Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೇತಾಜಿ ಪಂಥೀಯರಿಂದ ಮಕ್ಕಳಿಗೂ...

ನೇತಾಜಿ ಪಂಥೀಯರಿಂದ ಮಕ್ಕಳಿಗೂ ಶಸ್ತ್ರಾಸ್ತ್ರ ತರಬೇತಿ!

ಮಥುರಾ ಹಿಂಸಾಚಾರ

ವಾರ್ತಾಭಾರತಿವಾರ್ತಾಭಾರತಿ5 Jun 2016 10:15 PM IST
share
ನೇತಾಜಿ ಪಂಥೀಯರಿಂದ ಮಕ್ಕಳಿಗೂ ಶಸ್ತ್ರಾಸ್ತ್ರ ತರಬೇತಿ!

ಮಥುರಾ, ಜೂ.5: ಮಥುರಾದಲ್ಲಿ ಕಳೆದ ವಾರ ಮಾರಣಾಂತಿಕ ಘರ್ಷಣೆಗಳ ಕೇಂದ್ರವಾಗಿದ್ದ ಪಂಥವೊಂದು ಸಮಾನಾಂತರ ನ್ಯಾಯಾಂಗ ವ್ಯವಸ್ಥೆ, ತನ್ನದೇ ಆದ ಸಂವಿಧಾನ, ಕಾರಾಗೃಹಗಳು ಹಾಗೂ ಸೈನಿಕರ ಹಲವು ತುಕಡಿಗಳನ್ನು ನಡೆಸುತ್ತಿತ್ತು. ಮಕ್ಕಳಿಗೂ ಅದು ಶಸ್ತ್ರಾಸ್ತ್ರ ತರಬೇತಿ ನೀಡಿತ್ತೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

8ರ ಹರೆಯದ ಸಣ್ಣ ಮಕ್ಕಳಿಗೂ ಈ ಪಂಥ ಶಸ್ತ್ರಾಸ್ತ್ರ ತರಬೇತಿ ನೀಡಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿ ಡಿಎಎಫ್‌ಸಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

2014ರಿಂದಲೇ ಅದು 260 ಎಕ್ರೆ ವಿಸ್ತೀರ್ಣದ ಉದ್ಯಾನವನದಲ್ಲಿ ಅಕ್ಷರಶಃ ಪ್ರಜಾಸತ್ತೆಯೊಂದನ್ನು ನಡೆಸುತ್ತಿತ್ತು. ಆ ಇಡೀ ನಿವೇಶನ ಜಗತ್ತಿನಿಂದ ಮುಚ್ಚಲ್ಪಟ್ಟಿತ್ತು.

ಅನಧಿಕೃತ ಕಾಲನಿಯಲ್ಲಿ ವಾಸವಿದ್ದ 9 ಮಕ್ಕಳನ್ನು ನಿನ್ನೆ ನಗರದ ಮಕ್ಕಳ ಮನೆಗೆ ಕಳುಹಿಸಲಾಗಿದೆ. ಎನ್‌ಡಿಟಿವಿಯೊಂದಿಗೆ ಮಾತನಾಡಿದ 9ರ ಹರೆಯದ ಮೂವರು ಮಕ್ಕಳು ಹಿಂಸಾಚಾರದ ರಾತ್ರಿಯ ಭಯಾನಕತೆಯನ್ನು ನೆನಪಿಸಿಕೊಂಡಿವೆ.

ತಾವು ಮರಗಳ ಹಿಂದೆ ಅಡಗಿಕೊಂಡೆವು ಸುತ್ತಲೂ ಬಾಂಬ್ ಹಾಗೂ ಕಲ್ಲುಗಳನ್ನು ಎಸೆಯಲಾಗುತ್ತಿತ್ತು. ಎಲ್ಲೆಲ್ಲೂ ಗುಂಡುಗಳು ಹಾರುತ್ತಿದ್ದವು ಎಂದು ಅಭಿನವ ಎಂಬ ಬಾಲಕ ವಿವರಿಸಿದ್ದಾನೆ. ಮಕ್ಕಳನ್ನು ಮನೆಗೆ ತರುವ ಮುನ್ನ ಅವರನ್ನು ಮಥುರಾದ ಗೋವಿಂದ ನಗರದ ಕಾರಾಗೃಹಕ್ಕೆ ಒಯ್ಯಲಾಗಿತ್ತೆಂದು ಆತ ತಿಳಿಸಿದ್ದಾನೆ.

