ಇಂದಿನ ಕಾರ್ಯಕ್ರಮ
*ಮಾಹಿತಿ ಶಿಬಿರ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿಕಲಚೇತನರ ಸಬಲೀಕರಣಕ್ಕಾಗಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಕುರಿತು ವಿಕಲಚೇತನರ ಹೆತ್ತವರಿಗೆ ಮಾಹಿತಿ ಶಿಬಿರ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ವೈಕುಂಠ ಬಾಳಿಗಾ ಲಾ ಕಾಲೇಜು ಸಭಾಂಗಣ, ಕುಂಜಿಬೆಟ್ಟು ಉಡುಪಿ. *ನೃತ್ಯ ನಾಟಕ: ಮಣಿಪಾಲ ಪದವಿ ಪೂರ್ವ ಕಾಲೇಜಿನ ಮಕ್ಕಳ ತಂಡ ‘ಚಿನ್ನಾರಿ’ಸಂಘಟಿಸುವ ರಂಗ ಪ್ರಯೋಗ. ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ನೃತ್ಯ ನಾಟಕ ‘ಚಿತ್ರಾ’. ಸಂಜೆ 6:30ರಿಂದ. ಸ್ಥಳ: ಎಂಜೆಸಿ ಸಭಾಭವನ, ಮಣಿಪಾಲ.
*ವರ್ತಕರ ಸಮ್ಮೇಳನ: ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ವರ್ತಕರ ಸಮ್ಮೇಳನ-2016. ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ. ಸಮಯ: ಅಪರಾಹ್ನ 2ರಿಂದ. ಸ್ಥಳ: ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪ, ಅಂಬಲಪಾಡಿ ಉಡುಪಿ.
*ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 10:30ಕ್ಕೆ ರಾಜಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಡಾ.ಎಚ್. ಕೆ.ಸುರೇಶಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ವಿದ್ವಾನ್ ಭೀಮಸೇನಾಚಾರ್ಯ ಗುತ್ತಲ್‌ರಿಂದ ಧಾರ್ಮಿಕ ಪ್ರವಚನ. 7ಕ್ಕೆ ಬ್ರಹ್ಮ ರಥೋತ್ಸವ, ನವರತ್ನ ರಥೋತ್ಸವ.
*ಉಚಿತ ವೈದ್ಯಕೀಯ ತಪಾಸಣೆ: ಮಣಿಪಾಲ ಟೌನ್ ರೋಟರಿ ಕ್ಲಬ್, ಮೊಗವೀರ ಯುವ ಸಂಘಟನೆ ಹಿರಿಯಡಕ ಘಟಕ, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಮತ್ತು ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಸಹಭಾಗಿತ್ವದಲ್ಲಿ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಸಾರ್ವಜನಿಕರಿಗಾಗಿ ಉಚಿತ ಮಧುಮೇಹ, ಮಧುಮೇಹಿ ಕಾಲು ತಪಾಸಣೆ, ನೇತ್ರ ಹಾಗೂ ಹೃದಯ ತಪಾಸಣೆ. ಸಮಯ: ಬೆಳಗ್ಗೆ 9ರಿಂದ. ಸ್ಥಳ: ಮಾಧವ ಮಂಗಳ ಸಭಾಭವನ, ಹಿರಿಯಡಕ ಪೊಲೀಸ್ ಠಾಣೆಯ ಬಳಿ, ಹಿರಿಯಡಕ.
*ರಕ್ತದಾನ ಶಿಬಿರ: ಉಡುಪಿ ಜಿಲ್ಲೆಯ ಕುಡುಬಿ ಸಮಾಜೋದ್ಧಾರಕ ಸಂಘ, ಕುಡುಬಿ ಕೂಡುಕಟ್ಟುಗಳ ಒಕ್ಕೂಟ, ಕುಡುಬಿ ಯುವ ಸಂಘಟನೆ ಹಾಗೂ ಉಡುಪಿ ಜಿಲ್ಲಾಡಳಿತದ ವತಿಯಿಂದ ಮಣಿಪಾಲ ಕೆಎಂಸಿ ರಕ್ತನಿಧಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ. ಸಮಯ: ಬೆಳಗ್ಗೆ 8:30ರಿಂದ 3ರವರೆಗೆ. ಸ್ಥಳ: ಶ್ರೀಮಲ್ಲಿಕಾರ್ಜುನ ಸಭಾಭವನ, ಆಮ್ರಕಲ್ಲು ಹಿಲಿಯಾಣ.
*ಪ್ರಶಸ್ತಿ ಪ್ರದಾನ: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಕಾರ್ಕಳ ಸಾಹಿತ್ಯ ಸಂಘ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಡಾ.ಎನ್.ಎಸ್.ತಾರಾನಾಥರಿಗೆ ಸೇಡಿಯಾಪು ಪ್ರಶಸ್ತಿ ಪ್ರದಾನ. ಸಮಯ: ಸಂಜೆ 5ಕ್ಕೆ. ಸ್ಥಳ: ಹೊಟೇಲ್ ಪ್ರಕಾಶ್‌ನ ‘ಸಂಭ್ರಮ’ ಸಭಾಮಂದಿರ, ಕಾರ್ಕಳ.





