್ಲೆ ಕ್ರೀಡಾಂಗಣಕ್ಕೆ ಕ್ಲೇ ರಾಜನಂತೆ ಬಂದರು. ಕ್ಯಾಸ್ಸಿಯಸ್ ದ ಗ್ರೇಟ್ ಎಂಬ ಬರಹವಿದ್ದ ಗೌನ್ ಹಾಗೂ ನಕಲಿ ವಜ್ರದ ಕಿರೀಟ ಧರಿಸಿದ್ದರು. ಅಂದಾಜಿಸಿದ್ದಂತೆ ಕೂಪರ್ ಐದನೇ ಸುತ್ತಿನಲ್ಲಿ ಬೀಳಬೇಕಿತ್ತು. ಅಲಿ ಹಲವು ಹೊಡೆತಗಳ ನಿಧಾನ ಆಟಕ್ಕೆ ಮುಂದಾದರು. ಆದರೆ ನಾಲ್ಕನೆ ಸುತ್ತು ಮುಗಿಯಲು ಐದು ಸೆಕೆಂಡ್‌ಗಳಿದ್ದಾಗ, ಕೂಪರ್ ಅವರ ಹುಕ್, ಕ್ಲೇ ಮಾಂಸವನ್ನು ಪುಡಿಗಟ್ಟಿತು. ಕ್ಲೇ ಮೇಲಕ್ಕೆ ಕೆಳಕ್ಕೆ ಏದುರುಸಿರು ಬಿಡುತ್ತಿದ್ದಾಗ ಗಂಟೆ ಹೊಡೆದು ಕೊಳ್ಳುತ್ತಿತ್ತು. ಆದರೆ ತಮ್ಮ ತರಬೇತಿದಾರ ಆಂಜೆಲೊ ಡುಂಡಿಯಂತೆ ಅಮಲಿನಿಂದ, ರೆಫ್ರಿಗೆ ಗ್ಲೌಸ್ ಹರಿದು ಹೋದ ಸೂಚನೆ ನೀಡಿದರು. ಸಹಾಯಕ ತಕ್ಷಣ ಐಸ್ ಸುರಿದ. ಹೆಚ್ಚುವರಿ ಗ್ಲೌಸ್ ತಕ್ಷಣಕ್ಕೆ ಸಿಗಲಿಲ್ಲ. ಈ ವಿಳಂಬ ಅಲಿ ಪುನಶ್ಚೇತನಕ್ಕೆ ಕೆಲ ಹೆಚ್ಚುವರಿ ಸೆಕೆಂಡ್‌ಗಳ ಕಾಲಾವಕಾಶ ನೀಡಿತು. ಕ್ರೌರ್ಯದಿಂದ ಕೂಡಿದ ಆ ಪ್ರತಿದಾಳಿ ಕೂಪರ್ ಅವರ ಮುಖವನ್ನು ಜಜ್ಜಿಹಾಕಿತು. ಮೊದಲೇ ಅಂದಾಜಿಸಿದ್ದಂತೆ ಐದನೆ ಸುತ್ತಿನಲ್ಲಿ ಹೋರಾಟ ಅಂತ್ಯವಾಯಿತು.
