ನಾವು ಯಾರಿಗೂ ಹೆದರುವುದಿಲ್ಲ: ಅಮೆರಿಕಕ್ಕೆ ಪ್ರತ್ಯುತ್ತರ ನೀಡಿದ ಚೀನಾ

ಸಿಂಗಾಪರ, ಜೂನ್ 5: ಅಮೆರಿಕದ ಪ್ರಚೋದಕ ಹೇಳಿಕೆಗೆ ಚೀನಾ ಎದಿರೇಟು ನೀಡಿದ್ದು ಒಂದು ವೇಳೆ ದಕ್ಷಿಣ ಚೀನಾದ ಸಮುದ್ರದ ಕುರಿತ ತನ್ನ ನೀತಿಯಿಂದಾಗಿ ನೆರೆಯ ದೇಶಗಳೊಳಗೆ ಏನಾದರೂ ಅಸಂಬದ್ಧ ಸೃಷ್ಟಿಯಾದರೆ ಅದನ್ನು ಲೆಕ್ಕಿಸುವುದಿಲ್ಲ ಎಂದು ಇಂದು ಚೀನಾ ಖಾರವಾಗಿ ಹೇಳಿದೆ.
ಶಾಂತಿಪೂರ್ಣ ರೀತಿಯಿಂದ ಸಮಸ್ಯೆ ಬಗೆಹರಿಸಬಹುದು: ಸಿಂಗಾಪುರದ ವಾರ್ಷಿಕ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಚೀನಾದ ಎಡ್ಮಿರಲ್ ಸನ್ ಜಿಯಾಂಗೂವೊ ವಿಷಯವನ್ನು ಪ್ರಸ್ತಾಪಿಸಿ ಮಾತಾಡುತ್ತಾ " ಈ ಕುರಿತು ಹೊರದೇಶಗಳು ರಚನಾತ್ಮಕ ಪಾತ್ರವನ್ನು ನಿಭಾಯಿಸಬೇಕಾಗಿದೆ.ಬೇರೆ ರೀತಿಯನ್ನು ಕೈಬಿಡಬೇಕಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಕೆಲವು ದೇಶಗಳು ನೀಡುತ್ತಿರುವ ಪ್ರಚೋದಕ ಹೇಳಿಕೆಗಳಿಂದಾಗಿ ದಕ್ಷಿಣ ಚೀನ ಸಮುದ್ರದ ಕುರಿತ ವಿಷಯ ಕಾವೇರಿದೆ"ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ದಕ್ಷಿಣ ಚೀನ ಸಾಗರದ ಕುರಿತ ಚೀನಾದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಶಾಂತಿ ಪೂರ್ಣ ಮಾತುಕತೆಯಿಂದ ವಿವಾದವನ್ನು ಬಗೆಹರಿಸಬಹುದಾಗಿದೆ. ಚೀನಾದ ಶಾಂತಿಪೂರ್ಣ ವಾತಾವರಣ ನಿರ್ಮಿಸುವ ಪ್ರಯತ್ನಕ್ಕೆ ಸಹಕರಿಸುವಷ್ಟು ಇತರದೇಶಗಳಿಗೆ ಸಹನೆ ಇವೆ ಎಂದು ನಾವು ಭಾವಿಸುತ್ತೇವೆ" ಎಂದು ಎಡ್ಮಿರಲ್ ಜಿಯಾಂಗೂವೊ ಹೇಳಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಎಶ್ಟನ್ ಕಾರ್ಟರ್ ನಿನ್ನೆ ದಕ್ಷಿಣ ಚೀನಾ ದ್ವೀಪದಲ್ಲಿ ಚೀನೀ ನಿರ್ಮಾಣಗಳ ಕುರಿತು ನೀಡಿದ ಎಚ್ಚರಿಕೆ ಕುರಿತು ಪ್ರತಿಕ್ರಿಯಿಸಿದ ಎಡ್ಮಿರಲ್" ನಾವು ಉದ್ವಿಗ್ನತೆಯನ್ನು ಹುಟ್ಟು ಹಾಕುವುದಿಲ್ಲ ಆದರೆ ನಮಗೆ ಯಾವುದೇ ಹೆದರಿಕೆ ಇಲ್ಲ" ಎಂದಿದ್ದಾರೆ. ನಿನ್ನೆ ವಿವಾದಿತ ಜಲಕ್ಷೇತ್ರದಲ್ಲಿ ತನ್ನ ಸೈನ್ಯವನ್ನು ವಿಸ್ತರಿಸುತ್ತಿರುವ ಚೀನಾದ ಪ್ರಕ್ರಿಯೆಯನ್ನು ಪೆಂಟಗಾನ್ ಪ್ರಮುಖ ಕಾರ್ಟರ್ ಆತ್ಮಘಾತುಕ ಅಪಾಯ ಎಂದು ಟೀಕಿಸಿದ್ದರು. ಆದರೂ ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆಯ ನಡೆಸುವ ಕುರಿತು ಕಾರ್ಟರ್ ಪ್ರಸ್ತಾಪಿಸಿದ್ದರು. ಎಡ್ಮಿರಲ್ ಜಿಯಾಂಗೂವೊ ಇದು ಅಮೆರಿಕದ ಶೀತಲ ಯುದ್ಧದ ಮಾನಸಿಕತೆ ಎಂದು ಆರೋಪಿಸಿದ್ದಾರೆ ಹಾಗೂ ಈ ವಿಷಯದಲ್ಲಿ ತನ್ನ ದೇಶ ಶಾಂತಿಪೂರ್ಣ ಪರಿಹಾರವನ್ನು ಬಯಸುತ್ತಿದೆ ಮತ್ತು ನಾವು ಯಾರಿಗೂಹೆದರುವುದಿಲ್ಲ ಎಂದು ಹೇಳಿದ್ದಾರೆ.







