ಕನ್ಹಯ್ಯ ಮೇಲೆ ದಾಳಿಗೆ ಯತ್ನಿಸಿದವನಿಂದ ಅಮಿತ್ ಶಾ ಜೊತೆ ಸೆಲ್ಫಿ..!
![ಕನ್ಹಯ್ಯ ಮೇಲೆ ದಾಳಿಗೆ ಯತ್ನಿಸಿದವನಿಂದ ಅಮಿತ್ ಶಾ ಜೊತೆ ಸೆಲ್ಫಿ..! ಕನ್ಹಯ್ಯ ಮೇಲೆ ದಾಳಿಗೆ ಯತ್ನಿಸಿದವನಿಂದ ಅಮಿತ್ ಶಾ ಜೊತೆ ಸೆಲ್ಫಿ..!](https://www.varthabharati.in/sites/default/files/images/articles/2016/06/6/manas-deka-759.jpg)
ಪುಣೆ, ಜೂ.6: ಜೆಎನ್ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ತನ್ನ ಸ್ಮಾರ್ಟ್ಫೋನ್ನಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದಾನೆ.ಇದರೊಂದಿಗೆ ಆರೋಪಿಯು ಬಿಜೆಪಿಯ ಕುಮ್ಮಕ್ಕಿನಿಂದಲೇ ಕನ್ಹಯ ಕುಮಾರ್ ಮೇಲೆ ಹಲ್ಲೆ ನಡೆಸಿರುವ ಗುಮಾನಿ ವ್ಯಕ್ತವಾಗಿದೆ.
ಕಳೆದ ಎಪ್ರಿಲ್ 24ರಂದು ಪುಣೆಯಲ್ಲಿ ಕನ್ಹಯ್ಯ ಕುಮಾರ್ ವಿಮಾನದಿಂದ ಇಳಿಯುತ್ತಿದ್ದಾಗ ಅವರ ಮೇಲೆ ಮಾನಸ್ ದೆಕಾ ಎಂಬಾತನು ಹಲ್ಲೆ ನಡೆಸಲು ಯತ್ನಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಆರೋಪಿ ಮಾನಸ್ ದೆಕಾ ರವಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದಾಗ ಅವರನ್ನು ಭೇಟಿಯಾಗಿದ್ದನು. ಬಳಿಕ ಅವರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾನೆ. ಈತ ಬಿಜೆಪಿಯ ಬೆಂಬಲಿಗ ಎಂದು ಹೇಳಲಾಗಿದೆ.
Next Story