7. ಸನ್ನಿ ಲಿಸ್ಟನ್ ಹೋರಾಟ (1964)
ವೇಗ, ಸುಂದರ, ಚುರುಕು ಮಾತಿನ ಕ್ಲೇ ಸಾಹಸಿಯೂ ಆಗಿದ್ದ. ಸನ್ನಿ ಲಿಸ್ಟನ್ ಹಾಗೂ ಫ್ಲೋಯ್ಡೋ ಪ್ಯಾಟರ್ಸನ್ ನಡುವೆ 1963ರಲ್ಲಿ ನಡೆದ ಹೋರಾಟಕ್ಕೆ ಕೆಲವೇ ಕ್ಷಣಗಳ ಮುನ್ನ, ಕ್ಲೇ ಲಿಸ್ಟನ್ ಜತೆಗೆ ವೇಗಾಸ್‌ಗೆ ಹಿಂಬಾಲಿಸಿದರು. ಹೋರಾಟದಲ್ಲಿ ಸೋಲುತ್ತಿರುವುದನ್ನು ಕಂಡು, ಆ ಹೇಸಿಗೆ ಕರಡಿಯನ್ನು ನೋಡು; ಆತ ಸರಿಯಾಗಿ ಏನನ್ನೂ ಮಾಡಲಾರ ಎಂದು ಕೂಗಿ ಹೇಳಿದರು. ಪ್ರಾಮ್ಟರ್ ಆಗಿದ್ದ ಹೆರಾಲ್ಡ್ ಕಾನ್ರಾಡ್ ಥಾಮಸ್ ಹಸೆರ್‌ಗೆ ಮುಂದೆ ಏನಾಯಿತು ಎಂದು ವಿವರಿಸುತ್ತಾರೆ. ಆಗ ಲಿಸ್ಟನ್ ದಾಳವನ್ನು ಕೆಳಕ್ಕೆ ಎಸೆದು, ಕ್ಲೇ ಬಳಿಗೆ ಬಂದರು. ಕರಿಯ ಇಲ್ಲಿ ಕೇಳು. 10 ಸೆಕೆಂಡ್ ಒಳಗೆ ಇಲ್ಲಿಂದ ಹೋಗದಿದ್ದರೆ, ನಿನ್ನ ದೊಡ್ಡ ನಾಲಿಗೆಯನ್ನು ಬಾಯಿಯಿಂದ ಎಳೆದು, ತಿಕಕ್ಕೆ ಅಂಟಿಸುತ್ತೇನೆ ಎಂದು ಕೂಗಾಡಿದ. ಕ್ಲೇ ಭಯದಿಂದ ವಾಪಸಾದರು. ಆದರೆ ಬಳಿಕ ಲಿಸ್ಟನ್ ಅವರ ಮನೆಗೆ ಹೋಗಿ, ಗಟ್ಟಿಯಾಗಿ ಕೂಗಿದರು. ಇದಾದ ಸ್ವಲ್ಪ ಸಮಯದಲ್ಲೇ ಹೋರಾಟಕ್ಕೆ ಸಹಿ ಮಾಡಲಾಯಿತು ಹಾಗೂ ಅಲಿ ತಮ್ಮ ವಿಶ್ವ ಪ್ರಶಸ್ತಿ ಗೆದ್ದರು.
8. ಕ್ಲೇಗೆ ವಿಶ್ವ ಹೆವಿವೇಟ್‌ಪ್ರಶಸ್ತಿ (1864)
ಲಿಸ್ಟನ್ ದೈತ್ಯ ಬಾಕ್ಸರ್. ಅವರ ಆ ಕ್ರೂರ ಕಣ್ಣುಗಳೇ ಎದುರಾಳಿಯ ಶಕ್ತಿಗುಂದಿಸುತ್ತಿದ್ದವು. ಮುಷ್ಟಿ ಪ್ರಹಾರಕ್ಕೆ ಮುನ್ನವೇ ಅವರ ಪ್ರಜ್ಞೆ ಕಳೆದು ಹೋಗುತ್ತಿತ್ತು. 36 ಹೋರಾಟಗಳಲ್ಲಿ ಒಂದರಲ್ಲಷ್ಟೇ ಸೋತಿದ್ದರು. ಅವರ ದವಡೆ ಮುರಿದರೂ ಬಿಟ್ಟಿರಲಿಲ್ಲ. ಇದರಿಂದಾಗಿ ಕ್ಲೇ ನಾಡಿ ದುಪ್ಪಟ್ಟು ವೇಗದಲ್ಲಿ ಬಡಿದುಕೊಳ್ಳುತ್ತಿತ್ತು. ಆತನಿಗೆ ಭಯವಾಗಿದೆ ಎಂದು ಜನ ಅಂದುಕೊಂಡರು. ಆದರೆ ವೈದ್ಯ ಪೆರ್ಡಿ ಪಚಾವೊಗೆ ವಿವರಿಸಿದ ಪ್ರಕಾರ ಆತ ಒಂದು ಯೋಜನೆ ಹಾಕಿದ್ದ. ಲಿಸ್ಟನ್‌ಗೆ ಯಾವ ಬಗೆ ಭಯವೂ ಇಲ್ಲ. ಆದರೆ ಆತನಿಗೆ ಒಂದು ಚೂರೂ ಭಯ ಇಲ್ಲ. ಏಕೆಂದರೆ ನಾನು