ದೈತ್ಯ ಶಾರ್ಕ್ ದಾಳಿ: ಮಹಿಳೆ ಬಲಿ

ಸಿಡ್ನಿ,ಜೂ.5: ದೋಣಿಯಷ್ಟು ಗಾತ್ರದ ದೈತ್ಯ ಶಾರ್ಕೊಂದು, ಮಹಿಳೆಯೊಬ್ಬಳ ಮೇಲೆ ಆಕ್ರಮಣಗೈದು ಕೊಂದು ಹಾಕಿದ ಬರ್ಬರ ಘಟನೆ, ಆಸ್ಟ್ರೇಲಿಯದ ಪರ್ತ್ ನಗರದ ಸಮುದ್ರಪ್ರದೇಶದಲ್ಲಿ ಶನಿವಾರ ನಡೆದಿದೆ.
60 ವರ್ಷ ವಯಸ್ಸಿನ ಮುಳುಗುಗಾರ್ತಿಯ ಮೇಲೆ ಶಾರ್ಕ್ ಆಕ್ರಮಣ ನಡೆಸಿದ್ದು, ಗಂಭೀರ ಗಾಯಗೊಂಡ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆಂದು ಪಶ್ಚಿಮ ಆಸ್ಟೇಲಿಯದ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆದ ಕೇವಲ ಎರಡು ದಿನಗಳ ಹಿಂದೆ, ಪರ್ತ್‌ನ ಉಪನಗರದ ಸಾಗರ ಪ್ರದೇಶದಲ್ಲಿ, ಸರ್ಫಿಂಗ್ ಕ್ರೀಡೆಯಲ್ಲಿ ತೊಡಗಿದ್ದ ಮಹಿಳೆಯ ಕಾಲನ್ನು ಶಾರ್ಕೊಂದು ಕಡಿದು ತುಂಡರಿಸಿದ್ದರಿಂದ ಆಕೆ ಮುಳುಗಿ ಮೃತಪಟ್ಟಿದ್ದರು.
Next Story





