Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನಾವು ನೋಡದ ಸಿಂಗಾಪುರ

ನಾವು ನೋಡದ ಸಿಂಗಾಪುರ

ಕೆ.ಪಿ. ಲಕ್ಷ್ಮಣ್ಕೆ.ಪಿ. ಲಕ್ಷ್ಮಣ್5 Jun 2016 12:27 PM IST
share
ನಾವು ನೋಡದ ಸಿಂಗಾಪುರ

‘ಟೆಕ್ಕ ಮಾರುಕಟ್ಟೆ’ ಬಹು ಸಂಸ್ಕೃತಿಯ ಮತ್ತು ಮಿಶ್ರ ಸಂಸ್ಕೃತಿಯ ಬದುಕಿನ ರೂಪಕದ ಹಾಗೆ ಕಂಡು ಬಿಡುತ್ತದೆ.ಇದಲ್ಲದೆ ದುಬಾರಿ ಮಾಲ್‌ಗಳು, ಹೋಟೆಲ್ ರೆಸ್ಟೋರೆಂಟ್‌ಗಳು, ಚಿನ್ನಾಭರಣದ ಅಂಗಡಿಗಳು,ಜ್ಯೋತಿಷ್ಯ ಶಾಸ್ತ್ರದ ಅಂಗಡಿ,ಕೆಲವು ದೇವಾಲಯ ಮತ್ತು ಮಸೀದಿಗಳು, ಸ್ವಚ್ಛವಾದ ಬೀದಿಗಳು ಮತ್ತು ರಸ್ತೆಗಳು ‘ಲಿಟಲ್‌ಇಂಡಿಯಾ’ವನ್ನು ಅತೀ ಸುಂದರವಾಗಿ ಕಾಣುವಂತೆ ನಿಲ್ಲಿಸಿವೆ.

ಸಿಂಗಾಪುರ್ ಎಂದರೆ ನನ್ನ ತಲೆಯಲ್ಲಿಯೂ ಹಾಗೆ ಇತ್ತು.ಸ್ವಚ್ಛ ಬೀದಿಗಳು, ಚಂದ ಚಂದದ ವಿಶಾಲ ರಸ್ತೆಗಳು,ಎತ್ತರದ ಕಟ್ಟಡಗಳು ಹವಾನಿಯಂತ್ರಿತ ಕಾರು, ಬಸ್ಸು,ವೇಗದ ರೈಲು,ಮಾಲು,ಮಾರುಕಟ್ಟೆ, ಎಲ್ಲದಕ್ಕೂ ಸಹಾಯ ಮಾಡಬಲ್ಲ ಮೆಷಿನ್‌ಗಳು, ಸದಾ ಬೆಳಕಿನಿಂದ ಜಗಮಗಿಸುವ ರೆಸ್ಟೋರೆಂಟ್, ರೆಸಾರ್ಟ್‌ಗಳು,ಅರೆ ಬೆತ್ತಲೆ ಹೆಣ್ಣುಗಳು, ಸಿಗರೇಟು, ಮಧ್ಯ, ಲೇಟ್ ನೈಟ್ ಪಾರ್ಟಿಗಳು ಒಟ್ಟಿನಲ್ಲಿ ಬಣ್ಣ ಮತ್ತು ಬೆಳಕಿನಿಂದ ತುಂಬಿದ, ಕತ್ತಲು ಮತ್ತು ಬಡತನ ಕಡಿಮೆ ಇರುವ ಊಹಾ ಚಿತ್ರ ಅದು.ಬಹುಶಃ ನಮ್ಮ ಅನೇಕ ಮಾಧ್ಯಮಗಳ ಪ್ರಭಾವದಿಂದ ರೂಪಿತವಾಗಿರುವ ಚಿತ್ರವೂ ಇರಬಹುದು .ಇಷ್ಟು ದಿನ ನಮ್ಮ ಟಿವಿ, ಪತ್ರಿಕೆಗಳು ಬಿಂಬಿಸಿರುವುದು ಇದೇ ಚಿತ್ರವನ್ನು ತಾನೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದು ನಮ್ಮ ಮಾಜಿ ಮುಖ್ಯಮತ್ರಿಯೊಬ್ಬರ ಮಾತೂ ತಲೆಯಲ್ಲಿ ಕೂತದ್ದರಿಂದಲೂ ಮೇಲಿನ ಚಿತ್ರ ನನ್ನ ತಲೆಯಲ್ಲಿ ಮೂಡಿರಬಹುದು.

ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಕಾಯುತ್ತಿದ್ದೆ. ಮೊದಲ ವಿಮಾನಯಾನ ನನಗದು. ದಿಗಿಲು ಮತ್ತು ಕುತೂಹಲ ಎರಡು ಇತ್ತು. ವಿಮಾನ ಬರುವುದು ಇನ್ನೂ ಗಂಟೆ ತಡವಿತ್ತು. ನನ್ನ ಪಕ್ಕದಲ್ಲಿ ನನ್ನದೇ ವಯಸ್ಸಿನ ಒಬ್ಬ ಯುವಕ ಕೂತಿದ್ದ. ಕುತೂಹಲಕ್ಕೆಂದು ಮಾತಿಗಿಳಿದೆ. ಅವನು ಮೂಲತಃ ಚೆನ್ನೈನವನು. ತಮಿಳು ಮತ್ತು ಚೂರು ಪಾರು ಇಂಗ್ಲಿಷ್ ಕೂಡ ಮಾತಾಡುತ್ತಿದ್ದ. ಸಿಂಗಾಪುರದ ಪ್ರಯಾಣ ಅವನಿಗೇನು ಹೊಸದಲ್ಲ ಅಲ್ಲಿನ ಕಟ್ಟಡ ಕಟ್ಟುವ ಕೂಲಿ ಕೆಲಸ ಮಾಡುವ ದಿನಗೂಲಿ ನೌಕರ ಆತ,ಆಗಾಗ ಇಂಡಿಯಾಗೆ ಬಂದು ಹೋಗುವುದಾಗಿ ಹೇಳಿದ, ಆದರೆ ಅವನಿಗೆ ಆ ದೇಶ ಚೂರೂ ಹಿಡಿಸಿರಲಿಲ್ಲ. ಅಲ್ಲಿನ ಕೆಲಸದ ರೀತಿ ನೀತಿಯ ಬಗ್ಗೆ ಬೇಜಾರು ತೋಡಿಕೊಂಡ. ‘‘ಮನೆಯಲ್ಲಿ ಎಲ್ಲವೂ ಸರಿ ಇದ್ದಿದ್ದರೆ ಇಲ್ಲೇ ಸರಿಯಾದ ಕೂಲಿ ಸಿಕ್ಕಿದ್ದರೆ ನಾನು ಆ ದೇಶಕ್ಕೆ ಹೋಗುತ್ತಲೇ ಇರಲಿಲ್ಲ’’ ನೊಂದ ದನಿಯಲ್ಲಿ ಹೇಳಿದ. ನನಗೆ ಹೆಚ್ಚೇನೂ ಕೇಳುವ ಧೈರ್ಯವಿರಲಿಲ್ಲ. ಅಪರಿಚಿತ ಊರಿನ ಬಗ್ಗೆ ಈಗ ತಾನೇ ಹೊಸದೊಂದು ಆಯಾಮ ತಲೆಯಲ್ಲಿ ತೆರೆದುಕೊಂಡಿತು. ಹೌದು, ನಾನಿದರ ಕುರಿತು ಮುಂಚೆ ಯೋಚಿಸಿಯೇ ಇರಲಿಲ್ಲ. ನಾನೀಗ ಹೊರಟಿರುವ ದೇಶದಲ್ಲಿ ಬಡವರೇ ಇಲ್ಲವೆ? ಗುಡಿಸಲುಗಳೇ ಇಲ್ಲವೇ? ಇಷ್ಟು ಚಂದದ ರಸ್ತೆ ಮಾಡುವ, ಕಟ್ಟಡ ಕಟ್ಟುವ, ಬೀದಿ ಗುಡಿಸುವ, ಕಸ ಬಾಚುವ ಜನ ಎಲ್ಲಿರುತ್ತಾರೆ? ಎಲ್ಲಿ ಉಂಡು, ಎಲ್ಲಿ ಮಲಗುತ್ತಾರೆ? ಎಷ್ಟು ಪಗಾರ ಸಿಗುತ್ತದೆ? ಅವರ ಜೀವನಕ್ಕದು ಸಾಕಾಗುತ್ತದೆಯೇ? ಈ ದೂರದ ದೇಶಕ್ಕೆ ನಾನು ಕಂಡಿರದ, ಉಹಿಸಿರದ ಎಷ್ಟೊಂದು ಪದರುಗಳಿವೆ !

