Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ...

ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ ಇರುವುದಿಲ್ಲ.

ವಾರ್ತಾಭಾರತಿವಾರ್ತಾಭಾರತಿ5 Jun 2016 11:30 PM IST
share
ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ ಇರುವುದಿಲ್ಲ.

ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ ಇರುವುದಿಲ್ಲ.

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹಾಗೆಂದು ಅಬಾರ್ಷನ್ ಮಾಡಿಸೋದು ತಪ್ಪು.
 ---------------------
  ಪೊಲೀಸರ ಪ್ರತಿಭಟನೆ ಒಳ್ಳೆಯ ಬೆಳವಣಿಗೆಯಲ್ಲ.

-ಸದಾನಂದ ಗೌಡ, ಕೇಂದ್ರ ಸಚಿವ

ರಾಜಕಾರಣಿಗಳೆಲ್ಲ ಪ್ರತಿಭಟನೆಯ ಭಾಗವಾಗಿ ತಮ್ಮ ರಾಜೀನಾಮೆಗಳನ್ನು ನೀಡಿದರೆ ಅದೆಷ್ಟು ಚೆನ್ನಾಗಿತ್ತು.
 ---------------------
ಯಡಿಯೂರಪ್ಪ ವ್ಯಕ್ತಿತ್ವದಲ್ಲೇ ಬಿಜೆಪಿಯ ಶಕ್ತಿ ಅಡಗಿದೆ

-ಜನಾರ್ದನ ರೆಡ್ಡಿ, ಮಾಜಿ ಸಚಿವ

ಮೊದಲು ಜನಾರ್ದನ ರೆಡ್ಡಿಯ ಹಣದಲ್ಲಿ ಅಡಗಿತ್ತು ಎಂದು ನಾಯಕರು ನಂಬಿದ್ದರೇ?
---------------------
 ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್ ಮುಕ್ತ ರಾಜ್ಯ

-ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

  ಮಂಗಳೂರು ಮುಕ್ತ ಕಾಂಗ್ರೆಸ್ ಮಾಡಿದವರಿಂದ ಈ ಭವಿಷ್ಯವೇ?
---------------------
ನಾನು ಪಾಪದ ಹಾದಿ ತುಳಿಯುವುದಿಲ್ಲ

 -ನರೇಂದ್ರ ಮೋದಿ, ಪ್ರಧಾನಿ

ಸದಾ ವಿಮಾನದಲ್ಲಿ ಹಾರಾಡುವವರಿಗೆ ತುಳಿಯುವುದಕ್ಕೆ ಅವಕಾಶವಾದರೂ ಎಲ್ಲಿದೆ?
---------------------
                           ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನಕ್ಕೆ ದಿಲ್ಲಿಗೆ ಗುರಿಯಿಡಲು ಐದು ನಿಮಿಷ ಸಾಕು

 -ಡಾ.ಅಬ್ದುಲ್ ಖಾದರ್ ಖಾನ್,ಪಾಕ್ ಅಣು ಯೋಜನೆಯ ಪಿತಾಮಹ
  
ಗುರಿಯಿಲ್ಲದ ದೇಶದ ಹಗಲು ಗನಸು. 
---------------------
ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಆಸ್ತಿಕರಾಗುತ್ತಿರುವುದು ಸಂತೋಷದ ವಿಷಯ 

-ಕೆ.ಎಸ್. ಈಶ್ವರಪ್ಪ, ವಿಪಕ್ಷ ನಾಯಕ


 ನಿಮ್ಮ ಆರತಿಯ ತಟ್ಟೆಗೇನಾದರೂ ದಕ್ಷಿಣೆ ಬೀಳಬಹುದು ಎಂಬ ಆಸೆಯೇ?
---------------------
ಇನ್ನು ಮುಂದೆ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಮಾಡುವಂತಹ ಹೇಳಿಕೆಗಳನ್ನು ನೀಡುವುದಿಲ್ಲ.