ತನ್ನ 8 ಹಾಗೂ 12ರ ಹರೆಯದ ಸೋದರರು ಹಾಗೂ ತಾಯಿ ಈಗಲೂ ಕಾರಾಗೃಹದಲ್ಲಿದ್ದಾರೆಂದು ಅಭಿನವ್ ಹೇಳಿದ್ದಾರೆ. ಆದಾಗ್ಯೂ, ಹಿಂಸಾಚಾರದ ವೇಳೆ ಸುತ್ತುವರಿಯಲಾಗಿದ್ದ ಎಲ್ಲ ಮಕ್ಕಳನ್ನೂ ಮಥುರಾ ಹಾಗೂ ಆಗ್ರಾಗಳ ವಿವಿಧ ಮಕ್ಕಳ ಮನೆಗಳಿಗೆ ಕಳುಹಿಸಲಾಗಿದೆಯೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಅವರು ಕಾಳಗವೊಂದರ ಬಗ್ಗೆ ಮಾತನಾಡುತ್ತಿದ್ದರು. ಅವರು ಆಡಳಿತವನ್ನು ಬೈಯುತ್ತಿದ್ದರು ಹಾಗೂ ಜವಾಹಾರ್‌ಬಾಗನ್ನು ಎಂದೂ ತೆರವುಗೊಳಿಸುವುದಿಲ್ಲವೆನ್ನುತ್ತಿದ್ದರೆಂದು ಅಲೋಕ್ ಎಂಬಾತ ತಿಳಿಸಿದ್ದಾನೆ.

ತನ್ನ ಚಿಕ್ಕಮ್ಮನೊಂದಿಗೆ ಜವಾಹರ್ ಬಾಗ್‌ಗೆ ಬಂದಿದ್ದ ಬಾಲಕನೊಬ್ಬನು, ತನ್ನನ್ನು ಇಲ್ಲಿಗೆ ತರುವಂತೆ ಪಂಥದ ನಾಯಕ ರಾಮ್ ವೃಕ್ಷ ಯಾದವ್ ಎಂಬಾತ ತಿಳಿಸಿದ್ದನೆಂದು ಹೇಳಿದ್ದಾನೆ.

ರಾಮಕೃಷ್ಣ ಯಾದವ್ ಹೆಸರಿನ ನೇತಾಜಿ ಇಲ್ಲಿರುವನು. ಅವನು ಭಾರತವನ್ನು ಸ್ವತಂತ್ರಗೊಳಿಸುವನು. ಅವನು ಇಲ್ಲಿಗೆ ಬಂದು ತಮಗೆಲ್ಲರಿಗೂ ಒಂದು ಚಿನ್ನದ ನಾಣ್ಯವನ್ನು ಕೊಡುತ್ತಾನೆ. ಕೇವಲ ಅದು ಮಾತ್ರವೇ ಭಾರತದಲ್ಲಿ ಚಲಾವಣೆಯಾಗುವ ಹಣವಾಗಿದೆಯೆಂದು ಹೇಳಿ ಚಿಕ್ಕಮ್ಮ ತನ್ನನ್ನಿಲ್ಲಿಗೆ ಕರೆತಂದಳೆಂದು ಸಂಕೇತ್ ಎಂಬ ಆ ಬಾಲಕ ತಿಳಿಸಿದ್ದಾನೆ.

ಹಿಂಸಾಚಾಋದ ನೇತೃತ್ವ ವಹಿಸಿದ್ದ ಯಾದವ್ ಘರ್ಷಣೆಯ ವೇಳೆ ಹತನಾಗಿದ್ದಾನೆ. ಮಕ್ಕಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸುವ ಮೊದಲು ಹೆತ್ತವರ ಭೇಟಿಗೆ ಅವಕಾಶ ನೀಡಲಾಗುವುದು. ಯಾರೂ ಬಂಧುಗಳಿರದ ಮಕ್ಕಳು ಮಕ್ಕಳ ಮನೆಯಲ್ಲೇ ಮುಂದುವರಿಯಲಿದ್ದಾರೆಂದು ಮಕ್ಕಳ ಮನೆಯ ಅಧೀಕ್ಷಕರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X