ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ:ಎರಡು ಕಾರುಗಳಿಗೆ ಬಸ್ಸ್ ಡಿಕ್ಕಿ; 17 ಸಾವು, 33 ಮಂದಿಗೆ ಗಾಯ
![ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ:ಎರಡು ಕಾರುಗಳಿಗೆ ಬಸ್ಸ್ ಡಿಕ್ಕಿ; 17 ಸಾವು, 33 ಮಂದಿಗೆ ಗಾಯ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ:ಎರಡು ಕಾರುಗಳಿಗೆ ಬಸ್ಸ್ ಡಿಕ್ಕಿ; 17 ಸಾವು, 33 ಮಂದಿಗೆ ಗಾಯ](https://www.varthabharati.in/sites/default/files/images/articles/2016/06/5/Master.jpg)
ಮುಂಬೈ, ಜೂ.5: ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಎರಡು ಕಾರುಗಳಿಗೆ ಲಕ್ಸುರಿ ಬಸ್ಸೊಂದು ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ 17 ಮಂದಿ ಮೃತಪಟ್ಟು, 33 ಮಂದಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಅತಿಯಾದ ವೇಗದಿಂದ ಸಂಚರಿಸುತ್ತಿದ್ದ ಲಕ್ಸುರಿ ಬಸ್ಸೊಂದು ರಾಯ್ಗಡ್ ಜಿಲ್ಲೆಯ ಶೆಡುಂಗಿ ಎಂಬಲ್ಲಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭಿಸಿದ್ದು, ಮೃತಪಟ್ಟವರಲ್ಲಿ 10 ಮಹಿಳೆಯರು, 6 ಪುರುಷರು ಹಾಗೂ ಎಂಟು ತಿಂಗಳ ಮಗು ಸೇರಿದೆ.
ಸಾತ್ರಾದಿಂದ ಮುಂಬೈಗೆ ತೆರಳುತ್ತಿದ್ದ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರು ಗಳಿಗೆ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿತು. ಕಾರು ಗಳು ನಜ್ಜುಗುಜ್ಜಾಗಿದೆ. ಬಸ್ ರಸ್ತೆಯ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಗಾಯಗೊಂಡವರನ್ನು ಪಾನ್ವೆಲ್ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story