 -ಎಚ್.ಆಂಜನೇಯ, ಸಚಿವ


ಬರೇ ಸಿದ್ದರಾಮಯ್ಯ ಮಾತ್ರ ಮುಜುಗರ ಪಡಲಿ ಎನ್ನುವ ಉದ್ದೇಶವೋ?
---------------------
ಕಾಂಗ್ರೆಸ್ 60 ವರ್ಷದಲ್ಲಿ ಮಾಡದ ಅಬಿವೃದ್ಧಿಯನ್ನು ಬಿಜೆಪಿ 2 ವರ್ಷದಲ್ಲಿ ಮಾಡಿದೆ- 

-ವಿ.ಸೋಮಣ್ಣ, ಮಾಜಿ ಸಚಿವ

ಯಾವ ದೇಶದ ಅಭಿವೃದ್ಧಿ ಎನ್ನುವುದನ್ನೂ ವಿವರಿಸಿದರೆ ಚೆನ್ನಾಗಿತ್ತು. 
---------------------
ಮೋದಿಯದ್ದು ಯು ಟರ್ನ್ ಸರಕಾರ

 -ರಮಾನಾಥ ರೈ, ಸಚಿವ

ಜಶೋದಾ ಬೆನ್ ದೆವ್ವದ ಪಾತ್ರ ನಿರ್ವಹಿಸಬಹುದು ಎನ್ನುವುದು ಯೂ ಟರ್ನ್ ಚಿತ್ರ ನೋಡಿದವರ ಅನಿಸಿಕೆ. 
---------------------
  ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಆ ಪಕ್ಷದವರೇ ಸಾಕು

-ಸಿ.ಎಂ. ಉದಾಸಿ, ಮಾಜಿ ಸಚಿವ 

ಬಿಜೆಪಿಯನ್ನು ಆ ಪಕ್ಷದವರೇ ಮುಕ್ತಗೊಳಿಸಿದ ಹಾಗೆ. 
---------------------
ನನ್ನ ಮೊದಲ ಶತ್ರು ಕಾಂಗ್ರೆಸ್

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನಿಮ್ಮ ಮಾತು ಕೇಳಿ ಬಿಜೆಪಿ ನಾಚಿ ನುಲಿಯಿತು.
 ---------------------
ಶೀಘ್ರದಲ್ಲಿಯೇ ಕನ್ನಡ ಕಲಿಯುವೆ

-ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
  
ಜೊತೆಗೆ ಬೆಂಗಳೂರಿನಲ್ಲಿರುವ ಕನ್ನಡಿಗರಿಗೂ ಕನ್ನಡ ಕಲಿಸಿ.
 ---------------------
  ನರೇಂದ್ರ ಮೋದಿ ಭಾರತದ ಪ್ರಧಾನಿ, ಚಕ್ರವರ್ತಿಯಲ್ಲ

-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ  

ತಾವು ಯುಪಿಎ ಅಧ್ಯಕ್ಷೆ. ಭಾರತದ ಪ್ರಧಾನಿಯಲ್ಲ ನೆನಪಿಡಿ.
 ---------------------
  ಪೊಲೀಸರೂ ಮನುಷ್ಯರೇ

-ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

  ಜನಸಾಮಾನ್ಯರು ಮಾತ್ರ ಪ್ರಾಣಿಗಳು ಎಂಬ ಅಭಿಪ್ರಾಯವೇ?
---------------------
  ನಮಗಿಂದು ಪ್ರಜಾ ಸೇವಕರು ಬೇಕು

-ನ್ಯಾ. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

  ವಿಧಾನಸೌಧದ ಸಂತೆಯಲ್ಲಿ ಮಾರಾಟಕ್ಕಿದ್ದಾರೆ. ಬೇಕಾದರೆ ಕೊಂಡುಕೊಳ್ಳಬಹುದು.
---------------------
 ಮುಸ್ಲಿಂ ಯುವಕರನ್ನು ಬಂಧಿಸಿ ಅವರ ವಿರುದ್ಧ ಭಯೋತ್ಪಾದನೆಯ ಸುಳ್ಳು ಕೇಸು ಹೂಡುತ್ತಿರುವುದು ಕಳವಳಕಾರಿ ಸಂಗತಿ