 ನಾನಿರುವ ಜಾಗ ‘‘ಲಿಟಲ್ ಇಂಡಿಯಾ’’ ಸಿಂಗಾಪುರದಲ್ಲಿ ಅತೀ ಕೊಳಕು ಜಾಗ ಎಂಬ ಹೆಸರಿದೆ ಇದಕ್ಕೆ,ಆದರೆ ನನಗೆ ಈ ತನಕ ಹಾಗೆ ಅನ್ನಿಸಿಲ್ಲ. ಹಿಂದಿನಿಂದಲೂ ಇಂಡಿಯಾದ ವಲಸಿಗರು ಹೆಚ್ಚು ತಮಿಳರು ಮತ್ತು ಮಲಯಾಳಿಗಳು ವಾಸಿಸುತ್ತಿದ್ದ ಜಾಗ ಇದು.ತಮಿಳರು ಇಲ್ಲ್ಲಿ ಎಷ್ಟಿದ್ದಾರೆ. ಇಲ್ಲಿನ ಮಟ್ರೋ ರೈಲುಗಳಲ್ಲ್ಲಿ ಸೂಚನಾ ಭಾಷೆಯಾಗಿ ಹಾಗೂ ಬಹಳಷ್ಟು ಕಡೆ ನಾಮ ಫಲಕಗಳಲ್ಲಿ ತಮಿಳು ಬಳಸುತ್ತಾರೆ. ಮಲೇಶಿಯಾದ ತಮಿಳರು ಇಲ್ಲಿದ್ದರೆ ಅವರೆಲ್ಲ ಲಿಟಲ್ ಇಂಡಿಯಾವನ್ನು ‘‘ಟೆಕ್ಕ’’ಎಂದೇ ಕರೆಯುತ್ತಾರೆ. ಟೆಕ್ಕ ಎನ್ನುವುದು ಇಲ್ಲಿನ ಒಂದು ಬಗೆಯ ಮಾರುಕಟ್ಟೆ. ಸಿಂಗಾಪುರದಲ್ಲಿರುವ ಇಂಡಿಯಾ , ಬಾಂಗ್ಲಾ, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ಪಿಲಿಫೈನ್ಸ್ ದೇಶದ ಬಹಳಷ್ಟು ವಲಸಿಗರ ಇಷ್ಟದ ಸಂತೆ ಇದ್ದ ಹಾಗೆ. ಇದು ಬಯಲಲ್ಲಿ ನಡೆಯದೆ ತಾತ್ಕಾಲಿಕ ಚಾವಣಿಯಲ್ಲಿ ನಡೆಯುತ್ತದೆ. ಆದ್ದರಿಂದ ಅದಕ್ಕೊಂದು ಆಧುನಿಕ ಸ್ಪರ್ಶ ಬಂದಿದೆ ಹಾಗಾಗಿ ಆಧುನಿಕ ಸಂತೆ ಅಂತ ಬೇಕಾದರೂ ಅನ್ನಬಹುದು.ಇಲ್ಲಿ ನಿಮಗೆ ಎಲ್ಲವೂ ಒಂದೇ ಚಪ್ಪರದಡಿ ದೊರೆಯುತ್ತದೆ. ಹಣ್ಣು, ತರಕಾರಿ, ಮಾಂಸ, ದಿನಸಿ ಸಾಮಾನುಗಳು, ಬಟ್ಟೆ,ಪಾತ್ರೆಗಳು, ಮಧ್ಯ, ಸಿಗರೇಟು ಹೀಗೆ ಹೆಚ್ಚು ಕಮ್ಮಿ ಎಲ್ಲವೂ. ಹಣವಂತರು ಮಾಲ್ ಗಳಿಗೆ ಹೋದರೆ ಸ್ಥಿತಿವಂತರಲ್ಲದವರು ಇಲ್ಲಿಗೆ ಬರುತ್ತಾರೆ. ದೊಡ್ಡ ವಠಾರದಂತಿರುವ ಇಲ್ಲಿ ಎಲ್ಲ ಬಗೆಯ ಆಹಾರವೂ ಕಡಿಮೆ ಬೆಲೆಗೆ ದೊರೆಯುತ್ತದೆ. ಇಂಡಿಯಾದ ಮಾಮೂಲಿ ಅನ್ನ-ಸಾಂಬಾರಿಂದ ಹಿಡಿದು, ಮಲೇಶಿಯಾದ ಯಾವುದೋ ವಿಶೇಷ ಸಿಗಡಿ ಖಾದ್ಯದವರೆಗೆ ಇದರ ವಿಸ್ತಾರವಿದೆ. ವಠಾರದಂತೆ ಉದ್ದಕ್ಕೆ ಎರಡು ಮಗ್ಗುಲಲ್ಲಿರುವ ಥರಾವರಿ ಖಾದ್ಯದ ಅಂಗಡಿಗಳು, ಯಾವುದ್ಯಾವುದೋ ಖಾದ್ಯದ ಘಮಘಮಕ್ಕೆ ಇನ್ಯಾವುದೋ ಖಾದ್ಯದ ಘಮವು ಬೆರೆತು, ಮದುವೆ ಮನೆಯಲ್ಲಿ ಸೃಷ್ಟಿಯಾಗುವಂತೆ ಆಗುವ ವಿಚಿತ್ರ ಘಮವು, ಜನರ ಓಡಾಟ,ಅವರು ಮಾತಾಡುವ ತಮಿಳು ಮಿಶ್ರಿತ ಇಂಗ್ಲಿಷ್, ಇಲ್ಲವೇ ಮತ್ಯಾವುದೇ ಭಾಷೆ ಮಿಶ್ರಿತ ಇಂಗ್ಲಿಷ್, ಒಟ್ಟಿನಲ್ಲಿ ಇಲ್ಲಾರು ಇಂಗ್ಲಿಷ್‌ಅನ್ನು ಇಂಗ್ಲಿಷ್ ಆಗಿ

ರಲು ಬಿಡುವುದಿಲ್ಲ. ತಮ್ಮ ಭಾಷೆಗೆ ಒಗ್ಗಿಸಿಕೊಂಡು ಆಡುತ್ತಾರೆ. ಹೀಗೊಂದು ಮಿಶ್ರ ಭಾಷಾತಳಿ ಟೆಕ್ಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಸೃಷ್ಟಿ ಆಗುತ್ತಲೇ ಇರುತ್ತದೆ. ಕಠೋರ ಭಾಷಾ ಪ್ರೇಮ ಇಲ್ಲಾರಿಗೂ ಇದ್ದಂತೆ ಕಾಣುವುದಿಲ್ಲ. ಬದುಕು ಇಲ್ಲಿ ಎಲ್ಲರನ್ನು ತನಗೆ ಬೇಕಾದಂತೆ ಬಡಿದು ಎಲ್ಲದಕ್ಕೂ ಒಗ್ಗಿಸಿಬಿಟ್ಟಿದೆ. ಹಾಗೆ ನೋಡಿದರೆ ಭಾಷೆಯನ್ನು ಹೇಗೆ ಆಡಿದರೆ ತಾನೇ ಏನು? ಕಡೆಗೂ ಭಾಷೆ ಒಂದು ಸಂವಹನ ಮಾಧ್ಯಮ, ಭಾಷೆಯಿಂದ ಸಂವಹನ ಸಾಧ್ಯವಾದರೆ ಸಾಕು ಅಲ್ಲವೇ?ಮತ್ತೆ ಇಲ್ಲಿ ಕೂತು ತಿನ್ನಲು ಇರುವ ಆಸನಗಳು, ಮಜವೆಂದರೆ ಯಾವ ಅಂಗಡಿಯಲ್ಲಿ ಕೊಂಡವನು ಎಲ್ಲಿ ಬೇಕಾದರೂ ಕೂತು ತಿನ್ನಬಹುದು. ಈ ಅಂಗಡಿಗೆ ಈ ಜಾಗ ಮೀಸಲು ಎಂಬುದೇನು ಇಲ್ಲ (ಹಣ ಮಾತ್ರ ಕೊಂಡ ಅಂಗಡಿಗೆ ಕೊಡಬೇಕು). ಸಾಮೂಹಿಕವಾಗಿ ಕೈ ತೊಳೆಯುವ ಮತ್ತು ಕುಡಿಯುವ ನೀರಿನ ನಳಗಳಿವೆ. ಥರಾವರಿ ಭಾಷೆ, ಸಂಸ್ಕೃತಿಯ ಜನ ಒಂದೇ ಮಾಡಿನ ಕೆಳಗೆ ಅನ್ನ ಉಣ್ಣುತ್ತಾರೆ, ಒಂದೇ ನೀರು ಕುಡಿದು ಬದುಕುತ್ತಾರೆ. ಅದಕ್ಕಾಗಿ ಕೆಲವೊಂದು ಸಾರಿ ಟೆಕ್ಕ ಮಾರುಕಟ್ಟೆ ಬಹು ಸಂಸ್ಕೃತಿಯ ಮತ್ತು ಮಿಶ್ರ ಸಂಸ್ಕೃತಿಯ ಬದುಕಿನ ರೂಪಕದ ಹಾಗೆ ಕಂಡು ಬಿಡುತ್ತದೆ.ಇದಲ್ಲದೆ ದುಬಾರಿ ಮಾಲ್‌ಗಳು, ಹೋಟೆಲ್ ರೆಸ್ಟೋರೆಂಟ್‌ಗಳು ಚಿನ್ನಾಭರಣದ ಅಂಗಡಿಗಳು,ಜ್ಯೋತಿಷ್ಯ ಶಾಸ್ತ್ರದ ಅಂಗಡಿ,ಕೆಲವು ದೇವಾಲಯ ಮತ್ತು ಮಸೀದಿಗಳು, ಸ್ವಚ್ಛವಾದ ಬೀದಿಗಳು ಮತ್ತು ರಸ್ತೆಗಳು ಲಿಟಲ್‌ಇಂಡಿಯಾವನ್ನು ಅತೀ ಸುಂದರವಾಗಿ ಕಾಣುವಂತೆ ನಿಲ್ಲಿಸಿವೆ.

ಸಿಂಗಾಪುರದ ವಿದೇಶಿ ವಲಸಿಗ ಕಾರ್ಮಿಕರಲ್ಲಿ ಎರಡು ವಿಭಾಗಗಳಿವೆ. ಒಂದು ಫಾರಿನ್ ವರ್ಕಸ್, ಇನ್ನೊಂದು ಫಾರಿನ್ ಟ್ಯಾಲೆಂಟ್ಸ್. ನಾನೀಗ ಹೇಳ ಹೊರಟಿರುವುದು ದಣಿವಿಲ್ಲದೆ ದುಡಿಯುವ ಮೊದಲ ಬಣದ ಬಗ್ಗೆ. ಶನಿವಾರ ಸಂಜೆ ಮತ್ತು ರವಿವಾರ ಮಾತ್ರ ನಿಮಗೆ ಲಿಟಲ್ ಇಂಡಿಯಾದಲ್ಲಿ ಓಡಾಡಲು ಆಗದಷ್ಟು ಜನಸಂದಣಿ ಇರುತ್ತದೆ. ಕಾರಣವಿಷ್ಟೇ, ಸಿಂಗಾಪುರದ ಎಲ್ಲ ಕೂಲಿ ಕಾರ್ಮಿಕರಿಗೂ ಶನಿವಾರದ ಸಂಜೆ ನಂತರ ರಜೆ ಮತ್ತು ಆ ದಿನವೇ ಅವರಿಗೆ ಸಂಬಳವಾಗುತ್ತದೆ. ಎಲ್ಲರೂ ಕೆಲಸ ಮುಗಿಸಿ ಇಲ್ಲಿ ಸಸ್ತಾವಾಗಿ ಅನ್ನಾಹಾರ ಮತ್ತು ಮದ್ಯ ಸಿಗುವ ಕಡೆ ಬೀಡು ಬಿಡುತ್ತಾರೆ. ಇಲ್ಲಿನ ಬೀದಿ ಬದಿಗಳಲ್ಲಿ ಹುಲ್ಲು ಹಾಸಿನ ಮೇಲೆ ಎಲ್ಲಂದರಲ್ಲಿ ಮದ್ಯದ ಬಾಟಲು ಮತ್ತು ಊಟದೊಂದಿಗೆ ಕೂತಿರುವ ಕೂಲಿಕಾರರ ಚಿತ್ರ ತೀರ ಸಾಮಾನ್ಯ. ಹೆಚ್ಚಿನವರು ತಮಿಳು ಕಾರ್ಮಿಕರು. ಇಲ್ಲಿ ಹಳೆಯ ಚೈನಾ ವಿಲ್ಲಾ ಒಂದಿದೆ. ಅದು