ಮುಂದೆ ಏನು ಮಾಡುತ್ತೇನೆ ಎನ್ನುವುದು ಆತನಿಗೆ ಗೊತ್ತಿಲ್ಲ ತಕ್ಷಣ ಎದುರಾಳಿಗೆ ಅದು ತಿಳಿಯಿತು. ಕ್ಲೇ ಹೆಚ್ಚು ಹರಿತವಾಗಿ ಐದನೇ ಸುತ್ತಿನಲ್ಲಿ ಉಳಿದುಕೊಂಡು, ಆರನೆ ಸುತ್ತಿನಲ್ಲಿ ಎದುರಾಳಿ ಹೊರಹೋಗುವಂತೆ ಮಾಡಿದರು. ನಾನು ವಿಶ್ವಕ್ಕೇ ಆಘಾತ ತಂದಿದ್ದೇನೆ. ನಾನೇ ಶ್ರೇಷ್ಠ. ಜೀವಂತ ಇರುವ ಅತ್ಯಂತ ಚುರುಕಿನ ವ್ಯಕ್ತಿ ಎಂದು 22 ವರ್ಷದ ಕ್ಲೇ ಉದ್ಗರಿಸಿದ್ದರು.
9. ಮುಹಮ್ಮದ್ ಅಲಿ ಆದ ಕ್ಲೇ (1964)
ಭೂಕಂಪದ ಬಳಿಕವೂ ಪದೇ ಪದೇ ಕಂಪನ ಇರುತ್ತದೆ. ಕರಿಯ ಮುಸ್ಲಿಮರ ಬಗ್ಗೆ ಕ್ಲೇ 1959ರಿಂದಲೇ ಆಸಕ್ತಿ ಹೊಂದಿದ್ದರು. ಮುಹಮ್ಮದ್ ಸ್ಪೀಕ್ಸ್, ರೀಡ್ ಇಟ್ ಎಂದು ಹೇಳುತ್ತಾ ಪತ್ರಿಕೆ ಮಾರಾಟ ಮಾಡುತ್ತಿದ್ದ ದೃಶ್ಯವನ್ನು ಕಂಡರು. ಆದರೆ 1961ರ ಮಾರ್ಚ್ ನಲ್ಲಿ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ, ಆ ಧರ್ಮದ ಬಗ್ಗೆ ಆಸಕ್ತಿ ಹೆಚ್ಚಿತು. ಕ್ಲೇ ಇಸ್ಲಾಂಗೆ ಮತಾಂತರ ಹೊಂದಿದ್ದನ್ನು ಪ್ರಕಟಿಸಿದರು. ತಂದೆ ಕೂಡಾ ತಮ್ಮ ಮಗ ಇಸ್ಲಾಮ್ ದೇಶಕ್ಕೆ ಸೇರಿದ್ದಾಗಿ ಘೋಷಿಸಿದರು.
10. ಅಸಹ್ಯ ಮುಖ ಪರಿಚಯ (1965- 1967)
ಮರು ಪಂದ್ಯದ ಮೊದಲ ಸುತ್ತಿನಲ್ಲೇ ಲಿಸ್ಟನ್ ಅವರನ್ನು ಬಗ್ಗುಬಡಿದ ಅಲಿ, ಬಳಿಕ ಪ್ಯಾಟರ್ಸನ್ ಅವರನ್ನು ಎದುರಿಸಿದರು. ಪ್ಯಾಟರ್ಸನ್ ಸ್ಪೋರ್ಟ್ಸ್ ಇಲ್ಯುಸ್ಟ್ರೇಟೆಡ್‌ಗೆ ಹೇಳಿದಂತೆ, ಒಬ್ಬ ಕರಿಯ ಮುಸ್ಲಿಮ್ ವಿಶ್ವ ಹೆವಿವೇಟ್‌ಚಾಂಪಿಯನ್ ಆಗುವುದು ಎಂದರೆ ಅದು ಕ್ರೀಡೆ ಹಾಗೂ ದೇಶಕ್ಕೆ ಅವಮಾನ. ಇದಕ್ಕೆ ಮೊದಲು ತಮ್ಮ ಹರಿತ ನಾಲಿಗೆ ಮೂಲಕ, ಪ್ಯಾಟರ್ಸನ್ ಕೂಡಾ ಅಂಕಲ್ ಟಾಮ್ ನೀಗ್ರೊ ಎಂದು ತಿರುಗೇಟು ನೀಡಿದ್ದರು. ಬಳಿಕ 12 ಸುತ್ತುಗಳಲ್ಲಿ ಚಿತ್ರಹಿಂಸೆ ನೀಡಿದ್ದರು. 1967ರಲ್ಲಿ ಎರ್ನಿ ಟೆರ್ರೆಲ್ ಜತೆಗಿನ ಹೋರಾಟ ದಲ್ಲಿ ಇಬ್ಬರೂ ಪರಸ್ಪರ ಜನಾಂಗೀಯ ನಿಂದನೆ ಹಾಗೂ ಸಂಘರ್ಷಕ್ಕೆ ಇಳಿದರು.