-ಡಿ.ವಿ. ಸದಾನಂದ ಗೌಡ , ಕೇಂದ್ರ ಸಚಿವ

  ಅಂದರೆ ನೇರವಾಗಿ ಗಲ್ಲಿಗೇರಿಸುವ ಉದ್ದೇಶವೇ?
---------------------
  ಮೋದಿ ಜಾಗತಿಕ ಮಟ್ಟದ ನಾಯಕ

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

  ಹಾಗಾದರೆ ರಾಜ್ಯಸಭೆಗೆ ನೀವು ಲಂಡನ್‌ನಿಂದ ಸ್ಪರ್ಧಿಸಬಹುದಲ್ಲ?
---------------------
ಸಿಎಂ ಸಿದ್ದರಾಮಯ್ಯರಿಂದ ಪ್ರಜಾಪ್ರಭುತ್ವದ ಕಗ್ಗೊಲೆ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

  ಚಾಕುವಿನಲ್ಲಿ ನಿಮ್ಮ ಕೈ ಗುರುತುಗಳಿವೆಯಂತೆ.
---------------------
ಅಮೆರಿಕದ ಮಾಧ್ಯಮಗಳಿಗೆ ಪ್ರಾಮಾಣಿಕತೆಯೇ ಇಲ್ಲ
-ಡೊನಾಲ್ಡ್ ಟ್ರಂಪ್
  ಪ್ರಾಮಾಣಿಕತೆ ಯಾವ ಕಂಪೆನಿಯ ಜಾಹಿರಾತು?
---------------------
ಸಿದ್ದರಾಮಯ್ಯರಿಗೆ ಭ್ರಷ್ಟಾಚಾರ ನಿರ್ಮೂಲನೆಗಿಂತ ಜೆಡಿಎಸ್ ನಿರ್ನಾಮವೇ ಮುಖ್ಯವಾಗಿದೆ 

-ದೇವೇಗೌಡ, ಮಾಜಿ ಪ್ರಧಾನಿ

ಬಹುಶಃ ಭ್ರಷ್ಟಾಚಾರದ ಮೂಲವೇ ಜೆಡಿಎಸ್ ಎನ್ನುವುದನ್ನು ಅವರು ಕಂಡುಕೊಂಡಿರಬೇಕು.
 ---------------------
ಶಾಸಕರ ಓಟಿಗಾಗಿ ಡೀಲ್ ಪ್ರಕರಣ ಕೇಳಲಿಕ್ಕೇ ಅಸಹ್ಯವಾಗುತ್ತಿದೆ

-ತಾರಾ, ಚಿತ್ರನಟಿ

  ಈ ಸಂಭಾಷಣೆ ಯಾವ ಚಿತ್ರದ್ದು ಎಂದು ಹೇಳುತ್ತೀರಾ?
---------------------
ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಶಾಸಕರು ಹಣದ ಬೇಡಿಕೆ ಇಟ್ಟಿರುವುದು ನಾಚಿಕೆಗೇಡಿನ ಸಂಗತಿ

-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ 

ಲೋಕಸಭೆಯ ಚುನಾವಣೆಯಲ್ಲಿ ಮಾತ್ರ ಸಾಕು ಅಂತೀರಾ?
---------------------
ಮುಂದಿನ 15 ವರ್ಷ ಮೋದಿಯೇ ಪ್ರಧಾನಿ

-ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಮತ್ತು ಆ 15 ವರ್ಷ ಅವರ ಬಾಲವಾಗಿ ಅಂಟಿಕೊಳ್ಳುವ ಆಸೆಯೇ?
---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X