ಇವರೆಲ್ಲ ಕೂಡುವ ಜಾಗ. ಈ ವಾರದ ಭೇಟಿಯಿಂದಲೇ ಎಷ್ಟೋ ಜನ ಸಂಬಂಧಿಕರಂತೆ ಕಾಣುತ್ತಾರೆ. ಒಂದರ್ಥ ಅವರು ಸಂಬಂಧಿಕರೇ. ಊರು ಬಿಟ್ಟು ಬಂದು ಆನಾಥಪ್ರಜ್ಞೆ ಅನುಭವಿಸುತ್ತಿರುವ ಜನ ಒಬ್ಬರಿಂದ ಒಬ್ಬರಿಗೆ ತೀರ ಬೇರೆ ಆಗಲು ಹೇಗೆ ಸಾಧ್ಯ?. ಅಲ್ಲಿ ಹೊರಗಡೆ ಇರುವ ಟಿವಿಯೊಂದರಲ್ಲಿ ಸಾಮೂಹಿಕವಾಗಿ ನಿಂತು ತಮಿಳು ರಿಯಾಲಿಟಿ ಶೋ ನೋಡುತ್ತಾರೆ, ಎಲ್ಲರೂ ಸೇರಿ ಹರಟೆ ಹೊಡೆಯುತ್ತಾರೆ, ಜಗಳವಾಡುತ್ತಾರೆ. ಅದೊಂದು ಶುದ್ದ ಗಂಡಸರ ಜಗತ್ತು. ಹುಡುಕಿದರೂ ಒಂದು ಹೆಣ್ಣು ಸಿಗುವುದಿಲ್ಲ. ಎಲ್ಲರೂ ಊರು ಬಿಟ್ಟು ಬಂದವರು, ಕೆಲವರು ಅಲ್ಲೇ ಫೋನ್ ಹಿಡಿದು ಬಡಬಡಿಸುತ್ತಿರುತ್ತಾರೆ. ಕೂಗುತ್ತಿರುತ್ತಾರೆ, ಕೆಲವರು ಅಳುತ್ತಿರುತ್ತಾರೆ. ಮತ್ಯಾರೋ ಸಮಾಧಾನ ಮಾಡುತ್ತಿರುತ್ತಾರೆ. ಇದರ ನಡುವೆ ನಿಮಗೆ ಸೆಕ್ಸ್... ಸೆಕ್ಸ್... ಎಂಬ ಪದವು ಹೇರಳವಾಗಿ ಕೇಳಿಸುತ್ತದೆ. ಆ ಕೂಗು ಸೆಕ್ಸ್ ಪಿಂಪ್‌ಗಳದು. ಇದು ಮಾಲು ಮಾರಾಟದ ದೊಡ್ಡ ಅಡ್ಡೆ ಅವರಿಗೆ. ಹೀಗೊಂದು ಮತ್ತೇರಿದ, ಅನಾಥವಾದ ದಾರುಣವಾದ,ಅಸ್ವಸ್ತವಾದ ಆದರೆ ಇನ್ನೂ ಜೀವನ ಪ್ರೀತಿಯನ್ನು ಉಳಿಸಿಕೊಂಡಿರುವ ರಾತ್ರಿಯನ್ನು ಇಲ್ಲಿ ನೀವು ನೋಡಬಹುದು. ಇಲ್ಲಿರುವ ಪ್ರತಿಯೊಬ್ಬನು ದೂರದ ಊರಿನ ಯಾರದೋ ಅಪ್ಪ, ಯಾರದೋ ಅಣ್ಣ , ತಮ್ಮ , ಮಗ ಹೀಗೆ ಏನೇನೋ, ಅಲ್ಲಿನ ಒಳ್ಳೆಯ ಬದುಕಿನ ನೆನಪಲ್ಲಿ ಮತ್ತು ಇಲ್ಲಿನ ಬದುಕಿನೊಂದಿಗೆ ಗುದ್ದಾಡುತ್ತಿರುತ್ತಾರೆ. ಇವರೆಗೆಲ್ಲ ದಿನಕ್ಕೆ ಹೆಚ್ಚೆಂದರೆ ಸಿಗುವುದು ಇಪ್ಪತೈದರಿಂದ ಮೂವತ್ತು ಡಾಲರು ಕೂಲಿ ಸಿಗಬಹುದು. ಇಲ್ಲಿ ದಿನದ ಸರಿಯಾದ ಊಟಕ್ಕೆ 10 ಡಾಲರ್ ಬೇಕು. ಹೆಚ್ಚಿನ ಕೂಲಿಯವರಿಗೆ ಇಲ್ಲಿ ಮನೆಗಳಿರುವುದಿಲ್ಲ. ಅವರು ಕೆಲಸ ಮಾಡುವಲ್ಲೇ ದೊಡ್ಡ ಡೇರೆಗಳಲ್ಲಿ ಮಲಗುತ್ತಾರೆ. ಯಾರೋ ಕೆಲವರು ಶೇರಿಂಗ್ ರೂಮುಗಳಲ್ಲಿ ಅಥವಾ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ಅದರ ಖರ್ಚು ತಿಂಗಳಿಗೆ ಇನ್ನೂರರಿಂದ ಮುನ್ನೂರು ಡಾಲರುಗಳಿಗೆ ಕಡಿಮೆ ಇರುವುದಿಲ್ಲ.ವಾರದ ಪ್ರತಿದಿನ ಬೆಳಗ್ಗೆಯಿಂದ ಸಂಜೆ ತನಕ ಪುರಸೊತ್ತಿಲ್ಲದ ದುಡಿಮೆ. ವಿಶ್ರಮಿಸಲು ಹೆಚ್ಚೇನೂ ಸಮಯ ಸಿಕ್ಕುವುದಿಲ್ಲ. ಆ ಏಕತಾನತೆಯಿಂದ ತಪ್ಪಿಸಿಕೊಳ್ಳಲು ಈ ರಾತ್ರಿಗಳ ಮೊರೆ ಹೋಗುತ್ತಾರೆ. ಇಲ್ಲಿ ನಾನು ಹಾದು ಹೋದಾಗೆಲ್ಲ ನನಗೆ ಆ ದಿನ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗೆಳೆಯ ನೆನಪಾಗುತ್ತಾನೆ.ಮನುಷ್ಯನ ಆಧುನಿಕತೆ ಅದೆಷ್ಟು ಸ್ವಾರ್ಥದ್ದು ಮತ್ತು ಕ್ರೂರವಾದದ್ದು ಎಂದು ಸ್ಪಷ್ಟವಾಗಬೇಕಾದರೆ ಸಿಂಗಾಪುರದ ಬೇರೆ, ನಾಗರಿಕರನ್ನು ಬೇರೆ ಜಾಗಗಳನ್ನು ಲಿಟಲ್ ಇಂಡಿಯಾದೊಂದಿಗೆ ಇಲ್ಲಿನ ವಲಸಿಗ ಕಾರ್ಮಿಕರೊಂದಿಗೆ ತುಲನೆ ಮಾಡಿ ನೋಡಿದರೆ ನಿಮಗೆ ಸ್ಪಷ್ಟ ಚಿತ್ರ ದೊರಕಿಬಿಡುತ್ತದೆ. ಇದರಾಚೆಗೂ ಮನುಷ್ಯ ಬದುಕುವ ತುಡಿತ ಅದೆಷ್ಟು ದೊಡ್ಡದಿರುತ್ತದೆ ಎನ್ನುವುದಕ್ಕೆ ಇಲ್ಲಿನ ಕಾರ್ಮಿಕರೇ ಉದಾಹರಣೆ. ಇತ್ತೀಚೆಗೆ ಇಲ್ಲೊಂದು ಸುದ್ದಿ ಓದಿದೆ. ಲೋಡ್ ಮಾಡುತ್ತಿರುವ ಕಾರ್ಮಿಕನೊಬ್ಬನಿಗೆ ಕೆಲಸದ ವೇಳೆ ಅಪಘಾತವಾಗಿ ಕೈಗೆ 26 ಹೊಲಿಗೆ ಬಿದ್ದಿವೆ. ಅದಕ್ಕವನಿಗೆ ದೊರಕಿರುವುದು 