11. ನಾನು ಅವರೊಂದಿಗೆ ಜಗಳ ಮಾಡಿರಲಿಲ್ಲ (1966)
1964ರಲ್ಲಿ ಅಲಿ ಎರಡು ಬಾರಿ ಸೇನಾ ಪರೀಕ್ಷೆಗೆ ಕುಳಿತು ಅನುತ್ತೀರ್ಣರಾದರು. ಅವರ ಸೇನಾ ಐಕ್ಯೂ 78 ಆಗಿದ್ದು, ಇದು ಸೇನಾ ಅರ್ಹತೆಗಿಂತ ತೀರಾ ಕಡಿಮೆ ಇತ್ತು. ನಾನು ಶ್ರೇಷ್ಠ; ಆದರೆ ಸ್ಮಾರ್ಟ್ ಅಲ್ಲ ಎಂದು ಅಲಿ ಪ್ರತಿಕ್ರಿಯಿಸಿದ್ದರು. ಆದರೆ 1966ರಲ್ಲಿ ಸೇನೆ ತಮ್ಮ ಗುಣ ಮಟ್ಟವನ್ನು ಸಡಿಲಿಸಿ, ಅವರನ್ನು ಅರ್ಹರನ್ನಾಗಿ ಮಾಡಿತು. ಕೆಲ ಗಂಟೆಗಳ ಕಾಲ ಪ್ರಶ್ನೆಗಳನ್ನು ಕೇಳಿ, ವಿಯೆಟ್ನಾಂ ಯುದ್ಧದಲ್ಲಿ ನೀವು ಎಲ್ಲಿ ನಿಲ್ಲುತ್ತೀರಿ ಎಂದು ಕೇಳಿದರು. ತಕ್ಷಣ ಅಲಿ, ನಾನು ಬಿಳಿ ಅಮೆರಿಕನ್ನರ ಜತೆ ಜಗಳಕ್ಕೆ ನಿಂತಿರಲಿಲ್ಲ. ಕರಿಯ ಮುಸ್ಲಿಂ ಎಂಬ ಕಾರಣಕ್ಕಾಗಿ ಅವರು ದ್ವೇಷ ಮಾಡಿದ್ದರು. ಇದೀಗ ವಂಚಕ ಎಂಬ ಆರೋಪ ಹೊರಿಸಿದ್ದರು.
