ಜೂ. 8,9ರಂದು ಯುನಿವೆಫ್ನಿಂದ ರಂಝಾನ್ ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಜೂ.7: ಯುನಿವೆಫ್ ಕರ್ನಾಟಕ ಇದರ ಮಂಗಳೂರು ಶಾಖೆಯ ವತಿಯಿಂದ ರಂಝಾನ್ ಪ್ರಭಾಷಣ ಕಾರ್ಯಕ್ರಮವು ಜೂನ್ 8 ಮತ್ತು 9ರಂದು ಳ್ನೀರ್ನ ದಾರುಲ್ ಇಲ್ಮ್ನಲ್ಲಿರುವ ಅಲ್ ವಹ್ದಃ ಆಡಿಟೋರಿಯಂನಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರವಾದಿಯ (ಸ) ಭವಿಷ್ಯವಾಣಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ದಿನಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಝುಹರ್ ನಮಾಝ್ನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸ್ತ್ರೀಯರಿಗೆ ಪ್ರತ್ಯೇಕ ಪರ್ದಾ ಸಹಿತ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುನಿವೆ್ ಮಂಗಳೂರು ಶಾಖಾಧ್ಯಕ್ಷ ನೌಲ್ ಹಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story