ವರ್ಜಿನ್ ಐಲ್ಯಾಂಡ್ಸ್: ಹಿಲರಿ ಜಯಭೇರಿ
ವಾಶಿಂಗ್ಟನ್,ಜೂ.5: ಅಮೆರಿಕದ ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗಾಗಿ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ ಶನಿವಾರ ನಡೆದ ಪ್ರೈಮರಿ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಭರ್ಜರಿ ವಿಜಯಗಳಿಸಿದ್ದಾರೆ. ವರ್ಜಿನ್ ಐಲ್ಯಾಂಡ್ಸ್‌ನಲ್ಲಿ ಎಲ್ಲಾ ಏಳು ಪ್ರತಿನಿಧಿಗಳ ಬೆಂಬಲವನ್ನು ಪಡೆದುಕೊಂಡಿರುವ ಅವರು ಡೆಮಾಕ್ರಾಟ್ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟ್ ಅಭ್ಯರ್ಥಿಯಾಗಿ ಆಯ್ಕೆಯಾಗಲು ಒಟ್ಟು 2383 ಪ್ರತಿನಿಧಿಗಳ ಬೆಂಬಲದ ಅಗತ್ಯವಿದ್ದು, ಹಿಲರಿಗೆ ಇನ್ನು ಕೇವಲ 60 ಪ್ರತಿನಿಧಿಗಳ ಬೆಂಬಲವಷ್ಟೇ ಬೇಕಾಗಿದೆ.
ವರ್ಜಿನಿಯಾ ಐಲ್ಯಾಂಡ್ಸ್ ಚುನಾವಣೆಯಲ್ಲಿ ಹಿಲರಿ 84.2 ಶೇ. ಮತಗಳನ್ನು ಪಡೆದಿದ್ದರೆ, ಬರ್ನಿ ಸ್ಯಾಂಡರ್ಸ್‌ಗೆ ಕೇವಲ 12.2 ಶೇ. ಮತಗಳು ದೊರಕಿವೆ. ಡೆಮಾಕ್ರಾಟ್ ಪಕ್ಷದ ಪ್ರಾಥಮಿಕ (ಪ್ರೈಮರಿ) ಹಾಗೂ ಶೃಂಗಸಭೆ (ಕಾಕಸ್) ಚುನಾವಣೆಗಳಲ್ಲಿ ಒಟ್ಟಾರೆಯಾಗಿ ಕ್ಲಿಂಟನ್‌ಗೆ 1776 ಹಾಗೂ ಸ್ಯಾಂಡರ್ಸ್ 1501 ಪ್ರತಿನಿಧಿಗಳ ಬೆಂಬಲ ದೊರೆತಿದೆ.
Next Story