12. ಅಮೆರಿಕದಿಂದ ಹೆವಿವೇಟ್‌ಬೆಲ್ಟ್ ಕಿತ್ತುಕೊಂಡ ಅಲಿ (1966)
1915ರಿಂದ 1966ರವರೆಗೆ ಎರಡು ಬಾರಿ ಹೆವಿವೇಟ್‌ಪ್ರಶಸ್ತಿ ಅಮೆರಿಕದ ಕೈ ತಪ್ಪಿತ್ತು. ಇಷ್ಟಾಗಿಯೂ ಅಮೆರಿಕದಲ್ಲಿದ್ದುಕೊಂಡು ಹೋರಾ ಡುವುದು ಅಲಿಗೆ ಕಠಿಣವಾಯಿತು. ಜಾರ್ಜ್ ಚುವೆಲೊ ಅವರನ್ನು ಸೋಲಿಸಲು ಕೆನಡಾಗೆ, ಹೆನ್ರಿ ಕೂಪರ್ ಹಾಗೂ ಬ್ರಿಯನ್ ಅವರನ್ನು ಬಗ್ಗುಬಡಿಯಲು ಇಂಗ್ಲೆಂಡಿಗೆ, ಕಾರ್ಲ್ ಮೈಲ್ಡೆಂಬರ್ಜರ್ ಅವರನ್ನು ಸದೆಬಡಿಯಲು ಜರ್ಮನಿಗೆ ವಲಸೆ ಹೋಗಬೇ ಕಾಯಿತು. ಇವರು ವಿದೇಶಿ ನೆಲಗಳಿಗೆ ಗುಡ್‌ವಿಲ್ ರಾಯಭಾರಿಯಾದರು. ಬಾಕ್ಸಿಂಗ್ ಪ್ರಿಯರು ಇವರನ್ನು ನಂಬಿಕೆಯ ಹೊರತಾಗಿಯೂ ಪ್ರೀತಿಸಿದರು.
13. ಅಲಿ ನಡೆ ಅನಾವರಣ (1966)
ಅಲಿ ಅಮೆರಿಕಕ್ಕೆ ವಾಪಸಾದ ಬಳಿಕ, ತಮ್ಮ ವೃತ್ತಿಯ ಅತ್ಯುನ್ನತ ಸಾಧನೆ ತೋರಿದರು. ಕ್ಲೆವ್‌ಲೆಂಡ್ ಬಿಗ್‌ಕ್ಯಾಟ್ ವಿಲಿಯಮ್ಸ್ ಅವರನ್ನು ಮೂರು ಸುತ್ತುಗಳಲ್ಲಿ ಬಗ್ಗುಬಡಿದರು. ಈ ಹೋರಾಟದ ಬಳಿಕ ವಿಲಿಯಮ್ಸ್ ಕಿಡ್ನಿ ಕಳೆದುಕೊಂಡು, ನಾಲ್ಕು ಶಸಚಿಕಿತ್ಸೆಗೆ ಒಳಗಾ ಗಬೇಕಾಯಿತು. ವಿಲಿಯವ್ಸ್ ಅವರನ್ನು ಅಲಿ ನಾಲ್ಕು ಬಾರಿ ಬಗ್ಗುಬಡಿದರು.
14. ಬಾಕ್ಸಿಂಗ್ ನಿಷೇಧ- ಸೆರೆಮನೆಗೆ (1967- 68)
ನಾನು ಶಾಂತಿಗಾಗಿ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುತ್ತಿದ್ದೇನೆ. ನಾನು ಹೇಗೆ ಮತ್ತೊಬ್ಬರನ್ನು ಕೊಲ್ಲಲು ಸಾಧ್ಯ? ಎಂದು ಅಲಿ 1967ರಲ್ಲಿ ಕೇಳಿದ್ದರು. ಅಮೆರಿಕ ಸೇನೆ ಸೇರಲು ನಿರಾಕರಿಸಿದ್ದಕ್ಕಾಗಿ ಇವರಿಂದ ಹೆವಿವೇಟ್‌ಚಾಂಪಿಯನ್ ಪ್ರಶಸ್ತಿ ಕಿತ್ತುಕೊಂಡು ಬಾಕ್ಸಿಂಗ್‌ನಿಂದ ನಿಷೇಸಲಾಯಿತು. ವರ್ಷದ ಬಳಿಕ ಮಿಯಾಮಿ ಡೇಡ್ ಕೌಂಟಿ ಜೈಲಿನಲ್ಲಿ 10 ದಿನಗಳ ಸೆರೆಮನೆ ವಾಸ ಅನುಭವಿಸಬೇಕಾಯಿತು. ಲೈಸನ್ಸ್ ಇಲ್ಲದೇ ಚಾಲನೆ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಸಲಾಗಿತ್ತು. ಆದರೆ 1970ರಲ್ಲಿ ಸುಪ್ರೀಂಕೋರ್ಟ್, ಅಲಿ ಮತ್ತೆ ಹೋರಾಟಕ್ಕೆ ಇಳಿಯಬಹುದು ಎಂದು ತೀರ್ಪು ನೀಡಿತು.
