ಬೆಂಗಳೂರು ಜನತೆ ತಲಾ 2 ಗಿಡ ನೆಡಬೇಕು: ಸಿದ್ದರಾಮಯ್ಯ ಕರೆ
‘ಪರಿಸರ ಪ್ರಶಸ್ತಿ ಪ್ರದಾನ’ ಸಮಾರಂಭ

ಬೆಂಗಳೂರು, ಜೂ. 5: ಬೆಂಗಳೂರು ನಗರದ ಪರಿಸರವನ್ನು ಸುಸ್ಥಿರವಾಗಿ ಇಡಬೇಕಾದರೆ ನಗರದ ಪ್ರತಿಯೊಬ್ಬ ನಾಗರಿಕರು ತಲಾ ಎರಡು ಗಿಡಗಳನ್ನು ನೆಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ರವಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ಕಠೀರವ ಒಳಾಂಗಣ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ‘ಪರಿಸರ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿಯನ್ನು ಮೀರಿದೆ. ಜನಸಂಖ್ಯೆ ಏರಿಕೆಯ ಜೊತೆ-ಜೊತೆಗೆ ವಾಹನಗಳ ಸಂಖ್ಯೆ 60ಸಾವಿರಕ್ಕೂ ಹೆಚ್ಚಿದೆ. ಇದ ರಿಂದಾಗಿ ಪರಿಸರ ದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಇದನ್ನು ತಡೆಗಟ್ಟಬೇಕಾದರೆ ನಗರದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ತಲಾ ಎರಡು ಗಿಡಗಳನ್ನು ನೆಡಬೇಕೆಂದು ಸಿದ್ದರಾಮಯ್ಯ ತಿಳಿಸಿದರು.
ಗುಬ್ಬಚ್ಚಿಗಳು ಮಾಯ:
ನಾವು ಬಾಲ್ಯದಲ್ಲಿರಬೇ ಕಾದರೆ ಗುಬ್ಬಚ್ಚಿಗಳು ಹೆಚ್ಚಾಗಿದ್ದವು. ಆ ದಿನಗಳಲ್ಲಿ ಜೋಳದ ತೋಟಗಳಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಗುಬ್ಬಚ್ಚಿ ಗಳನ್ನು ಓಡಿಸುವುದು ನಮಗೆ ಮುಖ್ಯ ಕೆಲಸ ವಾಗಿತ್ತು. ಆದರೆ, ಈಗ ಗುಬ್ಬಚ್ಚಿಗಳ ಕುರುಹು ಇಲ್ಲದಂತೆ ಮಾಯವಾಗಿದೆ. ಮಾನವನ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಪರಿಸರದ ಜೊತೆಗೆ ಪ್ರಾಣಿ, ಪಕ್ಷಿಗಳನ್ನು ನಾಶ ಮಾಡುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆಹಾರದ ದುರ್ಬಳಕೆ ಬೇಡ: ಬಡವರಿಗೆ ಹಾಗೂ ಹಸಿದವರಿಗೆ ಮಾತ್ರ ಆಹಾರದ ಮಹತ್ವ ತಿಳಿಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ವೈಭವೋಪೇತ ಕಾರ್ಯ ಗಳಿಂದಾಗಿ ಲಕ್ಷಾಂತರ ರೂ.ವೌಲ್ಯದ ಆಹಾರ ದುರ್ಬಕೆಯಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಆಹಾರದ ಬಳಕೆಯ ಕುರಿತು ಜಾಗೃತಿ ಅಗತ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು.
