ಜೂ.10: ಬಿಸಿಎಫ್‌ನಿಂದ ಇಫ್ತಾರ್
ದುಬೈ, ಜೂ.4: ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ವತಿಯಿಂದ ಈ ವರ್ಷದ ರಮಝಾನ್ ಇಫ್ತಾರ್ ಕೂಟವು ಜೂ.10ರಂದು ದುಬೈಯ ಊದ್ ಮೇತಾ ರೋಡ್‌ನಲ್ಲಿರುವ ಇರಾನಿಯನ್ ಕ್ಲಬ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಬಿಸಿಎಫ್ ಇಫ್ತಾರ್ ಕಮಿಟಿಯ ಅಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ತಿಳಿಸಿದ್ದಾರೆ. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆಯಲ್ಲಿ ನಡೆ ಯುವ ಈ ಕಾರ್ಯಕ್ರಮದಲ್ಲಿ ಇಸ್ಲಾಮೀ ಪ್ರವಚನ, ದೀನೀ ರಸಪ್ರಶ್ನೆಗಳು, ಕಿರಾಅತ್, ಭಾಷಣ ಸ್ಪರ್ಧೆ ಹಾಗೂ ಮುಂಬರುವ ಬಿಸಿಎಫ್ ಸ್ಕಾಲರ್‌ಶಿಪ್ ವಿತರಣೆ ಬಗ್ಗೆ ವಿವರಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