15. ಶತಮಾನದ ಹೋರಾಟ (1971)
ಅಜ್ಞಾತವಾಸದಿಂದ ಅಲಿ ವಾಪಾಸಾದಾಗ ಸಾರ್ವಜನಿಕರ ಗಮನ ಬೇರೆಡೆಗೆ ಹರಿದಿತ್ತು. ಅವರ ಕೌಶಲವೂ ಸವೆದಿತ್ತು. ಮೆಡಿಸನ್ ಸ್ಕ್ವೇರ್ ಗಾರ್ಡರ್‌ನಲ್ಲಿ ಅಲಿ ಹಾಗೂ ಹೊಸ ಚಾಂಪಿಯನ್ ಜೋಯ್ ಪ್ರೇಸಿಯರ್ ಪರಸ್ಪರರ ವಿರುದ್ಧ ಎಲ್ಲ ಪಟ್ಟುಗಳನ್ನೂ ಪ್ರಯೋಗಿಸಿದರು. ಆದರೆ ಹಿಂದಿನ ಚುರುಕುತನ ಹೊಂದಿರದ ಅಲಿ ಮೇಲೆ ಪ್ರೇಸಿಯರ್ ಕ್ರಮೇಣ ಹಿಡಿತ ಪಡೆದರು. 15ನೇ ಸುತ್ತಿನಲ್ಲಿ ಅಲಿ ಮೇಲೆ ಪ್ರೇಸಿಯರ್‌ಜಯ ಸಾಸಿದರು.
16. ರುಂಬ್ಲೆ ಇನ್ ದ ಜಂಗಲ್ ವಿರುದ್ಧ ಗೆದ್ದು ಪ್ರಶಸ್ತಿ (1974)
ಅಲಿ ಕುಟುಂಬದವರು ಕೂಡಾ ಜಾರ್ಜ್ ೆರ್‌ಮನ್ ವಿರುದ್ಧ ಅಲಿ ಜಯ ಸಾಸುತ್ತಾರೆ ಎಂಬ ನಿರೀಕ್ಷೆ ಹೊಂದಿರಲಿಲ್ಲ. ೆರ್‌ಮನ್ ಪ್ರೇಸಿಯರ್ ಅವರನ್ನು ಎರಡು ಸುತ್ತುಗಳಲ್ಲೇ ಬಗ್ಗುಬಡಿದಿದ್ದರು. ಸಹಜವಾಗಿಯೇ 32 ವರ್ಷದ ಅಲಿಯವರನ್ನು ಕೂಡಾ ಸದೆ ಬಡಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲಿ ಪೋರ್‌ಮನ್ ಅವರತ್ತ ನೇರ ದೃಷ್ಟಿಯಿಂದ ದಿಟ್ಟಿಸಿ, ತಮ್ಮನ್ನು ಎತ್ತಿ ಹಾಕುವಂತೆ ಆಹ್ವಾನ ನೀಡಿದರು. ಆರನೆ ಸುತ್ತಿನ ವೇಳೆಗೆ ೆರ್‌ಮನ್ ಸುಸ್ತಾಗಿದ್ದರು. ಅವರ ಮುಖ ಊದಿಕೊಂಡಿತ್ತು. ಚರ್ಮ ಕಿತ್ತು ಸೂರ್ಯನ ಬಣ್ಣ ಬಂದಿತ್ತು. ಎಂಟನೆ ಸುತ್ತು ಮುಗಿಯಲು ಎಂಟು ಸೆಕೆಂಡ್ ಇದ್ದಾಗ, ಅಲಿಯವರ ಶಕ್ತಿಶಾಲಿ ಪಂಚ್‌ಗೆ ಉತ್ತರಿಸಲಾಗದೇ, ಪೋರ್‌ಮನ್ ಕುಸಿದರು. ಆ ವೇಳೆಗೆ ಕಮೆಂಟರಿ ಹೇಳುತ್ತಿದ್ದ ಡೇವಿಡ್ ಪ್ರೋಸ್ಟ್, ಶ್ರೇಷ್ಠ ಮನುಷ್ಯ ಅದನ್ನು ಸಾಸಿ ಬಿಟ್ಟರು ಎಂದು ಘೋಷಿಸಿದರು. ಇದು ಬಾಕ್ಸಿಂಗ್ ಇತಿಹಾಸದಲ್ಲೇ ಅತ್ಯಂತ ಸಂತಸದ ಕ್ಷಣ.