8 ಕೋಟಿ ಗಿಡ: 2016-17ನೆ ಸಾಲಿನಲ್ಲಿ 8 ಕೊಟಿ ಗಿಡ ಗಳನ್ನು ನೆಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ಜೊತೆಗೂಡಿ ಗಿಡಗಳನ್ನು ನೆಡುವಂತಹ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಕೆರೆಗಳಿದ್ದವು. ಅಭಿವೃದ್ಧಿಯ ನೆಪದಲ್ಲಿ ಹಾಗೂ ಒತ್ತುವರಿ ದಾರರ ಉಪಟಳದಿಂದಾಗಿ ಕೆರೆಗಳು ಅಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಕೆರೆ ಒತ್ತವರಿದಾರರನ್ನು ಗುರುತಿಸಿ ಕೆರೆಯ ಜಾಗವನ್ನು ಪುನಃ ವಾಪಾಸ್ ಪಡೆಯಲು ಸರ ಕಾರ ಸಮಿತಿಯೊಂದನ್ನು ರಚಿಸಿದೆ. ಯಾವುದೇ ಕಾರಣ ಕ್ಕೂ ಕೆರೆಯ ಜಾಗವನ್ನು ದುರ್ಬಳಕೆ ಮಾಡಲು ಬಿಡು ವುದಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಪರಿಸರ ಇಲಾಖೆ ಸಚಿವ ಬಿ.ರಮಾನಾಥ ರೈ ಮಾತ ನಾಡಿ, ಮಾನವನ ದುರಾಸೆಯಿಂದಾಗಿ ಪರಿಸರ ಮಾಲಿನ್ಯ ವಾಗುತ್ತಿದೆ. ವಾತಾವರಣದಲ್ಲಿ ಉಷ್ಣಾಂಶ ವಿಪರೀತ ವಾಗಿ ಹೆಚ್ಚಾಗುತ್ತಿದೆ. ಇದು ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2015-16ನೆ ಸಾಲಿನ ಪರಿಸರ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರದ ಗುಂಪು ಮರದ ಆನಂದ್ ಕುಮಾರ್, ಟಿ.ನರಸೀಪುರದ ಡಾ.ಚಂದ್ರ, ಹುಬ್ಬಳ್ಳಿಯ ಲಿಂಗರಾಜುಗೆ ಪ್ರದಾನ ಮಾಡಲಾಯಿತು. ಈ ವೇಳೆ ವಾರ್ತಾ ಸಚಿವ ಆರ್.ರೋಷನ್ ಬೇಗ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯಉಗ್ರಪ್ಪ, ಮಾಜಿ ಸಚಿವಪಿ.ಜಿ.ಆರ್.ಸಿಂಧ್ಯಾ, ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಮ ಚಂದ್ರ ಮತ್ತಿತರರಿದ್ದರು.
ಡಿವೈಎಸ್ಪಿ ಅನುಪಮಾ ರಾಜೀನಾಮೆ ಬಗ್ಗೆ ಗೊತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜೂ. 5: ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜಿನಾಮೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ನಗರದ ಕಂಠೀರವ ಕ್ರೀಡಾಂಗಣ ದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಅನುಪಮಾ ‘ಫೇಸ್‌ಬುಕ್’ನಲ್ಲಿ ಏನು ಬರೆದುಕೊಂಡಿದ್ದಾರೆಂಬುದು ಕೂಡ ನನಗೆ ತಿಳಿದಿಲ್ಲ. ಈ ಬಗ್ಗೆ ಇದೀಗ ಏನನ್ನು ಪ್ರತಿಕ್ರಿಯೆ ನೀಡಲಾರೆ ಎಂದು ನಿರಾಕರಿಸಿದರು.
ಅನುಪಮಾ ಶೆಣೈ ತಮ್ಮ ಫೇಸ್‌ಬುಕ್ ಖಾತೆ ಯಲ್ಲಿ ‘ರಮ್ ರಾಜ್ಯ’ ಎಂದು ಬರೆದು ಕೊಂಡಿರು ವುದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಿದ್ಧರಾಮಯ್ಯ, ತಾನು ಅವರ ಫೇಸ್‌ಬುಕ್ ಖಾತೆಯನ್ನು ನೋಡಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಆದುದರಿಂದ ನಾನೇನು ಉತ್ತರಿಸಲಾರೆ ಎಂದು ತಿಳಿಸಿದರು.