2 ದಿನಗಳ ವೇತನ ಸಹಿತ ರಜೆ ಮಾತ್ರ. ನಂತರ ಕೆಲಸ ಮಾಡಲು ಸಾಧ್ಯವಿಲ್ಲದ್ದಕ್ಕೆ ಅವನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಸದ್ಯಕ್ಕಂತೂ ಅವನು ಯಾವ ಕೆಲಸವನ್ನು ಮಾಡುವ ಸ್ಥಿತಿಯಲ್ಲಿಲ್ಲ. ಅವನಿಗೆ ಸಾಕಷ್ಟು ಇಂಗ್ಲಿಷ್ ಬರುತ್ತದೆ. ಆದ್ದರಿಂದ ಹ್ಯೂಮನ್ ಪವರ್ ಸಚಿವಾಲಯಕ್ಕೆ ಪ್ರಕರಣ ದಾಖಲು ಮಾಡಿ ತನ್ನ ನ್ಯಾಯಕ್ಕಾಗಿ ಅಲೆಯುತಿದ್ದಾನೆ. ಐರನಿ ಎನ್ನುವುದು ಹೇಗಿದೆ ಎಂದರೆ ಕಳೆದ ಆರು ತಿಂಗಳಿಂದ ಅವನ ಮೊಬೈಲ್‌ಗೆ ನಿಮ್ಮ ಪ್ರಕರಣವು ತನಿಖೆಯಲ್ಲಿದೆ ಎಂಬ ಒಂದೇ ತೆರನಾದ ಮೆಸೇಜ್ ಮಾತ್ರ ಬರುತ್ತಲೇ ಇದೆ. ಇಲ್ಲಿನ ಎಲ್ಲ ಕಾರ್ಮಿಕರ ಕೈಯಲ್ಲೂ ಒಂದೊಂದು ಮೊಬೈಲ್ ಇರುತ್ತದೆ. ಕಿವಿಯಲ್ಲಿ ಹೆಡ್ಸೆಟ್ ಕೂಡ ಇರುತ್ತದೆ.

ಜಗತ್ತು ಅದೆಷ್ಟೇ ಪ್ರಗತಿ ಹೊಂದಿದರು, ಅದು ತನ್ನ ದಬ್ಬಾಳಿಕೆಯ ಕ್ರೂರವಾದ ಗುಣದಿಂದ ಬಿಡುಗಡೆ ಹೊಂದುವ ಯಾವ ಲಕ್ಷಣವು ಕಾಣುವುದಿಲ್ಲ. ಸತ್ಯವಾಗಿಯೂ ಜಗತ್ತಿನ ಎಲ್ಲ ದೇಶಗಳಿಗೂ ತನ್ನ ಒಡಲಲ್ಲಿರುವ ಅನಾಗರಿಕತನ, ಕ್ರೌರ್ಯ, ನೀಚತನ ಎಲ್ಲವನ್ನು ಮುಚ್ಚಿಟ್ಟು ಜಗತ್ತಿನ ಮುಂದೆ ತಾನೊಂದು ಅಭಿವೃದ್ಧಿ ಪಥದ,ಸಾಚ, ಘನವಂತ, ಶ್ರೇಷ್ಠ ಸಂಸ್ಕೃತಿಯ, ಜೀವ ಪರವಾದ ದೇಶವೆಂದು ಬಿಂಬಿಸಿಕೊಳ್ಳುವ ದೊಡ್ಡ ವ್ಯಸನವಿರುತ್ತದೆ. ಆಯಾ ದೇಶದ ಪ್ರಭುತ್ವಗಳಿಗೆ ಇದರಲ್ಲಿ ದೊಡ್ಡ ಪಾಲಿದೆ. ಇದರ ನಡುವೆಯೂ ಜೀವ ಪ್ರೀತಿ ಉಳಿಸಿಕೊಂಡು ಬದುಕ್ಕುತ್ತಿರುವ ಅದೆಷ್ಟು ಜೀವಗಳು...!

share
ಕೆ.ಪಿ. ಲಕ್ಷ್ಮಣ್
ಕೆ.ಪಿ. ಲಕ್ಷ್ಮಣ್
Next Story
X