17. ಮನಿಲಾದ ರೋಚಕತೆ (1975)
ತಮ್ಮ ಮೊದಲ ಹೋರಾಟಕ್ಕೆ ಮುನ್ನ ಅಲಿ ಪ್ರೇಸಿಯರ್ ಅವರನ್ನು, ಕೆಟ್ಟ ನೀಗ್ರೊ ಎಂದು ಜರೆದಿದ್ದರು. ಆತ ನನ್ನನ್ನು ಇಷ್ಟಪಡುವುದಿಲ್ಲ. ಏಕೆಂದರೆ ಆತ ಟಂಕಲ್ ಟಾಮ್. ಆತ ವಿರೋಗಳಿಗಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಟೀಕಿಸಿದ್ದರು. ಮೂರನೆ ಹೋರಾಟದ ವೇಳೆಗೆ ವಿರೋಯನ್ನು ಗೋರಿಲ್ಲಾ ಎಂದು ಜರೆದಿದ್ದರು. 10 ಗಂಟೆಯ ಸುಡುಬಿಸಿಲಲ್ಲಿ ಹೋರಾಟ ಆರಂಭವಾಯಿತು. ಅಲಿ ಆರಂಭದಲ್ಲಿ ಪ್ರಾಬಲ್ಯ ಮೆರೆೆದರು. ಆದರೆ 13ನೆ ಸುತ್ತಿನಲ್ಲಿ ಪ್ರೇಸಿಯರ್ ಮುಚ್ಚಿದ ಕಣ್ಣಿನ ನಡುವೆಯೂ ಎದುರಾಳಿಗೆ ಪ್ರಹಾರ ನೀಡಿದರು. 14ನೆ ಸುತ್ತಿನಲ್ಲಿ ಪ್ರೇಸಿಯರ್ ಅವರ ತರಬೇತುದಾರ ಹೋರಾಟ ನಿಲ್ಲಿಸಿದರು.
18. 3ನೆ ಬಾರಿ ಅಲಿ ಹೆವಿವೇಟ್‌ಚಾಂಪಿಯನ್ (1978)
ಅಲಿ 36 ವರ್ಷದವರಿದ್ದರೂ ಹೋರಾಟ ಮುಂದುವರಿಸಿದ್ದರು. ಈ ವೇಳೆಗೆ ಅವರು ಲಿಯೋನ್ ಸ್ಪಿಂಕ್ಸ್ ವಿರುದ್ಧ ಸೋತು ಪ್ರಶಸ್ತಿ ಕಳೆದುಕೊಂಡಿದ್ದರು. ಆದರೆ ಕೆಲವು ತಿಂಗಳ ಬಳಿಕ, ಮರು ಪಂದ್ಯದಲ್ಲಿ ಗೆದ್ದು, ಮೂರನೆ ಬಾರಿಗೆ ಹೆವಿವೇಟ್‌ಚಾಂಪಿಯನ್ ಆದ ಮೊಟ್ಟಮೊದಲ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಬಳಿಕ ಬಾಕ್ಸಿಂಗ್‌ನಿಂದ ನಿವೃತ್ತರಾಗುವುದಾಗಿ ಘೋಷಿಸಿದರು. ನಾನು ಸಾಸಿದ್ದಕ್ಕಿಂತ ಹೆಚ್ಚನ್ನು ತ್ಯಾಗ ಮಾಡಿದ್ದೇನೆ. ಇನ್ನು ಹೋರಾಡುವುದರಿಂದ ನಾನು ಗಳಿಸುವುದು ಇನ್ನೇನೂ ಉಳಿದಿಲ್ಲ ಎಂದು ಹೇಳಿದ್ದರು.
19. ಲಾರಿ ಹೋಮ್ಸ್ಸ್ ವಿರುದ್ಧ ಕರಾಳ ರಾತ್ರಿ (1980)
ಆದರೆ ಇತರ ಬಾಕ್ಸರ್‌ಗಳಂತೆ ಅಲಿ ಕೂಡಾ ಹೋರಾಟದಿಂದ ದೂರ ಉಳಿಯಲಿಲ್ಲ. ನೂತನ ಚಾಂಪಿಯನ್ ಹೋಮ್ಸ್ ವಿರುದ್ಧ ಹೋರಾಟಕ್ಕೆ ಸಹಿ ಮಾಡಿದರು. ಹತ್ತನೆ ಸುತ್ತಿನ ಹೋರಾಟದ ಬಳಿಕ ಅವರ ತರಬೇತುದಾರ ಅಂಜೆಲೋ ದುಂಡಿ ಹೋರಾಟ ನಿಲ್ಲಿಸಲು ಬಯಸಿದರು. ಆದರೆ ಅಲಿಯವರ ಮುಖ್ಯ ಹೈಂಗರ್ ಆರ್. ಡ್ರ್ಯೂ ಬುಂಡಿನಿ ಬ್ರೌನ್ ಹೋರಾಟ ಮುಂದುವರಿಸಲು ಸೂಚಿಸಿದರು. ದುಂಡೀ ಗೆದ್ದರು. ಅಲಿ ತಲೆ ಬಾಗಿ ದರು. ಹೋರಾಡಲು ಶಕ್ತಿ ಉಳಿದಿರಲಿಲ್ಲ. ಅವರು ಒಂದು ಸುತ್ತಿನಲ್ಲೂ ಗೆಲ್ಲಲಾಗಲಿಲ್ಲ.
20. ಅಟ್ಲಾಂಟಾ ಮತ್ತು ಮರುವೌಲ್ಯ (1996ರಿಂದ)
ಅಲಿ ಸಂತ ಎಂಬ ಬಣ್ಣನೆಯನ್ನು ಯಾರೂ ಸ್ವೀಕರಿಸುವುದಿಲ್ಲ. ಗೋಸ್ಟ್ ಆ್ ಮನಿಲಾ ಎಂಬ ಕೃತಿಯಲ್ಲಿ ಮಾರ್ಕ್ ಕ್ರಾಮ್ ಹೇಳುವಂತೆ, ಅಲಿ ಇಂದು ಸಾಮಾಜಿಕ ಶಕ್ತಿಯಾಗಿ ಉಳಿದಿಲ್ಲ. ರಾಜಕೀಯವಾಗಿ ಆಕರ್ಷಕವಾಗಿರುವುದು ಜನಾಂಗೀಯ ಕೂಗಾಟದಿಂದ. ಇಂದು ಅವರು ದ್ವೇಷ ಭಾಷೆಯಿಂದ ಹಾಗೂ ಲೈಂಗಿಕ ಪುಂಡಾಟಿಕೆಯಿಂದ ಮಲಿನವಾದಂತೆ ಕಾಣುತ್ತಿದ್ದಾರೆ. ಇಷ್ಟಾಗಿಯೂ ಅಟ್ಲಾಂಟಾ ಒಲಿಂಪಿಕ್ಸ್ ಜ್ಯೋತಿ ಬೆಳಗುವ ವ್ಯಕ್ತಿ ಅಲಿ ಎಂದು ಬಹಿರಂಗಪಡಿಸಿದಾಗ, ಪಾರ್ಕಿನ್ಸನ್ ಕಾಯಿಲೆಯಿಂದ ಅವರ ಎಡಗೈ ನಡುಗುತ್ತಿತ್ತು. ಸೇರಿದ್ದ ಅಪಾರ ಕ್ರೀಡಾಪ್ರೇಮಿಗಳ ಗದ್ದಲ ಮುಗಿಲು ಮುಟ್ಟಿತು. ಕಣ್ಣೀರು, ಪ್ರೀತಿಯ ಮಹಾಪೂರ ಹರಿಯಿತು. ಇದು ಅಲಿ ಇಂದಿಗೂ ಎಷ್ಟು ಪೂಜ್ಯರಾಗಿದ್ದಾರೆ ಎನ್ನುವುದನ್ನು ತೋರಿಸಿತು.







